ಸಿನಿಮಾ ಸುದ್ದಿ

ಗೌರಿ ಗಣೇಶ ಹಬ್ಬ ದಿನ ಜ್ಯೂನಿಯರ್ ಪ್ರಿನ್ಸ್ ಬರಮಾಡಿಕೊಂಡ ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಆಕ್ಷನ್ ಪ್ರಿನ್ಸ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ಧ್ರುವ ಸರ್ಜಾ (Dhruva Sarja) ಪತ್ನಿ ಪ್ರೇರಣಾ ಗಂಡು ಮಗುವಿಗೆ ಇಂದು ಗೌರಿ ಗಣೇಶ ಹಬ್ಬದ ಶುಭದಿನ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

ಗೌರಿ ಗಣೇಶ ಹಬ್ಬ ದಿನ ಜ್ಯೂನಿಯರ್ ಪ್ರಿನ್ಸ್ ಬರಮಾಡಿಕೊಂಡ ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
ಧ್ರುವ ಸರ್ಜಾ ದಂಪತಿ
Published On :

ಬೆಂಗಳೂರು: ಆಕ್ಷನ್ ಪ್ರಿನ್ಸ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ಧ್ರುವ ಸರ್ಜಾ  (Dhruva Sarja) ಪತ್ನಿ ಪ್ರೇರಣಾ ಗಂಡು ಮಗುವಿಗೆ ಇಂದು ಗೌರಿ ಗಣೇಶ ಹಬ್ಬದ ಶುಭದಿನ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. 

ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಇತ್ತೀಚೆಗಷ್ಟೇ ಪತ್ನಿ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಧ್ರುವ ಸರ್ಜಾ ತಮ್ಮ ಅಣ್ಣ ಚಿರು ಸರ್ಜಾ ಸಮಾಧಿಯಿರುವ ಫಾರ್ಮ್ ಹೌಸ್ ನಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದರು.

ಧ್ರುವ ಸರ್ಜಾ ಹಾಗೂ ಪ್ರೇರಣಾ 2019ರಲ್ಲಿ ಮದುವೆ ಆದರು. ಕಳೆದ ವರ್ಷ ಅಕ್ಟೋಬರ್​ 2ರಂದು ಧ್ರುವ ಸರ್ಜಾಗೆ ಹೆಣ್ಣು ಮಗು ಜನಿಸಿತು. ಈಗ ಅವರು ಮತ್ತೊಮ್ಮೆ ತಂದೆ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.