ಕೆಜಿಎಫ್‌ನ ಮುಂದಿನ ಭಾಗಗಳಲ್ಲಿ ರಾಕಿ ಭಾಯ್ ಪಾತ್ರದಲ್ಲಿ ಬೇರೆ ನಟರು ಕಾಣಿಸಿಕೊಳ್ಳಬಹುದು: ವಿಜಯ್ ಕಿರಗಂದೂರು
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಎರಡು ಆವೃತ್ತಿಗಳು ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿದವು. ಕೆಜಿಎಫ್ ಮೊದಲ ಭಾಗವು 2018ರಲ್ಲಿ ಬಿಡುಗಡೆಯಾಗಿತ್ತು. ಅದರ ಎರಡನೇ ಭಾಗವು 2022ರಲ್ಲಿ ಬಿಡುಗಡೆಯಾಯಾಗಿದ್ದು ಒಟ್ಟಾರೆ 1500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಎರಡು ಆವೃತ್ತಿಗಳು ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿದವು. ಕೆಜಿಎಫ್ ಮೊದಲ ಭಾಗವು 2018ರಲ್ಲಿ ಬಿಡುಗಡೆಯಾಗಿತ್ತು. ಅದರ ಎರಡನೇ ಭಾಗವು 2022ರಲ್ಲಿ ಬಿಡುಗಡೆಯಾಯಾಗಿದ್ದು ಒಟ್ಟಾರೆ 1500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಯಶ್ ಅವರು ರಾಕಿ ಭಾಯ್ ಪಾತ್ರವನ್ನು ಜನರು ಮೆಚ್ಚಿದ್ದಾರೆ. ಅದೇ ಸಮಯದಲ್ಲಿ, ಯಶ್ ಅವರ ಅಭಿಮಾನಿಗಳು ಕೆಜಿಎಫ್ ಫ್ರಾಂಚೈಸಿಯ ಮೂರನೇ ಭಾಗಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕೆಜಿಎಫ್: ಅಧ್ಯಾಯ 3 ಚಿತ್ರೀಕರಣ 2025ರಲ್ಲಿ ಪ್ರಾರಂಭವಾಗಲಿದೆ ಎಂದು ಹೊಂಬಾಳೆ ಫಿಲಂಸ್ ನಿರ್ಮಾಪಕ ವಿಜಯ್ ಕಿರಂಗದೂರು ಘೋಷಿಸಿದ್ದರು. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಕೆಜಿಎಫ್ 3 ಬರುತ್ತಿದೆ ಎಂದು ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ ಚಿತ್ರಕ್ಕಾಗಿ ಅವರು ಬಹಳ ಸಮಯ ಕಾಯಬೇಕಾಗಿದೆ.
ಚಿತ್ರದಲ್ಲಿ ರಾಕಿ ಭಾಯ್ ಸ್ಟೈಲ್ ನಲ್ಲಿ ಯಶ್ ಜನರ ಮನಗೆದ್ದಿದ್ದಾರೆ. ಈ ಪ್ಯಾನ್ ಇಂಡಿಯಾ ಚಿತ್ರ ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಸದ್ದು ಮಾಡಿತ್ತು. ಅದೇ ಸಮಯದಲ್ಲಿ, ತಯಾರಕರು ಕೆಜಿಎಫ್: ಅಧ್ಯಾಯ 2ರ ಕೊನೆಯಲ್ಲಿ ಭಾಗ 3ರ ಸುಳಿವು ನೀಡಿದರು. ಆದಾಗ್ಯೂ, ಈಗ ಅವರು ಅಧ್ಯಾಯ 3 ಗಾಗಿ ಇನ್ನೂ ಸ್ವಲ್ಪ ಕಾಯಬೇಕಾಗಿದೆ. ಇನ್ನು ಜೇಮ್ಸ್ ಬಾಂಡ್ ಸಿನಿಮಾಗಳಂತೆ ಕೆಜಿಎಫ್ ಸಹ 4, 5 ಭಾಗಗಳು ಬರುತ್ತದೆ ಎಂದು ನಿರ್ಮಾಪಕರು ಸುಳಿವು ನೀಡಿದ್ದರು. ಇದೀಗ ಹೊಸ ಸುದ್ದಿ ಏನೆಂದರೆ ಭಾಗ 5ರ ನಂತರ ಕೆಜಿಎಫ್ ಚಿತ್ರದ ರಾಕಿ ಭಾಯ್ ಆಗಿ ಬೇರೆ ಹೀರೋಗಳು ನಟಿಸಬಹುದು ಎಂಬುದನ್ನು ನಿರ್ಮಾಪಕರು ತಿಳಿಸಿದ್ದಾರೆ.
ಯಶ್ ಅವರು ಜನವರಿ 8ರಂದು ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಯಶ್ ಅವರ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಅನೇಕ ನಟರು ಕೂಡ ಅವರಿಗೆ ವಿಶ್ ಮಾಡಿದ್ದರು. ಹುಟ್ಟು ಹಬ್ಬದ ಶುಭಾಶಯಗಳು ಯಶ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿತ್ತು. ಇನ್ನು ತಮ್ಮ ಹುಟ್ಟುಹಬ್ಬದ ದಿನ ಮುಂದಿನ ಚಿತ್ರದ ಬಗ್ಗೆ ಯಶ್ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸದ್ಯಕ್ಕೆ ಅಂತಹ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


