ಸಿನಿಮಾ ಸುದ್ದಿ

ಈ ರೀತಿಯ ಕಥೆ ಆಯ್ಕೆಗೆ ಧೈರ್ಯ ಬೇಕು: 'ವಿಕ್ರಾಂತ್ ರೋಣ' ಯಶಸ್ಸಿನ ಬಗ್ಗೆ ಎಸ್‌ಎಸ್ ರಾಜಮೌಳಿ ಮಾತು!

ಭಾರತದ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಎಸ್‌ಎಸ್ ರಾಜಮೌಳಿ 'ವಿಕ್ರಾಂತ್ ರೋಣ' ಚಿತ್ರದ ಯಶಸ್ಸಿಗೆ ನಟ ಕಿಚ್ಚ ಸುದೀಪ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೆ ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ರೀತಿಯ ಕಥೆ ಆಯ್ಕೆಗೆ ಧೈರ್ಯ ಬೇಕು: 'ವಿಕ್ರಾಂತ್ ರೋಣ' ಯಶಸ್ಸಿನ ಬಗ್ಗೆ ಎಸ್‌ಎಸ್ ರಾಜಮೌಳಿ ಮಾತು!
ರಾಜಮೌಳಿ-ಸುದೀಪ್
Published On :

ಚೆನ್ನೈ: ಭಾರತದ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಎಸ್‌ಎಸ್ ರಾಜಮೌಳಿ 'ವಿಕ್ರಾಂತ್ ರೋಣ' ಚಿತ್ರದ ಯಶಸ್ಸಿಗೆ ನಟ ಕಿಚ್ಚ ಸುದೀಪ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೆ ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 

'ವಿಕ್ರಾಂತ್ ರೋಣ' ಯಶಸ್ಸಿಗೆ ಅಭಿನಂದನೆಗಳು ಕಿಚ್ಚ ಸುದೀಪ್, ಈ ರೀತಿಯ ಕಥೆಗೆ ಆಯ್ಕೆಗೆ ಧೈರ್ಯ ಮತ್ತು ನಂಬಿಕೆ ಬೇಕು. ನೀವು ಮಾಡಿದ್ದೀರಿ ಮತ್ತು ಅದು ಫಲ ನೀಡಿದೆ. ಚಿತ್ರದ ಪ್ರಿಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಗುಡ್ಡಿ ಗೆಳೆಯ ಭಾಸ್ಕರ್ ಅವರ ಬಗ್ಗೆ ವಿಶೇಷವಾಗಿ ಹೇಳಲೇಬೇಕು ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ. 

ರಾಜಮೌಳಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸುದೀಪ್, 'ಧನ್ಯವಾದಗಳು ಎಸ್ ಎಸ್ ರಾಜಮೌಳಿ ಸರ್. ನಿಮ್ಮಿಂದ ಈ ಸಾಲುಗಳನ್ನು ಕೇಳಲು ನನಗೆ ತುಂಬಾ ಗೌರವವಾಗಿದೆ. ಭಾಸ್ಕರ್ ಸೇರಿದಂತೆ ನಮ್ಮೆಲ್ಲರಿಂದ ದೊಡ್ಡ ಧನ್ಯವಾದಗಳು ಮತ್ತು ಅಪ್ಪುಗೆ ಎಂದು ಹೇಳಿದ್ದಾರೆ.

ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಮೊದಲ ದಿನವೇ 35 ಕೋಟಿ ರೂಪಾಯಿ ಗಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.