ಸಿನಿಮಾ ಸುದ್ದಿ

ಮಹಿಳೆಯರೇ ಸೇರಿ ಮಾಡಿರುವ 'ಆಚಾರ್ & ಕೋ' ರಿಲೀಸ್ ಡೇಟ್ ಫಿಕ್ಸ್

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ಆಚಾರ್ ಅಂಡ್ ಕೋ ಬಿಡುಗಡೆಗೆ ಸಜ್ಜಾಗಿದೆ. ಸಿಂಧು ಶ್ರೀನಿವಾಸ ಮೂರ್ತಿ ಅವರು ಬರಹಗಾರರಾಗಿ, ನಿರ್ದೇಶಕರಾಗಿ ಮತ್ತು ನಾಯಕಿಯಾಗಿರುವ ಈ ಚಿತ್ರ ಜುಲೈ 28 ರಂದು ಬಿಡುಗಡೆಯಾಗಲಿದೆ. ಈ ಮೂಲಕ ಹೃದಯ ಸ್ಪರ್ಶಿ ಕಥೆಯನ್ನು ಪ್ರೇಕ್ಷಕರೆದುರು ಚಿತ್ರತಂಡ ತರುತ್ತಿದೆ.

ಮಹಿಳೆಯರೇ ಸೇರಿ ಮಾಡಿರುವ 'ಆಚಾರ್ & ಕೋ' ರಿಲೀಸ್ ಡೇಟ್ ಫಿಕ್ಸ್
ಆಚಾರ್ & ಕೋ' ಫೋಸ್ಟರ್
Published On :

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ಆಚಾರ್ ಅಂಡ್ ಕೋ ಬಿಡುಗಡೆಗೆ ಸಜ್ಜಾಗಿದೆ. ಸಿಂಧು ಶ್ರೀನಿವಾಸ ಮೂರ್ತಿ ಅವರು ಬರಹಗಾರರಾಗಿ, ನಿರ್ದೇಶಕರಾಗಿ ಮತ್ತು ನಾಯಕಿಯಾಗಿರುವ ಈ ಚಿತ್ರ ಜುಲೈ 28 ರಂದು ಬಿಡುಗಡೆಯಾಗಲಿದೆ. ಈ ಮೂಲಕ ಹೃದಯ ಸ್ಪರ್ಶಿ ಕಥೆಯನ್ನು ಪ್ರೇಕ್ಷಕರೆದುರು ಚಿತ್ರತಂಡ ತರುತ್ತಿದೆ. 

ಸಂಪೂರ್ಣವಾಗಿ ಮಹಿಳೆಯರೇ ಸೇರಿ ಮಾಡಿರುವ ಸಿನಿಮಾಕ್ಕೆ ಬಿಂಧುಮಾಲಿನಿ ನಾರಾಯಣಸ್ವಾಮಿ ಸಂಗೀತ ಸಂಯೋಜಿಸಿದ್ದಾರೆ. ಡ್ಯಾನಿಲ್ಲಾ ಕೊರೆಯಾ ಕ್ರಿಯೇಟಿವ್ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದು, ಇಂಚರ ಸುರೇಶ್ ವಸ್ತ್ರವಿನ್ಯಾಸ, ಹೇಮಾ ಸುವರ್ಣ ಧ್ವನಿ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ರೆಟ್ರೋ ಶೈಲಿಯ ಈ ಸಿನಿಮಾದ ಕಥೆ 1960ರ ಕಾಲಘಟ್ಟದ ಬೆಂಗಳೂರಿನಲ್ಲಿ ಸಾಗುತ್ತದೆ. ಆಗಿನ ಕಾಲದ ಒಂದು ಕುಟುಂಬಕ್ಕೆ ಎದುರಾಗುವ ಸಂಪ್ರದಾಯ ವರ್ಸಸ್​ ಆಧುನಿಕತೆ ಎಂಬ ವಾತಾವರಣದ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗಿದೆ. ಸೂಕ್ತ ವಸ್ತ್ರ ವಿನ್ಯಾಸ ಮತ್ತು ಕಲಾ ನಿರ್ದೇಶನದ ಮೂಲಕ 60 ಮತ್ತು 70 ರ ದಶಕದ ಬೆಂಗಳೂರನ್ನು ತೆರೆ ಮೇಲೆ ಸಮರ್ಥವಾಗಿ ಮರುಸೃಷ್ಟಿ ಮಾಡಲಾಗಿದೆ.

ಹಾಸ್ಯಮಯ ಹಾಗೂ ಭಾವನಾತ್ಮಕತೆಯೊಂದಿಗೆ ಆಗಿನ ಕಾಲಘಟ್ಟಕ್ಕೆ ಪ್ರೇಕ್ಷಕರನ್ನು ಚಿತ್ರ ಕರೆದೊಯ್ಯಲಿದೆ. ಈ ಕುಟುಂಬದ ಕಥೆಯನ್ನು ನೋಡುತ್ತಾ ಪ್ರೇಕ್ಷಕರು ತಮ್ಮಗೆ ಗೊತ್ತಿಲ್ಲದಂತೆ ಅಂದಿನ ಕಾಲಕ್ಕೆ ರವಾನೆಯಾಗುತ್ತಾರೆ. ಆ ಕುಟುಂಬದ ಪಯಣದಲ್ಲಿ ತಾವೂ ಭಾಗಿಯಾಗುತ್ತಾರೆ ಎಂಬ ಭರವಸೆ ತಂಡಕ್ಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.