ಸಿನಿಮಾ ಸುದ್ದಿ

ಮೆಹಬೂಬಾ ಸಿನಿಮಾ ಫೈಟ್ ವೇಳೆ ಅವಘಡ: ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಕಾಲಿಗೆ ಗಾಯ!

ಶೂಟಿಂಗ್‌ನಲ್ಲಿ ಬಿಲ್ಡಿಂಗ್ ಹತ್ತುವ ಸೀನ್ ಇತ್ತು. ಆ ವೇಳೆ ನಿಯಂತ್ರಣ ತಪ್ಪಿ ಶಶಿ ಮೇಲಿನಿಂದ ಕೆಳಗಡೆ ಬಿದ್ದಿದ್ದಾರೆ. ಇದರಿಂದ ಅವರ ಕಾಲಿಗೆ ಗಾಯ ಆಗಿದೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿತ್ತು.

ಮೆಹಬೂಬಾ ಸಿನಿಮಾ ಫೈಟ್ ವೇಳೆ ಅವಘಡ: ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಕಾಲಿಗೆ ಗಾಯ!
ಶಶಿ ಕುಮಾರ್
Published On :

ಮೈಸೂರು: ಮಾಡರ್ನ್ ರೈತ ಎಂದೇ ಗುರುತಿಸಿಕೊಂಡಿರುವ ‘ಬಿಗ್‌ ಬಾಸ್‌ ಕನ್ನಡ ಸೀಸನ್ 6’ರ ವಿಜೇತ ಶಶಿ ಅವರ ಕಾಲಿಗೆ ಗಾಯವಾಗಿದೆ. ಶಶಿ ನಾಯಕನಾಗಿ ನಟಿಸುತ್ತಿರುವ ‘ಮೆಹಬೂಬಾ’ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡಿರುವ ಅವರು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಶೂಟಿಂಗ್‌ನಲ್ಲಿ ಬಿಲ್ಡಿಂಗ್ ಹತ್ತುವ ಸೀನ್ ಇತ್ತು. ಆ ವೇಳೆ ನಿಯಂತ್ರಣ ತಪ್ಪಿ ಶಶಿ ಮೇಲಿನಿಂದ ಕೆಳಗಡೆ ಬಿದ್ದಿದ್ದಾರೆ. ಇದರಿಂದ ಅವರ ಕಾಲಿಗೆ ಗಾಯ ಆಗಿದೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಕ್ಲೈಮ್ಯಾಕ್ಸ್‌ನ ಶೂಟಿಂಗ್‌ ವೇಳೆ ಈ ಘಟನೆ ನಡೆದಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ‘ಮೆಹಬೂಬಾ’ ಚಿತ್ರದಲ್ಲಿ ‘ಗೊಂಬೆಗಳ ಲವ್’ ಖ್ಯಾತಿಯ ಪಾವನಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಮೈಸೂರಿನ ಕಾಲೇಜಿನಲ್ಲಿ ಕಟ್ಟಡದ ಮೇಲೆ ಹತ್ತುವ ಸೀನ್‌ ಇತ್ತು. ಇದನ್ನು ರಿಯಲಿಸ್ಟಿಕ್‌ ಆಗಿ ಶೂಟಿಂಗ್ ಮಾಡುವಾಗ ಈ ಅವಘಡ ಸಂಭವಿಸಿದೆ. ಕಟ್ಟಡವನ್ನು ಹತ್ತುವಾಗ ಹಳೆಯ ಕಟ್ಟಡವಾದ್ದರಿಂದ ಹಗ್ಗವನ್ನು ಕಟ್ಟಿದ್ದರೂ ಕೂಡ ಸಿಮೆಂಟ್‌ ಸ್ವಲ್ಪ ಬಿಟ್ಟುಕೊಂಡಿದ್ದರಿಂದ ಹಗ್ಗವೂ ಜಾರಿಗೆ. ಹೀಗಾಗಿ, ನಾನು ಸುಮಾರು 8 ಅಡಿ ಎತ್ತರಿಂದ ಬಿದ್ದಿದ್ದೇನೆ. ಆಗ ನನ್ನ ಕಾಲಿಗೆ ಸ್ವಲ್ಪ ಗಾಯವಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದೇನೆ. ಈಗ ನಾನು ಸಂಪೂರ್ಣ ಗುಣಮುಖವಾಗಿದ್ದೇನೆ. ಈಗ ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಆಧುನಿಕ ರೈತ ಎಂದೇ ಗುರುತಿಸಿಕೊಂಡಿರುವ ಶಶಿ ಬಹುಮುಖ ಪ್ರತಿಭೆ ಕೂಡ ಹೌದು. ಜಾನಪದ ಕುಣಿತ ಮತ್ತು ರಂಗಭೂಮಿ ಅವರ ಆಸಕ್ತಿಯ ಕ್ಷೇತ್ರಗಳು. ಡೊಳ್ಳು ಕುಣಿತ, ವೀರಗಾಸೆ ಮತ್ತು ಕಂಸಾಳೆ ನೃತ್ಯಗಳಲ್ಲಿ ಅವರು ಪರಿಣಿತಿ ಹೊಂದಿದ್ದಾರೆ. ಸದ್ಯ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಶೀಘ್ರ ಚಿತ್ರತಂಡ ಸೇರುವಂತೆ ಅಭಿಮಾನಿಗಳು ಹಾರೈಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.