ಸಿನಿಮಾ ಸುದ್ದಿ

ದರ್ಶನ್ ಸರ್‌ಗೂ ಒಬ್ಬ ಮಗ ಇದಾರೆ, ರೇಣುಕಾಸ್ವಾಮಿಗೂ ಕುಟುಂಬವಿದೆ: ಮೊದಲ ಬಾರಿ ಧ್ರುವ ಸರ್ಜಾ ಪ್ರತಿಕ್ರಿಯೆ

ಯಾರೋ ಒಬ್ಬರು ನೋವಲ್ಲಿದ್ದಾರೆ. ಯಾರೋ ಕುಗ್ಗಿದ್ದಾರೆ ಅಂತ ನಾವು ಏನೇನೋ ಮಾತನಾಡೋಕೆ ಆಗಲ್ಲ. ಗುಂಪಲ್ಲಿ ಗೋವಿಂದ ನಂದು ಒಂದಿರಲಿ ಅಂತ ನಾನೇನೇನೋ ಮಾತನಾಡಲ್ಲ- ಧ್ರುವ ಸರ್ಜಾ

ದರ್ಶನ್ ಸರ್‌ಗೂ ಒಬ್ಬ ಮಗ ಇದಾರೆ, ರೇಣುಕಾಸ್ವಾಮಿಗೂ ಕುಟುಂಬವಿದೆ: ಮೊದಲ ಬಾರಿ ಧ್ರುವ ಸರ್ಜಾ ಪ್ರತಿಕ್ರಿಯೆ
ಧ್ರುವ ಸರ್ಜಾ ಮತ್ತು ದರ್ಶನ್
Published On :

ಧ್ರುವ ಸರ್ಜಾ ನಟನೆಯ ಪ್ಯಾನ್-ಇಂಡಿಯಾ ಚಿತ್ರ ಮಾರ್ಟಿನ್ ಅಕ್ಟೋಬರ್ 11 ರಂದು ಮತ್ತು ಡಿಸೆಂಬರ್‌ನಲ್ಲಿ ಕೆಡಿ ದಿ ಡೆವಿಲ್ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದೇ ವೇಳೆ ಮೊದಲ ಬಾರಿಗೆ ಧ್ರುವ ಸರ್ಜಾ ದರ್ಶನ್ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತಾನಾಡಿದ್ದಾರೆ. ಭಾನುವಾರದ ತಮ್ಮ ಸಾರ್ವಜನಿಕ ಸಭೆಯಲ್ಲಿ ಮಾಧ್ಯಮವೊಂದಕ್ಕೆ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.

ಯಾರೋ ಒಬ್ಬರು ನೋವಲ್ಲಿದ್ದಾರೆ. ಯಾರೋ ಕುಗ್ಗಿದ್ದಾರೆ ಅಂತ ನಾವು ಏನೇನೋ ಮಾತನಾಡೋಕೆ ಆಗಲ್ಲ. ಗುಂಪಲ್ಲಿ ಗೋವಿಂದ ನಂದು ಒಂದಿರಲಿ ಅಂತ ನಾನೇನೇನೋ ಮಾತನಾಡಲ್ಲ ಎಂದಿರುವ ಧ್ರುವ ಸರ್ಜಾ, ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ಅವರಿಗೂ ಒಂದು ಫ್ಯಾಮಿಲಿ ಇದೆ. ರೇಣುಕಾ ಸ್ವಾಮಿ ಅವರಿಗೂ ಒಂದು ಕುಟುಂಬ ಇದೆ ಎಂದಿದ್ದಾರೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ , ಮೊದಲು ನಿರ್ಧಾರವಾಗಲಿ.. ನಾವು ಏನೇನೋ ಮಾತನಾಡುವುದು ಬೇಡ ಅಂದಿದ್ದಾರೆ. ಇದೇ ಸಮಯದಲ್ಲಿ ರೇಣುಕಾಸ್ವಾಮಿ ಅವರಿಗೆ ನ್ಯಾಯ ಸಿಗಬೇಕು ಎಂದು ಕೂಡ ಹೇಳಿದ್ದಾರೆ.

ಎ.ಪಿ ಅರ್ಜುನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮಾರ್ಟಿನ್' ಸಿನಿಮಾ ಮೂಡಿ ಬರಲಿದೆ. ಕಳೆದ ವರ್ಷ ಬಂದಿದ್ದ ಟೀಸರ್ ಹಿಟ್ ಆಗಿತ್ತು. ಪ್ರೇಕ್ಷಕರ ಪ್ರತಿಕ್ರಿಯೆಯ ಆಧಾರದ ಮೇಲೆ ನಾವು ಶೀಘ್ರದಲ್ಲೇ ಇಂಟ್ರುಡಕ್ಷನ್ ಹಾಡು ಅಥವಾ ಮೊದಲ ಟ್ರೈಲರ್ ಅನ್ನು ಅನಾವರಣಗೊಳಿಸಲು ಯೋಜಿಸಿದ್ದೇವೆ ಎಂದು ನಿರ್ದೇಶಕ ಎಪಿ ಅರ್ಜುನ್ ತಿಳಿಸಿದ್ದಾರೆ.

ಆ್ಯಕ್ಷನ್ ಡ್ರಾಮಾ ಎಂದು ಬಿಂಬಿಸಲಾದ ಮಾರ್ಟಿನ್, ಶೂಟಿಂಗ್‌ಗಾಗಿ ಸಾಕಷ್ಟು ಸಮಯವನ್ನು ತೆಗೆದುಕೊಂಡಿದೆ, ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್‌ನಲ್ಲಿದೆ. ಧ್ರುವ ಸರ್ಜಾ ಅವರ ಸಂಬಂಧಿ, ಅರ್ಜುನ್ ಸರ್ಜಾ, ಮಾರ್ಟಿನ್ ಸಿನಿಮಾಗೆ ಕಥೆ ಬರೆದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮಾರ್ಟಿನ್ ಬಿಡುಗಡೆಯಾಗುತ್ತಿದೆ.

ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಮತ್ತು ಮಣಿ ಶರ್ಮಾ ಸಂಗೀತವಿದೆ. ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಸಾಹಸ ದೃಶ್ಯಗಳನ್ನು ಸ್ಟಂಟ್ ಮಾಸ್ಟರ್‌ಗಳಾದ ರಾಮ್-ಲಕ್ಷ್ಮಣ್ ಮತ್ತು ರವಿವರ್ಮ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ವೈಭವಿ ಶಾಂಡಿಲ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ಅನ್ವೇಶಿ ಜೈನ್, ಸುಕೃತಾ ವಾಗ್ಲೆ, ರೂಬಿಲ್ ಮೊಸ್ಕ್ವೆರಾ, ಅಚ್ಯುತ್ ಕುಮಾರ್, ಮತ್ತು ಮಾಳವಿಕಾ ಅವಿನಾಶ್ ಮುಂತಾದವರು ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.