ಸಿನಿಮಾ ಸುದ್ದಿ

ಫಿಲಂ ಚೇಂಬರ್ ಚುನಾವಣೆ: ಮಂಡಳಿ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆ

ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ವಿವಿಧ ಸ್ಥಾನಗಳಿಗಾಗಿ ಒಟ್ಟು 104 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಸಲ ಪ್ರದರ್ಶಕ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು.

ಫಿಲಂ ಚೇಂಬರ್ ಚುನಾವಣೆ: ಮಂಡಳಿ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆ
ಎಂ. ನರಸಿಂಹಲು
Published On :

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಶನಿವಾರ ಮುಕ್ತಾಯಗೊಂಡಿದ್ದು, ಅಧ್ಯಕ್ಷರಾಗಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಎಂ ಆಯ್ಕೆಗೊಂಡಿದ್ದಾರೆ. ಇವರು, ತಮ್ಮ ಪ್ರತಿಸ್ಪರ್ಧಿ ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್‌ ರಾಜು ಆರ್‌ ಅವರನ್ನು ಮಣಿಸಿದರು. ಎಂ.ನರಸಿಂಹಲು ಆಯ್ಕೆಯಾಗುವ ಮೂಲಕ ಸಾ.ರಾ ಗೋವಿಂದು ಬಣಕ್ಕೆ ಮತ್ತೆ ಗೆಲುವು ಸಿಕ್ಕಂತಾಗಿದೆ.

ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ವಿವಿಧ ಸ್ಥಾನಗಳಿಗಾಗಿ ಒಟ್ಟು 104 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಸಲ ಪ್ರದರ್ಶಕ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು.ಈ ಬಾರಿ ಅಧ್ಯಕ್ಷ ಸ್ಥಾನ ಪ್ರದರ್ಶಕರ ವಲಯಕ್ಕೆ ಮೀಸಲಾಗಿತ್ತು. ಎಂ.ನರಸಿಂಹಲು ಅವರು ತಮ್ಮ ಪ್ರತಿಸ್ಪರ್ಧಿ ಆರ್‌.ಸುಂದರ್‌ ರಾಜು ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಉಪಾಧ್ಯಕ್ಷರಾಗಿ ನಿರ್ಮಾಪಕ ವಲಯದಿಂದ ಸಫೈರ್ ವೆಂಕಟೇಶ್, ಪ್ರದರ್ಶಕ ವಲಯದಿಂದ ರಂಗಪ್ಪ ಕೆ.ಓ, ವಿತರಕ ವಲಯದಿಂದ ಶಿಲ್ಪಾ ಶ್ರೀನಿವಾಸ್ ಆಯ್ಕೆಗೊಂಡರು. ಗೌರವ ಕಾರ್ಯದರ್ಶಿಯಾಗಿ ಪ್ರದರ್ಶಕ ವಲಯದಿಂದ ವೀರೇಶ್ ಚಿತ್ರಮಂದಿರದ ಮಾಲೀಕ ಕುಶಾಲ್ ಎಲ್.ಸಿ, ನಿರ್ಮಾಪಕ‌ ವಲಯದಿಂದ ಪ್ರವೀಣ್ ಕುಮಾರ್, ವಿತರಕ ವಲಯದಿಂದ ಎಂ.ಎನ್.ಕುಮಾರ್ ಆಯ್ಕೆಗೊಂಡರು.

ಮಧ್ಯಾಹ್ನದಿಂದ ಚುನಾವಣೆ ನಡೆದಿದ್ದು, ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡಲಾಗಿದೆ. ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖವಾಗಿ ಸಾರಾ ಗೋವಿಂದು ಬಣ ಮತ್ತು ಭಾಮಾ ಹರೀಶ್ ಅವರ ಬಣಗಳ ಮಧ್ಯೆ ಜಿದ್ದಾಜಿದ್ದಿ ನಡೆದಿತ್ತು. ಅಂತಿಮವಾಗಿ ಸಾರಾ ಗೋವಿಂದು ಬಣಕ್ಕೆ ಜಯ ದೊರೆತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.