ಕಠಿಣ ಪರಿಶ್ರಮ, ತ್ಯಾಗ ಫಲ ನೀಡಿದೆ: ಪತಿ ಬಗ್ಗೆ ಪ್ರಗತಿ ರಿಷಭ್ ಶೆಟ್ಟಿ ಭಾವನಾತ್ಮಕ ನುಡಿ
ಪ್ರಶಸ್ತಿ ಕುರಿತು ಪ್ರತಿಕ್ರಿಯೆ ನೀಡಿರುವ ರಿಷಭ್ ಶೆಟ್ಟಿಯವರು, ನನ್ನ ಇಡೀ ತಂಡದಿಂದ ಇದು ಸಾಧ್ಯವಾಯಿತು. ನಾನು ಚಿತ್ರದ ಪ್ರಮುಖ ಭಾಗ ಎನಿಸಿದರು, ಚಿತ್ರ ತಂಡದ ಕಠಿಣ ಪರಿಶ್ರಮ, ನಿರ್ಮಾಣ ಸಂಸ್ಥೆ, ತಂತ್ರಜ್ಞರು ಇದಕ್ಕೆಲ್ಲ ಕಾರಣರಾಗಿದ್ದಾರೆಂದು ಹೇಳಿದ್ದಾರೆ.

70ನೇ ರಾಷ್ಟ್ರ ಪ್ರಶಸ್ತಿ ವಿಜೇತರ ಪಟ್ಟಿ ಘೋಷಣೆಯಾಗಿದೆ. 2022ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಕೋವಿಡ್ ಕಾರಣದಿಂದ ಕೆಲವು ವರ್ಷ ರಾಷ್ಟ್ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮುಂದೂಡಲಾಗಿತ್ತು. ಹೀಗಾಗಿ, 2022ರಲ್ಲಿ ತೆರೆಕಂಡು ಜನಮನ್ನಣೆ ಪಡೆದ ಸಿನಿಮಾಗಳಿಗೆ ರಾಷ್ಟ್ರಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. 2022ನೇ ಸಾಲಿನ ರಾಷ್ಟ್ರ ಪ್ರಶಸ್ತಿಯಲ್ಲಿ ಕನ್ನಡದ ಎರಡು ಸಿನಿಮಾಗಳಿಗೆ ಪ್ರಶಸ್ತಿಯನ್ನು ಬಾಚಿಕೊಂಡಿದೆ.
'ಕೆಜಿಎಫ್ 2' ಹಾಗೂ 'ಕಾಂತಾರ' ಸಿನಿಮಾಗಳಿಗೆ ಪ್ರಶಸ್ತಿ ಲಭಿಸಿದೆ. 'ಕಾಂತಾರ' ಸಿನಿಮಾದ ನಟನೆಗಾಗಿ ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಬಹಳ ದಿನಗಳ ಬಳಿಕ ಕನ್ನಡದ ನಟನಿಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಕನ್ನಡಿಗರಿಗೆ ಖುಷಿಕೊಟ್ಟಿದೆ.
ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬರುತ್ತಿದ್ದಂತೆ ಪತಿಯ ಕುರಿತು ಪತ್ನಿ ಪ್ರಗತಿ ರಿಷಭ್ ಶೆಟ್ಟಿಯವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸ್'ಸ್ಟಾಗ್ರಾಮ್ ನಲ್ಲಿ ಪತಿಯನ್ನು ಸ್ವಾಗತಿಸುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಅವರು, ಸಿನಿಮಾದ ಮೇಲಿನ ಅವರ ಸಮರ್ಪಣೆ ಮತ್ತು ಉತ್ಸಾಹಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಿಮ್ಮ ಕಠಿಣ ಪರಿಶ್ರಮ, ತಡರಾತ್ರಿಯವರೆಗಿನ ಕೆಲಸ, ತ್ಯಾಗ ನಿಜಕ್ಕೂ ಫಲ ನೀಡಿದೆ. ನಿಮ್ಮ ಸಾಧನೆ ಹೆಮ್ಮ ತಂದಿದೆ ಎಂದು ಹೇಳಿದ್ದಾರೆ.
ಪ್ರಶಸ್ತಿ ಕುರಿತು ಪ್ರತಿಕ್ರಿಯೆ ನೀಡಿರುವ ರಿಷಭ್ ಶೆಟ್ಟಿಯವರು, ನನ್ನ ಇಡೀ ತಂಡದಿಂದ ಇದು ಸಾಧ್ಯವಾಯಿತು. ನಾನು ಚಿತ್ರದ ಪ್ರಮುಖ ಭಾಗ ಎನಿಸಿದರು, ಚಿತ್ರ ತಂಡದ ಕಠಿಣ ಪರಿಶ್ರಮ, ನಿರ್ಮಾಣ ಸಂಸ್ಥೆ, ತಂತ್ರಜ್ಞರು ಇದಕ್ಕೆಲ್ಲ ಕಾರಣರಾಗಿದ್ದಾರೆಂದು ಹೇಳಿದ್ದಾರೆ. ಇದೇ ವೇಳೆ ತಮಗೆ ಶುಭಾಶಯ ತಿಳಿಸುತ್ತಿರುವ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

70th National Film Awards: ರಿಷಭ್ ಶೆಟ್ಟಿ ಅತ್ಯುತ್ತಮ ನಟ; KGF-2 ಗೆ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ
ಕರ್ನಾಟಕದ ಜನತೆಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಚಿತ್ರವನ್ನು ಗುರುತಿಸಿದ ರಾಷ್ಟ್ರ ಪ್ರಶಸ್ತಿ ಸಮಿತಿಗೆ ಧನ್ಯವಾದ ಹೇಳುತ್ತೇನೆ. ಜನರು ಈ ಚಿತ್ರ ಗೆಲ್ಲುವಂತೆ ಮಾಡಿದ್ದಾರೆ, ನನಗೆ ತುಂಬಾ ಸಂತೋಷವಾಗಿದೆ. ಈ ಗೆಲುವನ್ನು ಕರ್ನಾಟಕದ ಜನತೆಗೆ ಅರ್ಪಿಸುತ್ತೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


