ಸಿನಿಮಾ ಸುದ್ದಿ

ಕೆಜಿಎಫ್‌ನ ರಾಕಿ ಭಾಯ್ ಗೆ ಟೈಲರ್‌ಗಳಲ್ಲಿ ಹೊಸ ಅಭಿಮಾನಿಗಳು!

ಕೆಜಿಎಫ್ 2 ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ ನಂತರ ಟೈಲರ್ ಗಳಲ್ಲಿ ಅಸಂಖ್ಯಾತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಉತ್ತರ ಪ್ರದೇಶದ ಬಟ್ಟೆ ಅಂಗಡಿಗಳಲ್ಲಿ ಯಶ್ ಅವರ ರಾಕಿ ಭಾಯ್ ಶೈಲಿಯ ಸೂಟ್ ಗಳಿಗೆ ತುಂಬಾ ಬೇಡಿಕೆಯಿದೆ.

ಕೆಜಿಎಫ್‌ನ ರಾಕಿ ಭಾಯ್ ಗೆ ಟೈಲರ್‌ಗಳಲ್ಲಿ ಹೊಸ ಅಭಿಮಾನಿಗಳು!
ರಾಕಿ ಭಾಯ್ ಯಶ್ ಫೋಸ್ಟರ್
Published On :

ಬೆಂಗಳೂರು: ಕೆಜಿಎಫ್ 2 ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ ನಂತರ ಟೈಲರ್ ಗಳಲ್ಲಿ ಅಸಂಖ್ಯಾತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಉತ್ತರ ಪ್ರದೇಶದ ಬಟ್ಟೆ ಅಂಗಡಿಗಳಲ್ಲಿ ಯಶ್ ಅವರ ರಾಕಿ ಭಾಯ್ ಶೈಲಿಯ ಸೂಟ್ ಗಳಿಗೆ ತುಂಬಾ ಬೇಡಿಕೆಯಿದೆ.

ಲಖನೌನ ಕೆಲವೊಂದು ಬಟ್ಟೆ ಅಂಗಡಿಗಳಲ್ಲಿ ಯಶ್ ಅವರ ಫೋಸ್ಟರ್ ಹಾಕಲಾಗಿದ್ದು, ಇದೇ ರೀತಿಯ ಸೂಟ್ ಗಳನ್ನು ಮಾಡಿಕೊಡುವುದಾಗಿ ಗ್ರಾಹಕರಿಗೆ ಹೇಳುತ್ತಿದ್ದಾರೆ. ಜಾಪರ್ ಸನ್ಸ್ ಟೈಲರ್ಸ್, ಬೋಲಾ ಕ್ಲಾತ್ ಹೌಸ್ ಸೇರಿದಂತೆ ಮತ್ತಿತರ ಹೊಸ ಬಟ್ಟಣೆ ಅಂಗಡಿಗಳಲ್ಲಿ ರಾಕಿ ಭಾಯ್ ಶೈಲಿಯ ಸೂಟ್ ಗಳನ್ನು ಮಾಡಿಕೊಡಲಾಗುತ್ತಿದೆ.

ಇದರ ಹೊರತಾಗಿ, ಕೆಜಿಎಫ್ 2 ಮೊದಲ ದಿನವೇ ಹಿಂದಿ ಮಾರುಕಟ್ಟೆಯಲ್ಲಿ 54 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದರೊಂದಿಗೆ ಬಾಕ್ಸ್ ಆಫೀಸ್ ಅನ್ನು ಪುನರುಜ್ಜೀವನಗೊಳಿಸಿದ ಹೆಗ್ಗಳಿಕೆಗೂ ಯಶ್ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.