ಝೈದ್ ಖಾನ್- ಅನಿಲ್ ಕುಮಾರ್ ಚಿತ್ರಕ್ಕೆ ಆಶ್ರಿತ್ ಸಿನಿಮಾಸ್ ಬೆಂಬಲ, ಶೀಘ್ರದಲ್ಲೇ ಟೈಟಲ್ ಅನಾವರಣ
ಬನಾರಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಝೈದ್ ಖಾನ್ ಇದೀಗ ಉಪಾಧ್ಯಕ್ಷ ಸಿನಿಮಾ ನಿರ್ದೇಶಕರಾದ ಅನಿಲ್ ಕುಮಾರ್ ಅವರೊಂದಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ವ್ಯಾಪಕ ಕುತೂಹಲ ಹುಟ್ಟುಹಾಕಿದೆ.

ಬನಾರಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಝೈದ್ ಖಾನ್ ಇದೀಗ ಉಪಾಧ್ಯಕ್ಷ ಸಿನಿಮಾ ನಿರ್ದೇಶಕರಾದ ಅನಿಲ್ ಕುಮಾರ್ ಅವರೊಂದಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ವ್ಯಾಪಕ ಕುತೂಹಲ ಹುಟ್ಟುಹಾಕಿದೆ.
ಪೋಸ್ಟರ್ ಇದೊಂದು ರೊಮ್ಯಾಂಟಿಕ್ ಸಿನಿಮಾ ಎನ್ನುವ ಸುಳಿವು ನೀಡುತ್ತಿದ್ದು, ಝೈದ್ ಖಾನ್ ವಿಭಿನ್ನವಾಗಿ ಕಂಡುಬಂದಿದ್ದಾರೆ. ನಾಯಕಿಯ ಮುಖ ಅರ್ಧ ಕಾಣಿಸುತ್ತಿದೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿರುವ ಝೈದ್, ನಮ್ಮ ಮತ್ತೊಂದು ವಿಭಿನ್ನ ಪ್ರಯತ್ನ.. ನಿಮ್ಮ ಆಶೀರ್ವಾದವಿರಲಿ. ಶೀಘ್ರದಲ್ಲೇ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಅನಾವರಣಗೊಳಿಸಲಾಗುವುದು ಎಂದು ಬರೆದಿದ್ದಾರೆ.
ಯುಗಾದಿ ಹಬ್ಬದಂದು ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಪೋಸ್ಟರ್ ಚಿತ್ರದ ಸಂಭಾವ್ಯ ಥೀಮ್ ಮತ್ತು ಕಥಾಹಂದರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ.
ಅನಿಲ್ ಕುಮಾರ್ ಅವರೇ ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರತಂಡ ನಿರ್ಮಾಣ ಸಂಸ್ಥೆ ಮತ್ತು ಪ್ರಮುಖ ತಂತ್ರಜ್ಞರ ಬಗ್ಗೆ ವಿವರಗಳನ್ನು ಪ್ರಕಟಿಸಿದೆ. ಅದರಂತೆ, ಝೈದ್ ಖಾನ್ ಅವರ ಎರಡನೇ ಸಿನಿಮಾವನ್ನು ಆಶ್ರಿತ್ ಸಿನಿಮಾಸ್ ನಿರ್ಮಾಣ ಮಾಡುತ್ತಿದೆ. ಚಿತ್ರದ ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ಜೆಎಸ್ ವಾಲಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಂಕಲನಕಾರ ಕೆಎಂ ಪ್ರಕಾಶ್ ಮತ್ತು ಸ್ಟಂಟ್ ಮಾಸ್ಟರ್ ರವಿವರ್ಮ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



