ಸಿನಿಮಾ ಸುದ್ದಿ

ದರ್ಶನ್ ಅಭಿನಯದ 'ಕಾಟೇರ' ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನ ರಾಮ್ ನಟನೆ

ಬುದ್ಧಿವಂತ, ಧೈರ್ಯಶಾಲಿ ಮತ್ತು ಆಕರ್ಷಕ ಪಾತ್ರ ಎಂದು ಎಂದು ನಿರ್ದೇಶಕ ತರುಣ್ ಕಿಶೋರ್ ಸುಧೀರ್ 'ಕಾಟೇರ'ದಲ್ಲಿನ ತಮ್ಮ ನಾಯಕಿಯನ್ನು ವಿವರಿಸುತ್ತಾರೆ. ದರ್ಶನ್ ಅಭಿನಯದ ಆ್ಯಕ್ಷನ್ ಕಮರ್ಷಿಯಲ್ ಎಂಟರ್‌ಟೈನರ್‌ ಮೂಲಕ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ದರ್ಶನ್ ಅಭಿನಯದ 'ಕಾಟೇರ' ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನ ರಾಮ್ ನಟನೆ
ರಾಧನಾ ರಾಮ್
Published On :

ಬುದ್ಧಿವಂತ, ಧೈರ್ಯಶಾಲಿ ಮತ್ತು ಆಕರ್ಷಕ ಪಾತ್ರ ಎಂದು ಎಂದು ನಿರ್ದೇಶಕ ತರುಣ್ ಕಿಶೋರ್ ಸುಧೀರ್ 'ಕಾಟೇರ'ದಲ್ಲಿನ ತಮ್ಮ ನಾಯಕಿಯನ್ನು ವಿವರಿಸುತ್ತಾರೆ. ದರ್ಶನ್ ಅಭಿನಯದ ಆ್ಯಕ್ಷನ್ ಕಮರ್ಷಿಯಲ್ ಎಂಟರ್‌ಟೈನರ್‌ ಮೂಲಕ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಚಿತ್ರತಂಡ ಇತ್ತೀಚೆಗಷ್ಟೇ ಹಬ್ಬದ ಸಂದರ್ಭದಲ್ಲಿ ನಾಯಕಿಯ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಿದೆ ಮತ್ತು ಅವರ ಪಾತ್ರದ ಹೆಸರು ಪ್ರಭಾವತಿ ಎಂದು ಹಂಚಿಕೊಂಡಿದೆ. ಫಸ್ಟ್ ಲುಕ್‌ಗೆ ನೀಡಿರುವ ಶೀರ್ಷಿಕೆಯಲ್ಲಿ, 'ಒಂದು ಶಕ್ತಿಯುತ ಆತ್ಮ, ತನ್ನ ಬೆರಗುಗೊಳಿಸುವ ವರ್ತನೆಯಿಂದ ನಿಮ್ಮನ್ನು ಮೋಡಿ ಮಾಡುತ್ತದೆ. 70ರ ದಶಕದಲ್ಲಿ ಹಳ್ಳಿಯ ಹಿನ್ನೆಲೆಯ ಈ ಚಿತ್ರದಲ್ಲಿ ರಾಧನ ರಾಮ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ' ಎಂದು ಬರೆಯಲಾಗಿದೆ.

'ರಾಧನಾ ಅವರು ಚಿತ್ರೀಕರಣಕ್ಕೆ ಚೆನ್ನಾಗಿ ಸಿದ್ಧಳಾಗಿದ್ದಾರೆ ಮತ್ತು ಈ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೊಸಬರಿಂದ ಬಂದಿರುವ ಇವರ ಪಾತ್ರ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸಿರುವ ಅವರು ಈ ಚಿತ್ರಕ್ಕೆ ಸಾಕಷ್ಟು ಕೊಡುಗೆ ನೀಡಲಿದ್ದಾರೆ' ಎನ್ನುತ್ತಾರೆ ನಿರ್ದೇಶಕ ತರುಣ್.

ಈಮಧ್ಯೆ, ಚಿತ್ರತಂಡ ಸೋಮವಾರದಿಂದ ಮುಂದಿನ ಚಿತ್ರೀಕರಣವನ್ನು ಪುನರಾರಂಭಿಸಲಿದೆ ಮತ್ತು ಮುಂದಿನ 25 ದಿನಗಳಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ನಿರ್ಣಾಯಕ ಭಾಗಗಳನ್ನು ಪೂರ್ಣಗೊಳಿಸಲಿದೆ. 

ಕಾಟೇರವನ್ನು ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಮತ್ತು ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ. ಈ ಚಿತ್ರದಲ್ಲಿ ದಕ್ಷಿಣ ಭಾರತದ ನಟ ಜಗಪತಿ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.