ಸಿನಿಮಾ ಸುದ್ದಿ

'ಸದ್ದು! ವಿಚಾರಣೆ ನಡೆಯುತ್ತಿದೆ' ಸಿನಿಮಾ ಮೂಲಕ ಪಶುವೈದ್ಯ ಕಮ್ ನಟ ಮಧುನಂದನ್ ಸ್ಯಾಂಡಲ್ ವುಡ್ ಗೆ ಎಂಟ್ರಿ!

ವೈದ್ಯರು, ಎಂಜಿನೀಯರ್ ಗಳು ನಟರಾಗಿ, ನಿರ್ದೇಶಕರಾಗಿ ಬದಲಾಗಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪಶು ವೈದ್ಯ ಮತ್ತು ಪಿಎಚ್ ಡಿ ಪದವೀಧರ ಮಧುನಂದನ್ ನಟನಗೆ ಇಳಿದಿದ್ದಾರೆ.

'ಸದ್ದು! ವಿಚಾರಣೆ ನಡೆಯುತ್ತಿದೆ' ಸಿನಿಮಾ ಮೂಲಕ ಪಶುವೈದ್ಯ ಕಮ್ ನಟ ಮಧುನಂದನ್ ಸ್ಯಾಂಡಲ್ ವುಡ್ ಗೆ ಎಂಟ್ರಿ!
ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾ ಸ್ಟಿಲ್
Published On :

ವೈದ್ಯರು, ಎಂಜಿನೀಯರ್ ಗಳು ನಟರಾಗಿ, ನಿರ್ದೇಶಕರಾಗಿ ಬದಲಾಗಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪಶು ವೈದ್ಯ ಮತ್ತು ಪಿಎಚ್ ಡಿ ಪದವೀಧರ ಮಧುನಂದನ್ ನಟನಗೆ ಇಳಿದಿದ್ದಾರೆ.

ನವೆಂಬರ್ 25 ರಂದು ರಿಲೀಸ್ ಆಗುತ್ತಿರುವ ಸದ್ದು, ವಿಚಾರಣೆ ನಡೆಯುತ್ತಿದೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಮಧುನಂದನ್ ಎಂಟ್ರಿ ಕೊಡುತ್ತಿದ್ದಾರೆ.

ಬಾಲ್ಯದಿಂದಲೂ ನನಗೆ ನಟನೆ ಬಗ್ಗೆ ಹೆಚ್ಚು ಒಲವಿತ್ತು, ಆದರೆ ಸಾಂಪ್ರಾದಾಯಿಕ ಕುಟುಂಬದಿಂದ ಬಂದ ನನಗೆ ನಾನು ಇಷ್ಟ ಪಟ್ಟ ವೃತ್ತಿ ಆಯ್ಕೆ ಮಾಡಿಕೊಳ್ಳಲು ಪೋಷಕರು ನನಗೆ ಅವಕಾಶ ಮಾಡಿಕೊಡಲಿಲ್ಲ. ನನ್ನ ಹೆತ್ತವರ ಆಸೆ ಪೂರೈಸಿದ ನಂತರ ಈಗ ನಾನು ನನ್ನ ದಾರಿಯಲ್ಲಿ ಹೋಗಲು ಸ್ವತಂತ್ರ್ಯನಾಗಿದ್ದೇನೆ, ಹೀಗಾಗಿ ನಟನೆಗೆ ಇಳಿದಿದ್ದೇನೆ ಎಂದು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಸಹಾಯಕ ಪ್ರಾಧ್ಯಾಪಕ ಕೆಲಸ ಮಾಡುತ್ತಿರುವ ಮಧುನಂದನ್ ಹೇಳುತ್ತಾರೆ.

ಅಶ್ವಿನಿ ಕೆ ಎನ್ ಬರೆದಿರುವ ಕಥೆಗೆ ಭಾಸ್ಕರ್ ನಿರ್ದೇಶನ ಮಾಡುತ್ತಿದ್ದಾರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಆಗಿದೆ. "ನಾನು ತನಿಖಾ ಅಧಿಕಾರಿ ಪೃಥ್ವಿರಾಜ್ ಪಾತ್ರ ನಿರ್ವಹಿಸುತ್ತೇನೆ, ಅಂತರ್ಜಾತಿ ವಿವಾಹವಾಗಿ ನಾಪತ್ತೆಯಾದ ದಂಪತಿಗಳ ನಿಗೂಢ ಪ್ರಕರಣದ  ಕಥೆ ಇದಾಗಿದೆ, ಇದು ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸುತ್ತದೆ, ಪ್ರಕರಣವನ್ನು ನಾನು ಹೇಗೆ ಭೇದಿಸುತ್ತೇನೆ  ಎಂಬುದು ಕುತೂಹಲವಾಗಿದೆ. ಕಥೆಯು ಅದರದೇ ಆದ ತಿರುವುಗಳೊಂದಿಗೆ ಬರುತ್ತದೆ ಎಂದು ಮಧುನಂದನ್ ವಿವರಿಸುತ್ತಾರೆ.

ಈ ಚಿತ್ರವು ಎಂಎಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದ್ದು  ಮಧುನಂದನ್ ನಿರ್ಮಾಪಕರಾಗಿದ್ದಾರೆ. ಪಾವನ ಗೌಡ ಮತ್ತು ರಾಕೇಶ್ ಮೈಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತಾರಾಗಣದಲ್ಲಿ ಅಚ್ಯುತ್ ಕುಮಾರ್, ರಘು ಶಿವಮೊಗ್ಗ, ಜಹಾಂಗೀರ್ ಎಂಎಸ್ ಮತ್ತು ಕೃಷ್ಣ ಹೆಬ್ಬಾಳೆ ಕೂಡ ಇದ್ದಾರೆ. ಚಿತ್ರದ ಸಂಗೀತವನ್ನು ಸಚಿನ್ ಬಸ್ರೂರ್ ನಿರ್ವಹಿಸಿದ್ದಾರೆ ಮತ್ತು ರಾಜ್ಕನಾಥ್ ಎಸ್ಕೆ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.