ನಿರ್ದೇಶಕ ಜಡೇಶ್ ಹಂಪಿ ಜೊತೆ ದುನಿಯಾ ವಿಜಯ್ ಸಿನಿಮಾ ಘೋಷಣೆ
ಜಂಟಲ್ ಮ್ಯಾನ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದಿದ್ದ ಜಡೇಶ್ ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ‘ಗುರು ಶಿಷ್ಯರು’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು.

ಜಂಟಲ್ ಮ್ಯಾನ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದಿದ್ದ ಜಡೇಶ್ ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ‘ಗುರು ಶಿಷ್ಯರು’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ‘ಗುರು ಶಿಷ್ಯರು’ ಸಿನಿಮಾ ಜಡೇಶ್ಗೆ ದೊಡ್ಡ ಗೆಲುವನ್ನು ತಂದುಕೊಟ್ಟಿತು. ಈಗ ದುನಿಯಾ ವಿಜಯ್ಗಾಗಿ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.
ವಿಜಯ್ ಅವರಿಗೆ ಬರೆದಿರುವ ಕಥೆಯಲ್ಲಿಯೂ ಅಂತಹ ಅಂಶಗಳಿವೆ. ‘ವೀರಸಿಂಹ ರೆಡ್ಡಿ’ ಸಿನಿಮಾದ ಮೂಲಕ ಅವರು ತೆಲುಗು ಆಡಿಯನ್ಸ್ಗೂ ಪರಿಚಯವಾಗಿದ್ದಾರೆ. ಈ ಎಲ್ಲಾ ಕಾರಣಗಳನ್ನು ಇಟ್ಟುಕೊಂಡು ‘ವಿಕೆ 29’ನ್ನು ದೊಡ್ಡ ಸಿನಿಮಾವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಕಥೆ ಕೂಡ ಯೂನಿವರ್ಸಲ್ ಆಗಿ ಕನೆಕ್ಟ್ ಆಗುವಂತಹದ್ದೇ ಆಗಿದೆ’ ಎನ್ನುತ್ತಾರೆ ಜಡೇಶ್ ಕುಮಾರ್.
ವಿಜಯ್ ಅವರಿಗೆ ಬರೆದಿರುವ ಕಥೆ ದೊಡ್ಡ ಕ್ಯಾನ್ವಾಸ್ನಲ್ಲಿ ನಿರ್ಮಾಣವಾಗಲಿರುವ ಚಿತ್ರ. ನಾನು ಬರೆದಿರುವ ಕಥೆ ಸ್ವಾತಂತ್ರ್ಯದ ನಂತರ ನಡೆಯುತ್ತದೆ. ಕೆಲವು ನೈಜ ಘಟನೆಗಳನ್ನು ಆಧರಿಸಿ ಈ ಕಥೆ ಬರೆದಿದ್ದೇನೆ. ಕಂಪ್ಲೀಟ್ ಆ್ಯಕ್ಷನ್ ಇರುತ್ತದೆ. ವಿಜಯ್ ಅವರ ಕರಿಯರ್ನಲ್ಲಿ ಮತ್ತು ನನ್ನ ಕರಿಯರ್ನಲ್ಲಿಇದೊಂದು ರೀತಿಯ ವಿಭಿನ್ನ ಆಲೋಚನೆ ಮತ್ತು ಪ್ರಯತ್ನ ಎನ್ನಬಹುದು’ ಎಂದು ಹೇಳಿದ್ದಾರೆ ಜಡೇಶ್ ಕುಮಾರ್.
ವಿಜಯ್ ಅವರು ಸದ್ಯ ‘ಭೀಮ’ ಸಿನಿಮಾದ ಕೆಲಸದಲ್ಲಿದ್ದು, ಏಪ್ರಿಲ್ ಅಷ್ಟೊತ್ತಿಗೆ ಅದನ್ನು ಮುಗಿಸುತ್ತಾರೆ. ಅದಾದ ಮೇಲೆ ನಮ್ಮ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ‘ಭೀಮ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಜಗದೀಶ್ ಮತ್ತು ಕೃಷ್ಣ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ತಂತ್ರಜ್ಞರ ಆಯ್ಕೆಯಾಗಬೇಕಿದೆ. ಭೀಮಾ ಸಿನಿಮಾಗಾಗಿ ನಟ ವಿಜಯ್ ಅವರು ದೇಹದ ತೂಕ ಇಳಿಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


