ಸಿನಿಮಾ ಸುದ್ದಿ

ನನ್ನ ಮೇಲೆ ನನಗೆ ನಂಬಿಕೆ ಇಲ್ಲದಿದ್ದರೆ ನಾನು ಇಲ್ಲಿ ಇರುತ್ತಿರಲಿಲ್ಲ: ಅಭಿಷೇಕ್ ಅಂಬರೀಶ್

ಅಭಿಷೇಕ್ ಅಂಬರೀಶ್ ಅವರು ನಟನಾ ಪರಂಪರೆಯಿಂದ ಬಂದವರು. ಹೀಗಾಗಿ ತಮ್ಮ ನಟನಾ ಪಯಣದಲ್ಲಿ ಪರಂಪರೆಯ ಭಾರವನ್ನು ಎದುರಿಸುತ್ತಿದ್ದಾರೆ. ಖ್ಯಾತ ನಟರಾದ ಅಂಬರೀಶ್ ಮತ್ತು ಸುಮಲತಾ ಅವರ ಪುತ್ರನಾಗಿರುವ ಅಭಿಷೇಕ್ ಅವರು ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುವ ಗುರಿ ಹೊಂದಿದ್ದಾರೆ.

ನನ್ನ ಮೇಲೆ ನನಗೆ ನಂಬಿಕೆ ಇಲ್ಲದಿದ್ದರೆ ನಾನು ಇಲ್ಲಿ ಇರುತ್ತಿರಲಿಲ್ಲ: ಅಭಿಷೇಕ್ ಅಂಬರೀಶ್
ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್
Published On :

ಅಭಿಷೇಕ್ ಅಂಬರೀಶ್ ಅವರು ನಟನಾ ಪರಂಪರೆಯಿಂದ ಬಂದವರು. ಹೀಗಾಗಿ ತಮ್ಮ ನಟನಾ ಪಯಣದಲ್ಲಿ ಪರಂಪರೆಯ ಭಾರವನ್ನು ಎದುರಿಸುತ್ತಿದ್ದಾರೆ. ಖ್ಯಾತ ನಟರಾದ ಅಂಬರೀಶ್ ಮತ್ತು ಸುಮಲತಾ ಅವರ ಪುತ್ರನಾಗಿರುವ ಅಭಿಷೇಕ್ ಅವರು ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುವ ಗುರಿ ಹೊಂದಿದ್ದಾರೆ.

ನವೆಂಬರ್ 24 ರಂದು ಅಭಿಷೇಕ್ ಅಭಿನಯದ ಎರಡನೇ ಚಿತ್ರ, ಬ್ಯಾಡ್ ಮ್ಯಾನರ್ಸ್ ಬಿಡುಗಡೆಗೆ ಸಿದ್ಧವಾಗಿದ್ದು, ಸಿನಿಮಾದ ಬಗ್ಗೆ ಮಾತನಾಡಿರುವ ಅಭಿಷೇಕ್ ಅಂಬರೀಶ್, ಚಿತ್ರದಲ್ಲಿ ತಮ್ಮದು ಮಫ್ತಿಯಲ್ಲಿರುವ ಪೊಲೀಸ್ ಅಧಿಕಾರಿಯ ಪಾತ್ರ ಎಂದು ಹೇಳಿಕೊಂಡಿದ್ದಾರೆ.

"ಈ ಉದ್ಯಮದಲ್ಲಿ, ನಿರೀಕ್ಷೆಗಳು ಅಪಾರವಾಗಿವೆ. ನನ್ನಂತಹ ನಟನಾ ಪರಂಪರೆಯನ್ನು ಹೊಂದಿರುವವರ ಬಗ್ಗೆ ಇನ್ನೂ ಹೆಚ್ಚಿನ ನಿರೀಕ್ಷೆಗಳು ಇರುತ್ತವೆ” ಎಂದು ಅಭಿಷೇಕ್ ಹೇಳಿದ್ದಾರೆ.

ಹೀರೋ ಆಗಲು ಬೇಕಾದ ಗುಣಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್, ಆತ್ಮ ವಿಶ್ವಾಸ ಇರಬೇಕು. "ನನ್ನ ಮೇಲೆ ನನಗೆ ನಂಬಿಕೆ ಇಲ್ಲದಿದ್ದರೆ ನಾನು ಇಲ್ಲಿ ಇರುತ್ತಿರಲಿಲ್ಲ" ನಾಯಕನ ಗುಣಗಳು ಒಬ್ಬರಿಂದ ಒಬ್ಬರಿಗೆ ವ್ಯಾಪಕವಾಗಿ ಬದಲಾಗುತ್ತವೆ. ನಾಯಕರು ತಮ್ಮ ನಟನೆ, ಮಾತು, ನಡವಳಿಕೆ, ಫೈಟ್ ಮತ್ತು ನೃತ್ಯ ಶೈಲಿಗಳಲ್ಲಿ ಹೇಗೆ ಭಿನ್ನರಾಗಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ. “ನನ್ನ ಪ್ರಕಾರ, ನಾಯಕನಾಗಲು ಒಂದೇ ಸೂತ್ರವಿಲ್ಲ; ಪ್ರತಿಯೊಂದೂ ಭಿನ್ನವಾಗಿರುತ್ತದೆ. ಒಬ್ಬ ನಾಯಕನಾಗಿ, ನಾವು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಮತ್ತು ಉತ್ತಮ ಚಿತ್ರಗಳ ಮೂಲಕ ಉತ್ತಮ ಮನರಂಜನೆಯನ್ನು ನಿರಂತರವಾಗಿ ನೀಡಬೇಕು ಎಂದಿದ್ದಾರೆ.

“ಈ ಚಿತ್ರವು ಒಂದು ಪ್ರಮುಖ ಪ್ರಶ್ನೆಯನ್ನು ಮುಂದಿಡುತ್ತದೆ ಮತ್ತು ವಿಶೇಷ ಕಥಾಹಂದರವನ್ನು ಹೊಂದಿದೆ. ಇದು ರೂಟಿನ್ ಸಿನಿಮಾ ಅಂತೂ ಅಲ್ಲ. ಇದೊಂದು ವಿಶೇಷ ಚಿತ್ರ ಎಂದು ಅಭಿಷೇಕ್ ಹೇಳಿದ್ದಾರೆ.

ಈ ಚಿತ್ರವು ವಿಶಿಷ್ಟವಾದ ಸಿಗ್ನೇಚರ್ ಶೈಲಿಯನ್ನು ಹೊಂದಿರುವ ಸೂರಿಯೊಂದಿಗೆ ಅಭಿಷೇಕ್ ಅವರು ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ. 

ಬ್ಯಾಡ್ ಮ್ಯಾನರ್ಸ್‌ ಚಿತ್ರ ತಂಡದೊಂದಿಗೆ ಕೆಲಸ ಮಾಡುವಾಗ ಅಭಿಷೇಕ್ ಹಲವು ಸವಾಲುಗಳನ್ನು ಎದುರಿಸಿದ್ದು, ಅವುಗಳ ಬಗ್ಗೆಯೂ ಮಾತನಾಡಿದ್ದಾರೆ. “ಸ್ಕ್ರಿಪ್ಟ್ ಓದಿದ ನಂತರ, ಪಾತ್ರವು ನನಗೆ ಸಾಕಷ್ಟು ಹತ್ತಿರವಾಗಿದೆ. ಸೆಟ್ಟಿಂಗ್ ಮತ್ತು ಹಿನ್ನೆಲೆ ಭಿನ್ನವಾಗಿರಬಹುದಾದರೂ, ಕೆಲವು ಸೂಕ್ಷ್ಮ ವ್ಯತ್ಯಾಸಗಳು, ಅಭ್ಯಾಸಗಳು ಮತ್ತು ನಡವಳಿಕೆಗಳು, ನಾನು ಹೇಗೆ ಪ್ರತಿಕ್ರಿಯಿಸುತ್ತೇನೆ ಮತ್ತು ಸನ್ನಿವೇಶಗಳನ್ನು ಹೇಗೆ ಗ್ರಹಿಸುತ್ತೇನೆ ಎಂಬುದನ್ನು ಅವಲಂಭಿಸಿತ್ತು ಎಂದಿದ್ದಾರೆ.

ಅಭಿಷೇಕ್ ಅವರು ತಮ್ಮ ತಾಯಿ ಸುಮಲತಾ, ಪತ್ನಿ ಅವಿವಾ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಈ ಚಿತ್ರವನ್ನು ತೋರಿಸಿದ್ದು, ಅವರ ಪ್ರತಿಕ್ರಿಯೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ, ದರ್ಶನ್ ಚಿತ್ರಕ್ಕೆ ಫೈವ್ ಸ್ಟಾರ್ ರೇಟಿಂಗ್ ನೀಡಿದ್ದು, ಅವರ ಚೊಚ್ಚಲ ಚಿತ್ರ ಅಮರ್‌ನಿಂದ ಉತ್ತಮ ನಟನಾಗಿ ಬೆಳೆದಿರುವ ಬಗ್ಗೆ ಶ್ಲಾಘಿಸಿದರು ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.