ಸಿನಿಮಾ ಸುದ್ದಿ

'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾದಲ್ಲಿ 12 ವರ್ಷಗಳ ನಂತರ ಕಾಣಿಸಿಕೊಳ್ಳಲಿದ್ದಾರೆ ದಿಗಂತ ಮತ್ತು ನಿಧಿ ಸುಬ್ಬಯ್ಯ ಜೋಡಿ

ನಿರ್ದೇಶಕ ಯೋಗರಾಜ್ ಭಟ್ ಅವರ ಪಂಚರಂಗಿ (2010) ಚಿತ್ರದ ಮೂಲಕ ಜನಪ್ರಿಯ ಆನ್ ಸ್ಕ್ರೀನ್ ಜೋಡಿಯಾಗಿದ್ದ ದಿಗಂತ್ ಮತ್ತು ನಿಧಿ ಸುಬಯ್ಯ ದಶಕದ ನಂತರ ಬೆಳ್ಳಿತೆರೆಯಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾದಲ್ಲಿ 12 ವರ್ಷಗಳ ನಂತರ ಕಾಣಿಸಿಕೊಳ್ಳಲಿದ್ದಾರೆ ದಿಗಂತ ಮತ್ತು ನಿಧಿ ಸುಬ್ಬಯ್ಯ ಜೋಡಿ
ನಟಿ ನಿಧಿ ಸುಬ್ಬಯ್ಯ
Published On :

ನಿರ್ದೇಶಕ ಯೋಗರಾಜ್ ಭಟ್ ಅವರ ಪಂಚರಂಗಿ (2010) ಚಿತ್ರದ ಮೂಲಕ ಜನಪ್ರಿಯ ಆನ್ ಸ್ಕ್ರೀನ್ ಜೋಡಿಯಾಗಿದ್ದ ದಿಗಂತ್ ಮತ್ತು ನಿಧಿ ಸುಬಯ್ಯ ದಶಕದ ನಂತರ ಬೆಳ್ಳಿತೆರೆಯಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಸಮರ್ಥ್ ಬಿ ಕಡಕೋಳ್ ನಿರ್ದೇಶನದ ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದಲ್ಲಿ ಇಬ್ಬರು ತೆರೆ ಹಂಚಿಕೊಳ್ಳಲಿದ್ದಾರೆ.

ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಸುತ್ತುವ ಚಿತ್ರದಲ್ಲಿ ದಿಗಂತ್ ನಾಯಕನಾಗಿ ಮತ್ತು ಧನು ಹರ್ಷ ನಾಯಕಿಯಾಗಿ ನಟಿಸಿದ್ದರೆ, ನಿಧಿ ಸುಬ್ಬಯ್ಯ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿಧಿ ಈಗಾಗಲೇ ಚಿತ್ರತಂಡವನ್ನು ಸೇರಿಕೊಂಡಿದ್ದು, ತಮ್ಮ ಭಾಗಗಳ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರವನ್ನು ಗುರುದತ್ತ ಗಾಣಿಗ ಮತ್ತು ನಿರ್ದೇಶಕ ಸಮರ್ಥ್ ಕಡಕೋಳ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣವಿದೆ.

ಅಣ್ಣಾ ಬಾಂಡ್, ಕೃಷ್ಣನ ಮ್ಯಾರೇಜ್ ಸ್ಟೋರಿಯಲ್ಲಿ ನಟಿಸಿದ್ದ ನಟಿ, ಅಜಬ್ ಗಜಾಬ್ ಲವ್ ಮೂಲಕ ಬಾಲಿವುಡ್‌ನಲ್ಲೂ ಕಾಣಿಸಿಕೊಂಡಿದ್ದರು. ಇದಲ್ಲದೆ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರೊಂದಿಗೆ ಸಣ್ಣ ಪರದೆಯಲ್ಲೂ ಕಾಣಿಸಿಕೊಂಡಿದ್ದರು.  ಪಿ. ವಾಸು ನಿರ್ದೇಶನದ ಶಿವರಾಜಕುಮಾರ್ ಅವರ ಆಯುಷ್ಮಾನ್ ಭವ ಸಿನಿಮಾದಲ್ಲಿ ನಿಧಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.