ಸಿನಿಮಾ ಸುದ್ದಿ

ಪಾಪ್ ಗಾಯಕಿ ಉಷಾ ಉತ್ತುಪ್‌ ಪತಿ ಹೃದಯಾಘಾತದಿಂದ ನಿಧನ

ಭಾರತೀಯ ಪಾಪ್ ಐಕಾನ್, ಬಹು ಭಾಷಾ ಗಾಯಕಿ ಉಷಾ ಉತ್ತುಪ್‌ ಅವರ ಪತಿ ಜಾನಿ ಚಾಕೋ ಉತ್ತುಪ್ ಸೋಮವಾರ ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ನಿಧನರಾದರು.

ಪಾಪ್ ಗಾಯಕಿ ಉಷಾ ಉತ್ತುಪ್‌ ಪತಿ ಹೃದಯಾಘಾತದಿಂದ ನಿಧನ
ಉಷಾ ಉತ್ತುಪ್‌ ಮತ್ತು ಜಾನಿ ಚಾಕೋ ಉತ್ತುಪ್
Published On :

ಕೋಲ್ಕೋತಾ: ಭಾರತೀಯ ಪಾಪ್ ಐಕಾನ್, ಬಹು ಭಾಷಾ ಗಾಯಕಿ ಉಷಾ ಉತ್ತುಪ್‌ ಅವರ ಪತಿ ಜಾನಿ ಚಾಕೋ ಉತ್ತುಪ್ ಸೋಮವಾರ ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ನಿಧನರಾದರು.

ಅವರಿಗೆ 78 ವರ್ಷ ವಯಸ್ಸಾಗಿತ್ತು. ಜಾನಿ ಅವರು ಪತ್ನಿ ಉಷಾ ಉತುಪ್, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ತಮ್ಮ ನಿವಾಸದಲ್ಲಿ ಟಿವಿ ನೋಡುವಾಗ ಸ್ಥಳದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಜಾನಿ ಅವರು ಚಹಾ ತೋಟವನ್ನು ಹೊಂದಿದ್ದು ಈಶಾನ್ಯ ರಾಜ್ಯಗಳಲ್ಲಿ ಚಹಾ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದರು. ಉಷಾ ಉತುಪ್ ಅವರಿಗೆ ಜಾನಿ ಎರಡನೇ ಪತಿಯಾಗಿದ್ದರು. 80ರ ದಶಕದಲ್ಲಿ ಇವರು ಮದುವೆಯಾಗಿದ್ದರು. ಈ ವರ್ಷದ ಆರಂಭದಲ್ಲಿ, ಸಂಗೀತ ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಉಷಾ ಉತ್ತುಪ್ ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ನೀಡಿ ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.