'ಧೂಮಂ' ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಘೋಷಣೆ: ಫಹಾದ್ ಫಾಸಿಲ್ ಗೆ ಪವನ್ ಕುಮಾರ್ ನಿರ್ದೇಶನ
ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ಕುಮಾರ್ ಮಲಯಾಳಗೆ ಕಾಲಿಟ್ಟಿದ್ದಾರೆ. ಹೊಂಬಾಳೆ ಫಿಲಂಸ್ ನೂತನ ಚಿತ್ರ ‘ಧೂಮಂ’ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಇಂದು ಬಿಡುಗಡೆಗೊಂಡಿದೆ.

ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ಕುಮಾರ್ ಮಲಯಾಳಗೆ ಕಾಲಿಟ್ಟಿದ್ದಾರೆ. ಹೊಂಬಾಳೆ ಫಿಲಂಸ್ ನೂತನ ಚಿತ್ರ ‘ಧೂಮಂ’ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಇಂದು ಬಿಡುಗಡೆಗೊಂಡಿದೆ.
ಅದನ್ನು ಪವನ್ಕುಮಾರ್ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ ಪವನ್, ಮಲಯಾಳದ ಜನಪ್ರಿಯ ನಟ ಫಹಾದ್ ಫಾಸಿಲ್ಗೆ ಈ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಒಟಿಟಿಗಾಗಿ ವೆಬ್ ಸಿರಿಸ್ ನಿರ್ದೇಶಿಸಿದ್ದ ಪವನ್ ಕುಮಾರ್, ಫಹಾದ್ಗೆ ಚಿತ್ರ ನಿರ್ದೇಶಿಸುವ ವದಂತಿ ಬಹಳ ಕಾಲದಿಂದಲೂ ಇತ್ತು. ಪವನ್ ಹಾಗೂ ಫಹಾದ್ ಸ್ನೇಹವೂ ಇದಕ್ಕೆ ಕಾರಣವಿರಬಹುದು. ಧೂಮಂ ಮಲಯಾಳ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗೆ ಬರಲಿದೆ.
ಅಂದುಕೊಂಡಂತೆ ಆಗಿದ್ದರೆ, ಪವನ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನ ದ್ವಿತ್ವ ಸಿನಿಮಾ ಆಗಬೇಕಿತ್ತು. ಪುನೀತ್ ಅವರ ಹಠಾತ್ ನಿಧನದಿಂದಾಗಿ ದ್ವಿತ್ವ ಸೆಟ್ಟೇರಲಿಲ್ಲ. ಈಗ ಅದೇ ಕಥೆಯನ್ನು ಫಾಸಿಲ್ ಗೆ ಮಾಡಲಿದ್ದಾರಾ ಅಥವಾ ಬೇರೆ ಕಥೆಯನ್ನು ಪವನ್ ಆಯ್ಕೆ ಮಾಡಿಕೊಂಡಿದ್ದಾರಾ ಅವರೇ ಹೇಳಬೇಕು. ಒಟ್ಟಿನಲ್ಲಿ ಫಾಸಿಲ್ ಗಾಗಿ ಪವನ್ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ಧೂಮ್ ಎಂದು ಹೆಸರಿಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಪ್ರತಿಭಾವಂತ ನಟ ಫಹಾದ್. ಮಲಯಾಳ ಹೊರತುಪಡಿಸಿ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಫಹಾದ್ ಮಿಂಚುತ್ತಿದ್ದಾರೆ. ಪುಷ್ಪ, ವಿಕ್ರಂ ಸಿನಿಮಾಗಳಲ್ಲಿ ಅಬ್ಬರಿಸಿರುವ ಫಹಾದ್ ಸದ್ಯಕ್ಕೆ ಅತ್ಯಂತ ಬೇಡಿಕೆಯ ನಟ. ಮಲಯಾಳದಲ್ಲಿ ಅವರ ಕಾಲ್ಶೀಟ್ ಸಿಗುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಅಂತಹ ಪ್ರತಿಭಾವಂತ ನಟನಿಗೆ ನಿರ್ದೇಶಿಸುವ ಅವಕಾಶ ಕನ್ನಡದ ಪವನ್ ಸಿಕ್ಕಿದೆ ಎಂಬ ಮಾಹಿತಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


