ಸಿನಿಮಾ ಸುದ್ದಿ

'ಬಿಲ್ಲಾ ರಂಗ ಬಾಷಾ' ಈ ವರ್ಷವೇ ಸೆಟ್ಟೇರಲಿದೆ: ಅಭಿಮಾನಿಗಳೊಂದಿಗೆ ಕಿಚ್ಚ ಸುದೀಪ್ ಚಿಟ್ ಚಾಟ್

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಪ್ರಸ್ತುತ ಕನ್ನಡ ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಮತ್ತು ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಬ್ಯುಸಿಯಲ್ಲಿದ್ದಾರೆ. ಈ ಮಧ್ಯೆ ನಿನ್ನೆ ತಮ್ಮ ಫ್ಯಾನ್ಸ್ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರ ಕೊಡುತ್ತೇನೆ ಎಂದು ಮುಂದಾದರು.

'ಬಿಲ್ಲಾ ರಂಗ ಬಾಷಾ' ಈ ವರ್ಷವೇ ಸೆಟ್ಟೇರಲಿದೆ: ಅಭಿಮಾನಿಗಳೊಂದಿಗೆ ಕಿಚ್ಚ ಸುದೀಪ್ ಚಿಟ್ ಚಾಟ್
ಅನೂಪ್ ಭಂಡಾರಿ-ಕಿಚ್ಚ ಸುದೀಪ್
Published On :

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಪ್ರಸ್ತುತ ಕನ್ನಡ ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಮತ್ತು ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಬ್ಯುಸಿಯಲ್ಲಿದ್ದಾರೆ. ಈ ಮಧ್ಯೆ ನಿನ್ನೆ ತಮ್ಮ ಫ್ಯಾನ್ಸ್ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರ ಕೊಡುತ್ತೇನೆ ಎಂದು ಮುಂದಾದರು. ತಮ್ಮ ಅಭಿಮಾನಿಗಳೊಂದಿಗೆ ಮುಕ್ತವಾಗಿ ಮಾತನಾಡಿದರು. ತಮ್ಮ ಮುಂದಿನ ಕೆಲಸಗಳು, ಯೋಜನೆಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡರು. 

ಮ್ಯಾಕ್ಸ್ ಚಿತ್ರದ ಕಡೆಗೆ ತೋರಿದ ಪ್ರೀತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಸುದೀಪ್, ತಮ್ಮ ಅಭಿಮಾನಿಗಳ ಕಾತರತೆಗೆ ಆದಷ್ಟು ಬೇಗನೆ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತೇವೆ ಎಂದರು. ಚಿತ್ರ ನಿರ್ಮಾಣವು ಒಂದು ನಿಧಾನವಾದ ಪ್ರಕ್ರಿಯೆ ಎಂದರು.

“ಚಲನಚಿತ್ರ ನಿರ್ಮಾಣವು ಒಂದು ಪ್ರಕ್ರಿಯೆ, ಅದು ತನ್ನದೇ ಆದ ವೇಗವನ್ನು ಹೊಂದಿದೆ. ನೀವೆಲ್ಲರೂ ತೋರುತ್ತಿರುವ ಪ್ರೀತಿ ಮತ್ತು ಕುತೂಹಲಕ್ಕೆ ನಾನು ಕೃತಜ್ಞ ಎಂದು ಸುದೀಪ್ ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದಿಂದ ಧನ್ಯವಾದ ಹೇಳಿದ್ದಾರೆ.

ನವೆಂಬರ್‌ನಲ್ಲಿ ಮತ್ತು ಡಿಸೆಂಬರ್ ನಲ್ಲಿ ಮಳೆಯಿಂದಾಗಿ ಚಿತ್ರೀಕರಣ ಸ್ವಲ್ಪ ತಡವಾಯಿತು ಎಂದರು. ಈಗ ಚಿತ್ರೀಕರಣವು ಸುಗಮವಾಗಿ ಸಾಗುತ್ತಿದೆ ಎಂದು ಅಭಿಮಾನಿಗಳಿಗೆ ಲೇಟೆಸ್ಟ್ ಮಾಹಿತಿ ನೀಡಿದ್ದಾರೆ.

ಕಿಚ್ಚ ಸುದೀಪ್ ಮತ್ತು ರಂಗಿತರಂಗ ಖ್ಯಾತಿ ನಿರ್ದೇಶಕ ಅನೂಪ್ ಭಂಡಾರಿ ಜೊತೆ ವಿಕ್ರಾಂತ್ ರೋಣ ನಂತರ  ಮುಂಬರುವ ಚಿತ್ರ 'ಬಿಲ್ಲಾ ರಂಗ ಬಾಷಾ'ದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಈ ವರ್ಷವೇ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ ಎಂದಿದ್ದಾರೆ. 

ಮ್ಯಾಕ್ಸ್ ಮತ್ತು ಬಿಲ್ಲಾ ರಂಗಾ ಬಾದಶಾ ಹೊರತುಪಡಿಸಿ, ಸುದೀಪ್ ಅವರ ತಂಡವು ಚೇರನ್ ಜೊತೆಗೆ ಚಿತ್ರ ಮಾಡುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ನಾಯಕಿಯಾಗುತ್ತಿದ್ದಾರೆ. ಕೆಆರ್ ಜಿ ಸ್ಟುಡಿಯೊ ಜೊತೆಗೆ ಮತ್ತು ಕಬ್ಜಾ ನಿರ್ದೇಶಕ ಆರ್ ಚಂದ್ರು ಅವರ ಜೊತೆ ಒಂದು ಪ್ರಾಜೆಕ್ಟ್ ನಲ್ಲಿ ಸಹಯೋಗ ಹೊಂದಲಿದ್ದಾರೆ. 

ಈ ಎಲ್ಲಾ ಅಪ್‌ಡೇಟ್‌ಗಳ ಮಧ್ಯೆ, ದರ್ಶನ್ ಅಭಿನಯದ ಕಾಟೇರ ಚಿತ್ರವನ್ನು ವೀಕ್ಷಿಸಿದ್ದಾರಾ ಎಂದು ಅಭಿಮಾನಿಯ ಕುತೂಹಲಕಾರಿ ಪ್ರಶ್ನೆಗೆ ಸುದೀಪ್ ಅವರು ಉತ್ತರಿಸಿದ ರೀತಿ ಕುತೂಹಲಕಾರಿಯಾಗಿದೆ ಮತ್ತು ಭಾರೀ ವೈರಲ್ ಆಗಿದೆ. 

ಕಾಟೇರ ನಿರ್ದೇಶಕರ ತರುಣ್ ಕಿಶೋರ್ ಸುಧೀರ್ ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುವಾಗ ಸುದೀಪ್ ಅವರು ಖಂಡಿತವಾಗಿಯೂ ಚಿತ್ರ ವೀಕ್ಷಿಸುತ್ತಾರೆ ಎಂದಿದ್ದರು. ಇದೀಗ ಸುದೀಪ್ ಅವರು ಕೊಟ್ಟಿರುವ ಉತ್ತರ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.