ಸಿನಿಮಾ ಸುದ್ದಿ

ಜೊತೆ ಜೊತೆಯಲಿ ಸೀರಿಯಲ್​ ಸೆಟ್ ನಲ್ಲಿ 'ಆರ್ಯವರ್ಧನ್' ಕಿರಿಕ್: ಕಿರುತೆರೆಯಿಂದಲೇ ನಟ ಅನಿರುದ್ಧ್​ಗೆ ಗೇಟ್ ಪಾಸ್?

ಜೀ ಕನ್ನಡದಲ್ಲಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಸೆಟ್​ನಲ್ಲಿ ನಡೆದ ಫೈಟಿಂಗ್​ ಕಥೆಗೆ ಇದೀಗ ಟ್ವಿಸ್ಟ್​ ಸಿಕ್ಕಿದೆ. ನಟ ಅನಿರುದ್ಧ್​ಗೆ ಧಾರಾವಾಹಿಯಿಂದಲೇ ಗೇಟ್ ಪಾಸ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಜೊತೆ ಜೊತೆಯಲಿ ಸೀರಿಯಲ್​ ಸೆಟ್ ನಲ್ಲಿ 'ಆರ್ಯವರ್ಧನ್' ಕಿರಿಕ್: ಕಿರುತೆರೆಯಿಂದಲೇ ನಟ ಅನಿರುದ್ಧ್​ಗೆ ಗೇಟ್ ಪಾಸ್?
ಅನಿರುದ್ಧ್
Published On :

ಜೊತೆ ಜೊತೆಯಲ್ಲಿ ಸೆಟ್​ನಲ್ಲಿ ಅನಿರುದ್ಧ್​ ಮಾಡ್ತಿದ್ದ ಕಿರಿಕಿರಿಯಿಂದ ಇಡೀ ತಂಡವೇ ಬೇಸತ್ತು ಹೋಗಿತ್ತು. ಹೀಗಾಗಿ ಅನಿರುದ್ಧ್​ ವಿರುದ್ಧ ದೂರಿನ ಮಳೆಯಾಗಿದೆ. ಈ ಕುರಿತು ಸಭೆ ಕೂಡ ನಡೆದಿದ್ದು, ಸಭೆಯ ನಿರ್ಧಾರದಂತೆ ಅನಿರುದ್ಧ್​​ರನ್ನು ಸೀರಿಯಲ್​ನಿಂದ ಮಾತ್ರವಲ್ಲ ಕಿರುತೆರೆಯಿಂದಲೇ ಬ್ಯಾನ್ ಮಾಡಲಾಗಿದೆಯಂತೆ.

ಜೀ ಕನ್ನಡದಲ್ಲಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ  ಸೆಟ್​ನಲ್ಲಿ ನಡೆದ ಫೈಟಿಂಗ್​ ಕಥೆಗೆ ಇದೀಗ ಟ್ವಿಸ್ಟ್​ ಸಿಕ್ಕಿದೆ.  ನಟ ಅನಿರುದ್ಧ್​ಗೆ ಧಾರಾವಾಹಿಯಿಂದಲೇ ಗೇಟ್ ಪಾಸ್ ನೀಡಿದ್ದಾರೆ ಎನ್ನಲಾಗುತ್ತಿದೆ.

ನಟ ಅನಿರುದ್ಧ್​ ವಿರುದ್ಧ ದಾಖಲಾದ ದೂರಿನ ಹಿನ್ನೆಲೆ ಅನಿರುದ್ಧ್​ರನ್ನು  ಕೇವಲ ಧಾರಾವಾಹಿಯಿಂದ  ಮಾತ್ರವಲ್ಲ, ಕಿರುತೆರೆಯಿಂದಲೇ ಅವರನ್ನು ಬ್ಯಾನ್​ ಮಾಡಲಾಗಿದೆ ಎಂದು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ, ಆದರೆ ಈ ಕುರಿತು ಯಾವುದೇ  ಅಧಿಕೃತ ಮಾಹಿತಿ ಹೊರಬಂದಿಲ್ಲ.

ಜೊತೆ ಜೊತೆಯಲಿ ಧಾರಾವಾಹಿ ಬಹಳ ಕಾಲ ಟಿಆರ್‌ಪಿಯಲ್ಲಿ ನಂಬರ್ ಒನ್‌ ಸ್ಥಾನದಲ್ಲೇ ಇತ್ತು. ಅದಾದ ಬಳಿಕವೂ ಇದರ ಟಿಆರ್‌ಪಿ ಚೆನ್ನಾಗಿಯೇ ಇತ್ತು. ಇದರೊಂದಿಗೆ ಈ ಧಾರಾವಾಹಿ ನಟ ಅನಿರುದ್ದ್ ಅವರಿಗೂ ಮರು ಜನ್ಮ ನೀಡಿತ್ತು.

150 ಸಂಚಿಕೆಗಳು ಪೂರ್ಣಗೊಂಡ ಬಳಿಕ ಈ ರೀತಿ ವರ್ತನೆ ಮರುಕಳಿಸಲು ಶುರುವಾಯಿತು. ಅದರ ನಡುವೆಯೂ ಸೀರಿಯಲ್​ ಕೆಲಸಗಳು ಮುಂದುವರಿಯುತ್ತಿದ್ದವು. ಆದರೆ ಈಗ ಎಲ್ಲವೂ ಮಿತಿ ಮೀರಿದ್ದರಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಅನಿರುದ್ಧ್​ ಅವರನ್ನು ಬ್ಯಾನ್​ ಮಾಡುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ ಎಂದು ಕೆಲವೆಡೆ ಸುದ್ದಿ ಪ್ರಕಟ ಆಗಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಹಾಗೂ ಕಿರುತೆರೆ ನಿರ್ಮಾಪಕರ ಸಂಘ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.