ರಾಮ್ ಚರಣ್ ದಂಪತಿ ಪುತ್ರಿ ಕ್ಲಿಂಕಾರ ಹೆಸರಿನ ಅರ್ಥ ಇದು...
ಉಪಾಸನಾ ಕಮ್ಮಿನೇನಿ ಕೊನಿದೆಲಾ ಹಾಗೂ ರಾಮ್ ಚರಣ್ ತಮ್ಮ ಪುತ್ರಿಗೆ ನಾಮಕರಣ ಮಾಡಿದ್ದು, ಹೆಸರು ಘೋಷಿಸಿದ್ದಾರೆ.

ಹೈದರಾಬಾದ್: ಉಪಾಸನಾ ಕಮ್ಮಿನೇನಿ ಕೊನಿದೆಲಾ ಹಾಗೂ ರಾಮ್ ಚರಣ್ ತಮ್ಮ ಪುತ್ರಿಗೆ ನಾಮಕರಣ ಮಾಡಿದ್ದು, ಹೆಸರು ಘೋಷಿಸಿದ್ದಾರೆ.
"ಕ್ಲಿಂಕಾರ ಕೊನಿದೆಲಾ" ರಾಮ್ ಚರಣ್ ದಂಪತಿ ಪುತ್ರಿಯ ಹೆಸರಾಗಿದ್ದು, ವಿಶಿಷ್ಟವಾದ ಹೆಸರಾಗಿದೆ. ಮಗಳ ನಾಮಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚಿರಂಜೀವಿ ಕುಟುಂಬ, "ಚೆಂಚು ಬುಡಗಟ್ಟು ದೇವಿ ಭೌರಮ್ಮ ದೇವಿಯ ಆಶೀರ್ವಾದದಿಂದ ನಾವು ನಮ್ಮ ಮೊಮ್ಮಗಳಿಗೆ ಕ್ಲಿಂಕಾರ ಎಂದು ಲಲಿತಾ ಸಹಸ್ರನಾಮದಿಂದ ಆಯ್ಕೆ ಮಾಡಿದ ಹೆಸರನ್ನು ನಾಮಕರಣ ಮಾಡಿದ್ದೇವೆ. ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ, ಶುದ್ಧೀಕರಿಸುವ ಶಕ್ತಿ ಎಂಬುದು ಈ ಹೆಸರಿನ ಅರ್ಥವಾಗಿದೆ. ಲಲಿತಾ ಸಹಸ್ರನಾಮ ದೇವಿ ಲಲಿತಾ ದೇವಿಯ 1000 ಹೆಸರುಗಳನ್ನು ಹೊಂದಿದೆ.
ಘೋಷಣೆಗೆ ಚಿರಂಜೀವಿ ದಂಪತಿ, ರಾಮ್ ಚರಣ್ ಪತ್ನಿಯ ಪೋಷಕರು ಘೋಷಣೆಗೆ ಸಹಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


