ಮೈಗಾಡ್, ಹೀರೋಗಿಂತ ನಿಮಗೇ ವಿಶಲ್ ಜಾಸ್ತಿ: ಡಾ.ಸುಧಾಕರ್ ಹೊಗಳಿದ ರಮ್ಯಾ ಮೇಲೆ 'ಕೈ'ನಾಯಕರ ಕೆಂಗಣ್ಣು; ಮೋಹಕ ತಾರೆಗೆ ಬಿಜೆಪಿ ಗಾಳ?
ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ನಡೆದ ‘ಚಿಕ್ಕಬಳ್ಳಾಪುರ ಉತ್ಸವ’ದಲ್ಲಿ ನಟಿ ರಮ್ಯಾ ಪಾಲ್ಗೊಂಡು ಅಚ್ಚರಿ ಮೂಡಿಸಿದರು. ಬಳಿಕ ಮಾತನಾಡಿದ ರಮ್ಯಾ, ಸುಧಾಕರ್ ಅವರನ್ನು ಹೊಗಳಿದರು.

ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ನಡೆದ ‘ಚಿಕ್ಕಬಳ್ಳಾಪುರ ಉತ್ಸವ’ದಲ್ಲಿ ನಟಿ ರಮ್ಯಾ ಪಾಲ್ಗೊಂಡು ಅಚ್ಚರಿ ಮೂಡಿಸಿದರು. ಬಳಿಕ ಮಾತನಾಡಿದ ರಮ್ಯಾ, ಸುಧಾಕರ್ ಅವರನ್ನು ಹೊಗಳಿದರು.
ಸುಧಾಕರ್ ಅವರು ನನ್ನ ತಂದೆಗೆ ಮೊದಲು ಫ್ರೆಂಡ್, ಆಮೇಲೆ ನನಗೆ ಅವರು ಪರಿಚಯ ಆದರು ಎಂದು ಹೇಳಿದರು. ಈ ವೇಳೆ ಜೋರಾಗಿ ಚಪ್ಪಾಳೆ ಹಾಗೂ ವಿಶಲ್ ಸದ್ದು ಕೇಳಿ ಬಂತು, ಇದನ್ನು ಗಮನಿಸಿದ ರಮ್ಯಾ.. ‘ಮೈ ಗಾಡಾ, ಹೀರೋಗಿಂತ ನಿಮಗೆ ಜಾಸ್ತಿ ವಿಶಲ್.. ಡಾ.ಸುಧಾಕರ್ ಅವರೇ ಎಂದರು.
ನಾವು ಸುಧಾಕರ್ ಜೊತೆ ಎಷ್ಟೇ ಹತ್ತಿರವಾಗಿದ್ದರೂ ಅವರ ಮುಂದೆ ಈ ಮಾತನ್ನು ಹೇಳಿರಲಿಲ್ಲ. ನನಗೆ ತುಂಬಾ ಹೆಮ್ಮೆ ಆಗ್ತಿದೆ. ಈ ಮಾತನ್ನು ಇಷ್ಟು ದಿನ ಹೇಳಿರಲಿಲ್ಲ. ಯಾಕಂದ್ರೆ ನಿವು ರಾಜಕೀಯ ಕುಟುಂಬದಿಂದ ಬಂದವರಲ್ಲ. ಆದರೂ ರಾಜಕೀಯಕ್ಕೆ ಬಂದು ತುಂಬಾ ಹೆಸರನ್ನು ಪಡೆದಿದ್ದೀರಿ ಖುಷಿ ಆಗುತ್ತಿದೆ ಎಂದು ಸುಧಾಕರ್ ಅವರನ್ನು ರಮ್ಯಾ ಹಾಡಿ ಹೊಗಳಿದರು. ಎಷ್ಟೇ ಕಷ್ಟವಿದ್ದರೂ ಕೂಡ ಎಲ್ಲವನ್ನು ಎದುರಿಸಿ ಇವತ್ತು ಚಿಕ್ಕಬಳ್ಳಾಪುರವನ್ನು ಇಷ್ಟು ಅಭಿವೃದ್ಧಿ ಮಾಡಿ ಹೆಸರು ಪಡೆದಿದ್ದೀರಿ. ಇಲ್ಲಿನ ಜನರ ಮುಖದಲ್ಲಿ ಖುಷಿ ನೋಡಿದರೆ ಇದು ಗೊತ್ತಾಗುತ್ತೆ, ಅವರು ನಿಮ್ಮೊಂದಿಗೆ ಸಂತೋಷವಾಗಿದ್ದಾರೆ ಅಂತ ಎಂದು ಹಾಡಿಹೊಗಳಿದ್ದರು.
ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ನಟಿ ರಮ್ಯಾ ಸಾರ್ವಜನಿಕ ವೇದಿಕೆಯಲ್ಲಿ ಬಿಜೆಪಿ ಸಚಿವರ ಬಗ್ಗೆ ಹೊಗಳಿಕೆ ಮಾತನಾಡಿದ್ದು ಕೈ ಮುಖಂಡರಿಗೆ ಇರಿಸು ಮುರುಸು ಉಂಟು ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ರಮ್ಯಾ ಅವರ ನಡೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆಯಂತೆ.
ಈ ನಡುವೆ ರಮ್ಯಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರಾ ಎಂಬ ಚರ್ಚೆ ಕೂಡ ರಾಜಕೀಯ ವಲಯದಲ್ಲಿ ಜೋರಾಗಿದೆ. ಜನವರಿ 7ರಿಂದ ಆರಂಭವಾಗಿ ಜನವರಿ 14ರ ವರೆಗೂ ಅದ್ಧೂರಿಯಾಗಿ ನಡೆದ ಚಿಕ್ಕಬಳ್ಳಾಪುರ ಉತ್ಸವ ಸಂಕ್ರಾಂತಿ ಹಬ್ಬದಂದು ಅದ್ದೂರಿಯಾಗಿ ತೆರೆಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


