ಸಿನಿಮಾ ಸುದ್ದಿ

ಮಂಗಳೂರು: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ, ಚಿತ್ರಗಳ ಯಶಸ್ಸಿಗಾಗಿ ಪ್ರಾರ್ಥನೆ

ನನ್ನ ಸ್ನೇಹಿತರೆಲ್ಲರು ಹೇಳಿದ್ರು, ಇಲ್ಲಿನ ಕೊರಗಜ್ಜನ ಸನ್ನಿಧಿಗೆ ಬಂದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬಹಳ ಪವರ್​ಫುಲ್ ಕೊರಗಜ್ಜ ಅಂತ ಹಾಗಾಗಿ ಭೇಟಿ ನೀಡಿದೆ ಎಂದು ರಚಿತಾ ಹೇಳಿದರು.

ಮಂಗಳೂರು: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ, ಚಿತ್ರಗಳ ಯಶಸ್ಸಿಗಾಗಿ ಪ್ರಾರ್ಥನೆ
ಕೊರಗಜ್ಜ ದೇವಾಲಯಕ್ಕೆ ರಚಿತಾ ರಾಮ್ ಭೇಟಿ
Published On :

ಮಂಗಳೂರು: ಸ್ಯಾಂಡಲ್‌ವುಡ್‌ನ ಡಿಂಪಲ್ ಬೆಡಗಿ ಎಂದೇ‌ ಖ್ಯಾತರಾದ ಸಿನಿಮಾ ನಟಿ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ ನೀಡಿ ತಮ್ಮ ನಟನೆಯ ಹೊಸ ಚಿತ್ರಗಳಾದ ಮ್ಯಾಟ್ನಿ, ಬ್ಯಾಡ್ ಮ್ಯಾನರ್ಸ್ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ನನ್ನ ಸ್ನೇಹಿತರೆಲ್ಲರು ಹೇಳಿದ್ರು, ಇಲ್ಲಿನ ಕೊರಗಜ್ಜನ  ಸನ್ನಿಧಿಗೆ ಬಂದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬಹಳ ಪವರ್​ಫುಲ್ ಕೊರಗಜ್ಜ ಅಂತ ಹಾಗಾಗಿ ಭೇಟಿ ನೀಡಿದೆ ಎಂದು ರಚಿತಾ ಹೇಳಿದರು.

ಕೊರಗಜ್ಜನ‌ ಕ್ಷೇತ್ರವು ಪ್ರಾಕೃತಿಕ ಸೌಂದರ್ಯದಿಂದ‌ಕೂಡಿದ್ದು, ತುಂಬಾ ಚೆನ್ನಾಗಿದೆ. ಮುಂದಿನ ಜೂನ್ ತಿಂಗಳಲ್ಲಿ ತೆರೆ ಕಾಣಲಿರುವ ಮ್ಯಾಟ್ನಿ ಮತ್ತು ಬ್ಯಾಡ್ ಮ್ಯಾನರ್ಸ್ ಚಿತ್ರಗಳು ಯಶಸ್ಸು ಕಾಣಲಿ ಎಂದು ಕೊರಗಜ್ಜನಲ್ಲಿ ಪ್ರಾರ್ಥಿಸಿದೆ' ಎಂದು ರಚಿತಾರಾಮ್ ಹೇಳಿದರು. ಕೊರಗಜ್ಜನ ಆದಿ ಕ್ಷೇತ್ರದ ವತಿಯಿಂದ ರಚಿತಾ ರಾಮ್ ಅವರನ್ನ ಶಾಲು ಹೊದಿಸಿ ಅಭಿನಂದಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.