ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಕ್ಯಾಮರಾಮೆನ್ ಸೆಂಥಿಲ್ ಕುಮಾರ್ ಪತ್ನಿ ನಿಧನ

ಎಸ್ಎಸ್ ರಾಜಮೌಳಿ ಅವರ ಮೆಚ್ಚಿನ ಸಿನಿಮಾಟೋಗ್ರಾಫರ್ ಕೆಕೆ ಸೆಂಥಿಲ್ ಕುಮಾರ್ ಅವರ ಪತ್ನಿ ಮತ್ತು ಯೋಗ ತರಬೇತುಗಾರ್ತಿ ರೂಹಿ (ರುಹೀನಾಜ್) ಫೆ.15ರಂದು ನಿಧನರಾದರು. ಹಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದಾಗಿ ಬಳಲುತ್ತಿದ್ದರು ಎನ್ನಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೇ ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ರೂಹಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. 2009ರಲ್ಲಿ ಸೆಂಥಿಲ್ ಮತ್ತು ರೂಹಿ ಹೊಸ ಜೀವನಕ್ಕೆ ಕಾಲಿಟ್ಟದ್ದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.
ಕೋವಿಡ್ ಗೆ ತುತ್ತಾದ ನಂತರ ರೂಹಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ನಿರಂತರವಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೂ, ಅವರ ಆರೋಗ್ಯ ಸುಧಾರಿಸಲಿಲ್ಲ ಎಂದು ಹೇಳಲಾಗುತ್ತಿದೆ. ಕೊನೆಗೂ ಅಂಗಾಂಗ ವೈಫಲ್ಯದಿಂದಾಗಿ ರೂಹಿ ಸಾವು ಕಂಡಿದ್ದಾರೆ.
ರೂಹಿ ಅವರು ಫೆ. 15ರ ಮಧ್ಯಾಹ್ನ 2 ಗಂಟೆಗೆ ನಿಧನರಾದರು. ಅಂತಿಮ ವಿಧಿವಿಧಾನಗಳು (ಶುಕ್ರವಾರ ಫೆ. 16) ಬೆಳಗ್ಗೆ 9 ಗಂಟೆಗೆ ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬ ಮಾಹಿತಿ ಹಂಚಿಕೊಂಡಿತ್ತು.
ರೂಹಿ ಅವರು ಅನುಷ್ಕಾ, ಪ್ರಭಾಸ್ ಮತ್ತು ಇಲಿಯಾನಾ ಡಿಕ್ರೂಜ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳಿಗೆ ಯೋಗ ತರಬೇತುದಾರರಾಗಿದ್ದರು. ಹೈದರಾಬಾದ್ ವಿಭಾಗಕ್ಕೆ ಭರತ್ ಠಾಕೂರ್ ಅವರ ಯೋಗ ತರಗತಿಗಳ ಮುಖ್ಯಸ್ಥರಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



