ಸಿನಿಮಾ ಸುದ್ದಿ

15 ವರ್ಷಗಳ ನಂತರ ಮತ್ತೆ ನಕ್ಕು ನಗಿಸಲು ಬರ್ತಿದ್ದಾರೆ ಗುರುಪ್ರಸಾದ್‌-ಜಗ್ಗೇಶ್‌: ಮಾರ್ಚ್ ನಲ್ಲಿ 'ರಂಗನಾಯಕ' ರಿಲೀಸ್

ನವರಸ ನಾಯಕ ಜಗ್ಗೆಶ್ ಮತ್ತು ಗುರು ಪ್ರಸಾದ್ ಜೋಡಿಯ 'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾ ನೋಡಿ ಎಂಜಾಯ್ ಮಾಡಿದ್ದ ಪ್ರೇಕ್ಷಕರು ಕಾದೂ ಕಾದು ಸೈಲೆಂಟ್ ಆಗಿದ್ದರು. ಇದೇ ಐದಾರು ವರ್ಷಗಳ ಹಿಂದೆ ಮತ್ತೆ ಒಂದಾಗಿ ಸಿನಿಮಾ ಮಾಡೋಕೆ ಈ ಜೋಡಿ ನಿರ್ಧಾರ ಮಾಡಿತ್ತು.

15 ವರ್ಷಗಳ ನಂತರ ಮತ್ತೆ ನಕ್ಕು ನಗಿಸಲು ಬರ್ತಿದ್ದಾರೆ ಗುರುಪ್ರಸಾದ್‌-ಜಗ್ಗೇಶ್‌: ಮಾರ್ಚ್ ನಲ್ಲಿ 'ರಂಗನಾಯಕ' ರಿಲೀಸ್
ಗುರುಪ್ರಸಾದ್ ಮತ್ತು ಜಗ್ಗೇಶ್
Published On :

ನವರಸ ನಾಯಕ ಜಗ್ಗೆಶ್ ಮತ್ತು ಗುರು ಪ್ರಸಾದ್ ಜೋಡಿಯ 'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾ ನೋಡಿ ಎಂಜಾಯ್ ಮಾಡಿದ್ದ ಪ್ರೇಕ್ಷಕರು ಕಾದೂ ಕಾದು ಸೈಲೆಂಟ್ ಆಗಿದ್ದರು. ಇದೇ ಐದಾರು ವರ್ಷಗಳ ಹಿಂದೆ ಮತ್ತೆ ಒಂದಾಗಿ ಸಿನಿಮಾ ಮಾಡೋಕೆ ಈ ಜೋಡಿ ನಿರ್ಧಾರ ಮಾಡಿತ್ತು. 2019ರಲ್ಲಿ 'ರಂಗನಾಯಕ' ಸಿನಿಮಾ ಅನೌನ್ಸ್ ಆಯ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸಿನಿಮಾ ಸೆಟ್ಟೇರುವುದು ತಡವಾಯ್ತು.

ರಂಗನಾಯಕ ಸಿನಿಮಾವನ್ನು ಮಾರ್ಚ್ 8ಕ್ಕೆ ರಿಲೀಸ್ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸಿದೆ.  ನಾಯಕ ನಟ ಜಗ್ಗೇಶ್‌ ಅವರಿಗೆ ಮಾರ್ಚ್‌ 17 ಹುಟ್ಟುಹಬ್ಬ ಸಂಭ್ರಮ. ಈಗ 'ರಂಗನಾಯಕ’ ತಂಡ ಜಗ್ಗೇಶ್‌ ಹಾಗೂ ಅವರ ಅಭಿಮಾನಿಗಳಿಗೆ ಬರ್ತ್‌ಡೇಗೆ ಒಂದು ವಾರ ಮುಂಚೆಯೇ ಗಿಫ್ಟ್ ನೀಡಲು ಮುಂದಾಗಿದೆ.

'ರಂಗನಾಯಕ'ನ ಮೇಲೆ ಯಾಕಿಷ್ಟು ನಿರೀಕ್ಷೆಯಿದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. 'ಎದ್ದೇಳು ಮಂಜುನಾಥ' ಸಿನಿಮಾ ತೆರೆಕಂಡು 15 ವರ್ಷಗಳ ಬಳಿಕ ಈ ಜೋಡಿಯ ಸಿನಿಮಾ ರಿಲೀಸ್ ಆಗುತ್ತಿದೆ.  ಈ ಸಿನಿಮಾ ರಾಜಕೀಯ ವಿಡಂಬನಾತ್ಮಕ ಸಿನಿಮಾ ಎಂದು ಗುರುಪ್ರಸಾದ್ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೆ ಜಗ್ಗೇಶ್‌ ಅವರೇ ಬೇಕು ಅಂತ 10 ವರ್ಷಗಳಿಂದ ಈ ಸ್ಕ್ರಿಪ್ಟ್ ಇಟ್ಕೊಂಡು ಕಾದಿದ್ದ ನಿರ್ದೇಶಕರ ಆಸೆ ಈಡೇರಿದೆ.

ಈ ಚಿತ್ರವನ್ನು ವಿಖ್ಯಾತ್‌ ಚಿತ್ರ ಪ್ರೊಡಕ್ಷನ್ಸ್‌ನಡಿ ಎ.ಆರ್‌. ವಿಖ್ಯಾತ್‌ ನಿರ್ಮಾಣ ಮಾಡುತ್ತಿದ್ದಾರೆ. ಮಠ, ಎದ್ದೇಳು ಮಂಜುನಾಥ ನಂತರ ಮತ್ತೂಮ್ಮೆ ಹಿಟ್‌ ಕಾಂಬೋ ತೆರೆಯತ್ತ ಬರುತ್ತಿರುವುದರಿಂದ ಸಹಜವಾಗಿಯೇ ಸಿನಿಮಾ ಬಗ್ಗೆ ಕುತೂಹಲ ಹಾಗೂ ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆ ಯಾಗಿರುವ ಚಿತ್ರದ ಟೀಸರ್‌, ಗೆಟಪ್‌ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.