ಬೇಲ್ ಸಿಕ್ಕ ಮೇಲೆ ಬೆನ್ನು ನೋವು 'ಗಾಯಬ್': ಮೈಸೂರಿನ ಫಾರಂ ಹೌಸ್ನಲ್ಲಿ ದರ್ಶನ್ ಫುಲ್ ರಿಲ್ಯಾಕ್ಸ್
ರೇಣುಕಾಸ್ವಾಮಿ ಕೇಸ್ನಲ್ಲಿ ಆರೋಪಿಗಳಿಗೆ ಜೈಲಿನಿಂದ ಮುಕ್ತಿ ಸಿಕ್ಕಿದೆ. ಇದೀಗ ದರ್ಶನ್ಗೆ ತಮ್ಮ ತವರಿಗೆ ತೆರಳಲು ಅನುಮತಿ ಸಿಕ್ಕಿದೆ. ಇದರ ಬೆನ್ನಲ್ಲೇ ದಾಸ ತವರೂರಿಗೆ ಪಯಣಿಸಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ ದರ್ಶನ್ ಅವರು 6 ತಿಂಗಳ ಬಳಿಕ ಶುಕ್ರವಾರ ಮೈಸೂರಿಗೆ ಆಗಮಿಸಿ, ತಮ್ಮ ಫಾರಂ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ
ರೇಣುಕಾಸ್ವಾಮಿ ಕೇಸ್ನಲ್ಲಿ ಆರೋಪಿಗಳಿಗೆ ಜೈಲಿನಿಂದ ಮುಕ್ತಿ ಸಿಕ್ಕಿದೆ. ಇದೀಗ ದರ್ಶನ್ಗೆ ತಮ್ಮ ತವರಿಗೆ ತೆರಳಲು ಅನುಮತಿ ಸಿಕ್ಕಿದೆ. ಇದರ ಬೆನ್ನಲ್ಲೇ ದಾಸ ತವರೂರಿಗೆ ಪಯಣಿಸಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಓಡಾಡುತ್ತಾ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ. ದರ್ಶನ್ ಅವರೊಂದಿಗೆ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮಿ, ನಟ ಧನ್ವಿರ್, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜೊತೆಗಿದ್ದಾರೆ. ಮೈಸೂರಿಗೆ ಆಗಮಿಸಿರುವ ದರ್ಶನ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.ಇನ್ನೂಯಾವುದೇ ಫೋಟೋ ತೆಗೆಯದಂತೆ ಫಾರ್ಮ್ ಹೌಸ್ ಗೇಟ್ ಟಾರ್ಪಾಲ್ ನಿಂದ ಮುಚ್ಚಲಾಗಿದೆ.
ರೆಗ್ಯುಲರ್ ಬೇಲ್ ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದ ದರ್ಶನ್ಗೆ ಮೈಸೂರಿನ ಫಾರ್ಮ್ ಹೌಸ್ ಕಡೆ ಹೋಗಲು ತುಡಿತ ಹೆಚ್ಚಾಗಿತ್ತು. ಇದೇ ನಿಟ್ಟಿನಲ್ಲಿ ಸೆಷನ್ಸ್ ಕೋರ್ಟ್ಗೆ ದಾಸ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಕೂಡಾ ದರ್ಶನ್ಗೆ ಅನುಮತಿ ನೀಡಿತ್ತು. ಡಿಸೆಂಬರ್ 20ರಿಂದ ಜನವರಿ 05ರವರೆಗೆ 2 ವಾರ ಪರ್ಮಿಷನ್ ಕೊಟ್ಟಿದೆ. ಅನುಮತಿ ಕೊಟ್ಟ ಬೆನ್ನಲ್ಲೇ ನಿನ್ನೆ ಬೆಳಗ್ಗೆ ದರ್ಶನ್ ಮೈಸೂರಿಗೆ ಪಯಣಿಸಿದ್ದಾರೆ. ಫಾರ್ಮ್ ಹೌಸ್ನಲ್ಲಿ ಪ್ರಾಣಿಗಳ ಜೊತೆ ಕಾಲಕಳೆಯುತ್ತ ದರ್ಶನ್ ಓಡಾಡುತ್ತಿದ್ದಾರೆ. ತೋಟದ ಕೆಲಸ ಮಾಡಿಸುತ್ತ ಬೆನ್ನುನೋವನ್ನೇ ಮರೆತಂತೆ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



