ಬಾಲಾಜಿ ಮೋಹನ್ ಹೊಸ ಸಿನಿಮಾಗೆ ಶರ್ಮಿಳಾ ಮಾಂಡ್ರೆ ನಿರ್ಮಾಪಕಿ
ಬಾಲಾಜಿ ಮೋಹನ್ ಅವರ ಮುಂಬರುವ ಚಿತ್ರ ಕಾದಲ್ ಕೊಂಜಮ್ ತೂಕಲಾ' ದಲ್ಲಿ ಅಮಲಾ ಪೌಲ್, ಕಾಳಿದಾಸ್ ಜಯರಾಮ್, ದುಶಾರ ವಿಜಯನ್, ನಟಿಸುತ್ತಿದ್ದು ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗಿದೆ.

ಬಾಲಾಜಿ ಮೋಹನ್ ಅವರ ಮುಂಬರುವ ಚಿತ್ರ ಕಾದಲ್ ಕೊಂಜಮ್ ತೂಕಲಾ' ದಲ್ಲಿ ಅಮಲಾ ಪೌಲ್, ಕಾಳಿದಾಸ್ ಜಯರಾಮ್, ದುಶಾರ ವಿಜಯನ್, ನಟಿಸುತ್ತಿದ್ದು ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗಿದೆ.
ಈ ಸಿನಿಮಾ ಶಾರದಾ ಸುಬ್ರಹ್ಮಣಿಯನ್ ಅವರ ಮೇಕ್ ಇಟ್ 2 ಕಾದಂಬರಿಯ ಆಧಾರಿತ ಸಿನಿಮಾ ಆಗಿದ್ದು, ಲಂಡನ್ ನ ಸುತ್ತ ಮುತ್ತಲ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ.
ದಸರಾ ಎಂಬ ಕನ್ನಡ ಸಿನಿಮಾ ಮೂಲಕ ನಿರ್ಮಾಪಕಿಯಾಗಿರುವ ಶರ್ಮಿಳಾ ಮಾಂಡ್ರೆ, ಚಿತ್ರ ತಂಡ 30 ದಿನಗಳ ಕಾಲ ವಿದೇಶದಲ್ಲಿ ಚಿತ್ರೀಕರಣ ನಡೆಸಲಿದೆ ಎಂದು ತಿಳಿಸಿದ್ದಾರೆ.

ತಾವು ಕಾದಲ್ ಕೊಂಜಮ್ ತೂಕಲಾ ಚಿತ್ರದ ನಿರ್ಮಾಪಕಿ ಮಾತ್ರ ಆಗಿದ್ದು, ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾನು ನಿರ್ಮಾಣ ಮಾಡುವ ಚಿತ್ರಗಳಲ್ಲಿ ನಟಿಸಲೇಬೇಕಾದ ಅಗತ್ಯವಿಲ್ಲ. ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂದು ಅರ್ಥವಾಗಿದೆ. ಆದ್ದರಿಂದ ಈ ತಮಿಳು ಚಿತ್ರದಲ್ಲಿ ನಾನು ನಿರ್ಮಾಪಕಿಯಾಗಿರುವುದಷ್ಟೇ ಸೂಕ್ತ ಎಂದು ನಿರ್ಧರಿಸಿದ್ದೇನೆ ಎಂದು ಶರ್ಮಿಳಾ ಮಾಂಡ್ರೆ ತಿಳಿಸಿದ್ದಾರೆ.
ದಸರಾ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ವರ್ಷ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಸಿನಿಮಾಗಳು ಇಂದು ಟ್ರೆಂಡ್ ಆಗಿದ್ದು, ಈಗ ಯಾವುದೂ ಒಂದು ಭಾಷೆಗೆ ಸೀಮಿತವಾಗಿಲ್ಲ. ನನ್ನ ಆದ್ಯತೆ ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುವುದೇ ಆಗಿದ್ದರೂ, ಕ್ರಮೇಣ ಬೇರೆ ಭಾಷೆಗಳ ಸಿನಿಮಾಗಳನ್ನೂ ನಿರ್ಮಿಸುವ ಉದ್ದೇಶವಿದೆ ಎಂದು ಮಾಂಡ್ರೆ ತಿಳಿಸಿದ್ದಾರೆ.
ಗಾಳಿಪಟ-2 ನಂತರ ಸ್ಕ್ರಿಪ್ಟ್ ಗಳನ್ನು ಆಲಿಸುತ್ತಿದ್ದೇನೆ. ಆದರೆ ಎಲ್ಲಿಯೂ ಸಹಿ ಹಾಕಿಲ್ಲ. ಇದೇ ವೇಳೆ ಗಾಳಿಪಟ-2 ಸಿನಿಮಾದಲ್ಲಿ ತಮ್ಮೊಂದಿಗೆ ನಟಿಸಿದ್ದ ಪವನ್ ಕುಮಾರ್ ಅವರೊಂದಿಗೆ ಸಿನಿಮಾ ಯೋಜನೆ ಇದೆ ಎಂದು ಹೇಳಿದ್ದಾರೆ. ಪವನ್ ಅವರ ಸಿನಿಮಾ ನಿರ್ದೇಶನದಲ್ಲಿ ವ್ಯಸ್ತರಾಗಲಿದ್ದಾರೆ, ನಾನು ಚಿತ್ರ ನಿರ್ಮಾಣದಲ್ಲಿ ವ್ಯಸ್ತಳಾಗಲಿದ್ದೇನೆ 2023 ರಿಂದ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಇದೆ ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


