ರಾಜ್ ಬಿ. ಶೆಟ್ಟಿ ಸಿನಿಮಾದಿಂದ ರಮ್ಯಾ ಔಟ್: ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಮತ್ತೋರ್ವ ನಟಿ ಎಂಟ್ರಿ! ಮೋಹಕ ತಾರೆ ಫ್ಯಾನ್ಸ್ ಗೆ ನಿರಾಸೆ
ಸ್ಯಾಂಡಲ್ವುಡ್ ಕ್ವೀನ್, ಮೋಹಕ ತಾರೆ ರಮ್ಯಾ ಅವರ ಕಮ್ ಬ್ಯಾಕ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಸಿಹಿಸುದ್ದಿ ಕೊಡುವೆ ಎಂದು ರಮ್ಯಾ ಅವರು ರಾಜ್ ಬಿ ಶೆಟ್ಟಿ ರಚನೆ, ನಿರ್ದೇಶನದ ಸಿನಿಮಾ ಮೂಲಕ ಬೆಳ್ಳಿತೆರೆಮೇಲೆ ಕಾಣಿಸಿಕೊಳ್ಳಲಿದ್ದೇನೆ ಎಂದು ಹೇಳಿದ್ದರು.

ಸ್ಯಾಂಡಲ್ವುಡ್ ಕ್ವೀನ್, ಮೋಹಕ ತಾರೆ ರಮ್ಯಾ ಅವರ ಕಮ್ ಬ್ಯಾಕ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಸಿಹಿಸುದ್ದಿ ಕೊಡುವೆ ಎಂದು ರಮ್ಯಾ ಅವರು ರಾಜ್ ಬಿ ಶೆಟ್ಟಿ ರಚನೆ, ನಿರ್ದೇಶನದ ಸಿನಿಮಾ ಮೂಲಕ ಬೆಳ್ಳಿತೆರೆಮೇಲೆ ಕಾಣಿಸಿಕೊಳ್ಳಲಿದ್ದೇನೆ ಎಂದು ಹೇಳಿದ್ದರು.
ಆದರೆ ಈಗ ಪ್ಲಾನ್ ಚೇಂಜ್ ಆಗಿದೆ. ಈ ಸಿನಿಮಾದಿಂದ ರಮ್ಯಾ ಹೊರಬಂದಿದ್ದಾರೆ. ಬದಲಾಗಿ ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ಪ್ರೊಡ್ಯೂಸರ್ ಆಗಿ ಮಾತ್ರ ಮುಂದುವರಿಯಲಿದ್ದಾರೆ. ಆ್ಯಪಲ್ ಬಾಕ್ಸ್ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ ಮೂಲಕ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ರಮ್ಯಾ ಅವರು ಸಿನಿಮಾದಿಂದ ಹೊರಬಂದು, ಹೊಸ ಮುಖವನ್ನು ತಮ್ಮ ಪ್ರೊಡಕ್ಷನ್ ಮೂಲಕ ತೆರೆ ಮೇಲೆ ತರೋದಾಗಿ ಹೇಳಿದ್ದಾರೆ. ಇದರಲ್ಲಿ ಸಿರಿ ರವಿಕುಮಾರ್ ಎನ್ನುವ ನಟಿ ರಾಜ್ಗೆ ಜೊತೆಯಾಗಲಿದ್ದಾರೆ.
ರಮ್ಯಾ ಅವರು ನಿರ್ಮಾಪಕಿ ಆಗುವ ಮೂಲಕ ಚಿತ್ರರಂಗಕ್ಕೆ ಮರಳಿರುವುದು ಖುಷಿಯ ವಿಚಾರ. ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಬ್ಯಾನರ್ ಮೂಲಕ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ಅನೌನ್ಸ್ ಮಾಡಿದಾಗ ಅಭಿಮಾನಿಗಳಿಗೆ ಆದ ಸಂತಸ ಅಷ್ಟಿಷ್ಟಲ್ಲ. ಅವರು ನಾಯಕಿಯಾಗಿ ನಟಿಸುತ್ತಾರೆ ಎಂದಾಗ ಆ ಖುಷಿ ಡಬಲ್ ಆಗಿತ್ತು. ಆದರೆ ಕಾರಣಾಂತರಗಳಿಂದ ಅವರೀಗ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಅಧಿಕೃತ ಆಗಿದೆ. ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
‘ಆಪಲ್ ಬಾಕ್ಸ್ ಸ್ಟುಡಿಯೋಸ್ ಮತ್ತು ಲೈಟರ್ ಬುದ್ಧ ಫಿಲ್ಮ್ಸ್ ಅವರ ಸಹಯೋಗದೊಂದಿಗೆ ಹೊರ ಬರುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ಸಿರಿ ರವಿಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಹೊಸ ಮುಖ ಪರಿಚಯ ಮಾಡಬೇಕೆಂದು ನಿರ್ಮಾಪಕಿ ರಮ್ಯಾ ಅವರೇ ಅಪೇಕ್ಷೆಪಟ್ಟರು. ಉದಯೋನ್ಮುಖ ಪ್ರತಿಭೆಗಳನ್ನು ಬೆಳಕಿಗೆ ತರುವ ಮುಖ್ಯ ಗುರಿಯನ್ನಿಟ್ಟುಕೊಂಡು ಪ್ರಾರಂಭಿಸಿದ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋಸ್. ಸ್ವಾತಿ ಮುತ್ತಿನ ಮಳೆ ಹನಿಯೇ ಒಂದು ಅಮೋಘವಾದ ಚಿತ್ರವಾಗಿ ನಿಮ್ಮ ಮುಂದೆ ಪ್ರಸ್ತುತ ಪಡಿಸಲು ನಾವು ಕಾತುರರಾಗಿದ್ದೇವೆ’ ಎಂದು ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


