ಸ್ಯಾಂಡಲ್'ವುಡ್'ಗೆ ಎಂಟ್ರಿ ಕೊಡಲು 'ಭಾಗ್ಯಲಕ್ಷ್ಮೀ' ಧಾರಾವಾಹಿ ಖ್ಯಾತಿಯ ಭೂಮಿಕಾ ರಮೇಶ್ ಸಜ್ಜು
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರದ ಮೂಲಕ ಮನೆಮಾತಾಗಿರುವ ನಟಿ ಭೂಮಿಕಾ ರಮೇಶ್ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ.

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರದ ಮೂಲಕ ಮನೆಮಾತಾಗಿರುವ ನಟಿ ಭೂಮಿಕಾ ರಮೇಶ್ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ.
2015 ಮತ್ತು 2019 ರ ನಡುವೆ ಹುಲಿಯೂರುದುರ್ಗದಲ್ಲಿ ನಡೆದ ವೈದ್ಯಕೀಯ ಸಂಶೋಧನೆಯ ನೈಜ ಘಟನೆಯನ್ನು ಆಧರಿಸಿದ ಬರಹಗಾರ-ನಿರ್ದೇಶಕ ನಾಗರಾಜ್ ಎಂಜಿ ಅವರ ಮುಂಬರುವ ಚಿತ್ರದಲ್ಲಿ ಭೂಮಿಕಾ ನಟಿಸಲಿದ್ದಾರೆ.
ಇದನ್ನೂ ಓದಿ: ಮತ್ತೊಮ್ಮೆ ಕ್ರೇಜಿಸ್ಟಾರ್ ಜೊತೆಗೂಡಿದ ನಟಿ ಅಪೂರ್ವ
ಚಿತ್ರವನ್ನು ರಘು ಎಸ್ ನಿರ್ಮಾಣ ಮಾಡಿದ್ದಾರೆ. ಜೊತೆಗೆ ನಿರ್ಮಾಣದಲ್ಲಿ ಮಂಜು ಡಿ.ಟಿ, ಸಿದ್ದಮ್ಮ ಕಂಬಾರ, ಮಾಂತೇಶ ನೀಲಪ್ಪ ಚೌಹಾಣ್, ವಿ. ಬೆಟ್ಟೇಗೌಡ ಕೈಜೋಡಿಸಿದ್ದಾರೆ. ಸಂಕಲನವನ್ನು ವೆಂಕಿ ಯುಡಿವಿ ಮಾಡಿದ್ದು, ಛಾಯಾಗ್ರಹಣವನ್ನು ವಿನಯ್ ಗೌಡ ನಿಭಾಯಿಸಿದ್ದಾರೆ. ಪ್ರವೀಣ್ ನಿಕೇತನ & ವಿಶಾಲ್ ಆಲಾಪ್ ಅವರು ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತವನ್ನು ಮಂಜು ಮಹದೇವ್ ನೀಡಿದ್ದು, ಹಾಡುಗಳಿಗೆ ಡಾ ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ಕೌರವ ವೆಂಕಟೇಶ್, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ಭೂಮಿಕಾ ಅವರು ವೈದ್ಯಕೀಯ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭೂಮಿಕಾ ಅವರಲ್ಲದೆ, ಚಿತ್ರದಲ್ಲಿ ಅಪ್ಪು ಬಡಿಗೆರೆ, ರವಿ ಕೆಆರ್ ಪೇಟೆ, ರಘುಶೆಟ್ಟಿ, ಸಾಗರ್ ರಾಮಾಚಾರಿ, ಜಗದೀಶ್ ಎಚ್.ಜಿ.ದೊಡ್ಡಿ, ಮಿಲನ ರಮೇಶ್, ದಿವ್ಯಾ, ಅಭಿನಯ, ಭಾಸ್ಕರ್, ಅನುಪಮಾ, ಮೈಕೋ ದೇವರಾಜ್, ಮತ್ತು ಆನಂದ್ ಪಟೇಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


