ಸಿನಿಮಾ ಸುದ್ದಿ

ಪುರುಷರ ಲೈಂಗಿಕ ಸಾಮರ್ಥ್ಯ 'ಮ್ಯಾಗಿ' ತರ ಎರಡು ನಿಮಿಷ ಅಷ್ಟೇ: ನಟಿ ರೆಜಿನಾ ಕಸ್ಸಂದ್ರ!

ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಅವರು ಮ್ಯಾಗಿಗೆ ಹೋಲಿಕೆ ಮಾಡಿದ್ದಾರೆ. ‘ಹುಡುಗರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಆದರೆ, ಅದನ್ನು ಹೇಳಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ’

ಪುರುಷರ ಲೈಂಗಿಕ ಸಾಮರ್ಥ್ಯ 'ಮ್ಯಾಗಿ' ತರ ಎರಡು ನಿಮಿಷ ಅಷ್ಟೇ: ನಟಿ ರೆಜಿನಾ ಕಸ್ಸಂದ್ರ!
ರೆಜಿನಾ ಕಸ್ಸಂದ್ರ
Published On :

ಸಾಮಾನ್ಯವಾಗಿ, ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಡಬಲ್ ಮೀನಿಂಗ್ ಜೋಕ್‌ಗಳನ್ನು ಬಳಸುವುದಿಲ್ಲ. ಆದರೆ ನಟಿ ರೆಜಿನಾ ಕಸ್ಸಂದ್ರ ಸ್ವಲ್ಪ ಭಿನ್ನ. ಅವರು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಡಬಲ್ ಮೀನಿಂಗ್ ಜೋಕ್‌ಗಳನ್ನು ಸಿಡಿಸಿದ್ದಾರೆ.  ಇತ್ತೀಚಿನ ಸಂದರ್ಶನದಲ್ಲಿ,  ಜಿನಾ ಡಬಲ್ ಮೀನಿಂಗ್ ಜೋಕ್ ಮಾಡಿದ್ದಾರೆ.

ರೆಜಿನಾ ಹಾಗೂ ನಿವೇತಾ ಥಾಮಸ್ ಅವರು ‘ಸಾಕಿನಿ ಧಾಕಿನಿ’ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಸುಧೀರ್ ವರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಸದ್ಯ ಇಬ್ಬರೂ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಒಂದು ಮಾಧ್ಯಮಕ್ಕೆ ಸಂದರ್ಶನ ನೀಡುವಾಗ ರೆಜಿನಾ ಡಬಲ್ ಮೀನಿಂಗ್ ಜೋಕ್ ಹೇಳಿದ್ದಾರೆ.

ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಅವರು ಮ್ಯಾಗಿಗೆ ಹೋಲಿಕೆ ಮಾಡಿದ್ದಾರೆ. ‘ಹುಡುಗರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಆದರೆ, ಅದನ್ನು ಹೇಳಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ’ ಎಂದು ಕೆಲ ಕಾಲ ಯೋಚಿಸಿದರು ಅವರು. ನಂತರ ಹೇಳಿಯೇ ಬಿಟ್ಟರು. ‘ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ’ (Men and Maggi are for 2 minutes) ಎಂದು ನಕ್ಕರು. ಈ ಮಾತನ್ನು ಕೇಳಿ ಅಲ್ಲಿದ್ದವರೂ ನಕ್ಕರು. ಸದ್ಯ ಈ ಜೋಕ್​ಗೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ‘ನಿಮಗೆ ಹೇಗೆ ಗೊತ್ತು’ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.