'ಸಪ್ತ ಸಾಗರದಾಚೆ ಎಲ್ಲೋ' ಬಿಡುಗಡೆ ದಿನಾಂಕ ಘೋಷಣೆ: ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಂತಸ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಈ ವರ್ಷ ನಿರೀಕ್ಷೆ ಹುಟ್ಟಸಿರುವ ಚಿತ್ರಗಳಲ್ಲಿ ಒಂದಾಗಿದ್ದು, ಅದರ ಬಿಡುಗಡೆ ದಿನಾಂಕವನ್ನು ರಕ್ಷಿತ್ ಶೆಟ್ಟಿಯವರೇ ಘೋಷಿಸಿದ್ದಾರೆ.

ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಈ ವರ್ಷ ನಿರೀಕ್ಷೆ ಹುಟ್ಟಸಿರುವ ಚಿತ್ರಗಳಲ್ಲಿ ಒಂದಾಗಿದ್ದು, ಅದರ ಬಿಡುಗಡೆ ದಿನಾಂಕವನ್ನು ರಕ್ಷಿತ್ ಶೆಟ್ಟಿಯವರೇ ಘೋಷಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ತನ್ನ ವಿಭಿನ್ನ ಕಥಾಹಂದರವನ್ನು ತೆರೆಯ ಮೇಲೆ ತೋರಿಸಿ ಸಿನಿ ರಸಿಕರ ಮನ ಗೆದ್ದಿರುವ ಹೇಮಂತ್ ರಾವ್ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
“ಸಪ್ತ ಸಾಗರದಾಚೆ ಎಲ್ಲೋ” ಚಿತ್ರ ಎರಡು ಭಾಗವಾಗಿ ತೆರೆ ಮೇಲೆ ಬರಲಿದೆ. ಸೈಡ್ 1, ಸೈಡ್ 2 ಆಗಿ ತೆರೆ ಕಾಣಲಿದೆ ಎಂದು ಟೀಸರ್ ಮೂಲಕ ಚಿತ್ರ ತಂಡ ನಾಯಕ ನಟನ ಹುಟ್ಟುಹಬ್ಬದ ದಿನದಂದು ಹೇಳಿಕೊಂಡಿತ್ತು.
“ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಸೈಡ್ 1 ಅಂದರೆ ಮೊದಲ ಭಾಗ ಸೆಪ್ಟೆಂಬರ್ 1 ರಂದು ಮತ್ತು ಸೈಡ್ 2 (ಭಾಗ-2) ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದೆ. ಮೊದಲ ಭಾಗದಲ್ಲಿ ಮನು- ಸುರಭಿ ಪ್ರೇಮಯಾನ, ಎರಡನೇ ಭಾಗದಲ್ಲಿ ನೋವಿನಲ್ಲಿ ಉಳಿದ ಮನುವಿನ ಕಥೆ ಸಿನಿಮಾದಲ್ಲಿ ಇರಲಿದೆ.
ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಮತ್ತು ಚೈತ್ರ ಆಚಾರ್ ಅವರು ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


