'ವಿಕ್ರಾಂತ್ ರೋಣ'ದೊಂದಿಗೆ ಚೊಚ್ಚಲ ಸಿನಿಮಾ ಗೋಲ್ಡನ್ ಗಿಫ್ಟ್ ಪಡೆದಂತೆ: ನಟಿ ನೀತಾ ಅಶೋಕ್
ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದಿರುವ ನಟಿ ನೀತಾ ಅಶೋಕ್, ಮೊದಲ ಪ್ರಯತ್ನದಲ್ಲಿಯೇ ಬಹುಭಾಷೆಯ ವಿಕ್ರಾಂತ್ ರೋಣದಲ್ಲಿ ಕಿಚ್ಚ ಸುದೀಪ್ ಹಾಗೂ ನಿರೂಪ್ ಭಂಡಾರಿ ಜೊತೆಗೆ ಅಭಿನಯಿಸಿದ್ದಾರೆ.

ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದಿರುವ ನಟಿ ನೀತಾ ಅಶೋಕ್, ಮೊದಲ ಪ್ರಯತ್ನದಲ್ಲಿಯೇ ಬಹುಭಾಷೆಯ ವಿಕ್ರಾಂತ್ ರೋಣದಲ್ಲಿ ಕಿಚ್ಚ ಸುದೀಪ್ ಹಾಗೂ ನಿರೂಪ್ ಭಂಡಾರಿ ಜೊತೆಗೆ ಅಭಿನಯಿಸಿದ್ದಾರೆ. ತಾನು ಚಿತ್ರರಂಗಕ್ಕೆ ಬಂದದ್ದು ಅದೃಷ್ಟ ಎಂದು ಪರಿಗಣಿಸಿರುವ ನೀತಾ, ಕಾಲೇಜ್ ನಲ್ಲಿದ್ದಾಗ ಹೆಚ್ಚಿಗೆ ಈವೆಂಟ್ ಗಳಲ್ಲಿ ಪಾಲ್ಗೊಳ್ಳುತ್ತಿದೆ. ವೇದಿಕೆ ಹಿಂದೆ ಇರುತ್ತಿದೆ. ಮುಂದೆ ನಟಿಯಾಗುತ್ತೀನಿ ಅಂದುಕೊಂಡಿರಲಿಲ್ಲ. ಎಂಬಿಎ ಮಾಡುವಾಗ ಕಿರುತೆರೆಯೊಂದಕ್ಕೆ ಆಫರ್ ಬಂದಿತ್ತು. ಅದರಲ್ಲಿ ಚೆನ್ನಾಗಿ ಅಭಿನಯಿಸಿದ್ದೆ. ಆ ರೀತಿಯ ಅವಕಾಶಗಳು ದೊರೆತು ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಲಭಿಸಿತು. ವಿಕ್ರಾಂತ್ ರೋಣದಂತಹ ಚೊಚ್ಚಲ ಸಿನಿಮಾದೊಂದಿಗೆ ಬೆಳ್ಳಿತೆರೆ ಪ್ರವೇಶವಾಯ್ತು ಎನ್ನುತ್ತಾರೆ.

ಸುದೀಪ್ ಅವರಿಂದ ಬಂದ ಸಂದೇಶದ ಕ್ಷಣವನ್ನು ನೆನಪಿಕೊಳ್ಳುವ ನೀತಾ, ಆರಂಭಿಕವಾಗಿ ಚೇಷ್ಟೆ ಅಂದುಕೊಂಡಿದ್ದೆ. ವಿಕ್ರಾಂತ್ ರೋಣಕ್ಕಾಗಿ ಸುದೀಪ್ ನನ್ನನ್ನು ಆಯ್ಕೆ ಮಾಡಿದ್ದದ್ದು ಒಂದು ಗೌರವ, ಆಶೀರ್ವಾದವಾಗಿದೆ. ಆದರೆ, ಅದು ದೊಡ್ಡ ಜವಾಬ್ದಾರಿಯೊಂದಿಗೆ ಬಂದಿತು. ಚಿತ್ರರಂಗದಲ್ಲಿ 26 ವರ್ಷ ಅನುಭವವಿರುವ ಸುದೀಪ್ ಅವರು ನನ್ನಂತಹ ಹೊಸಬರನ್ನು ಆಯ್ಕೆ ಮಾಡಿದದ್ದು ಅವರ ದೊಡ್ಡತನಕ್ಕೆ ಸಾಕ್ಷಿಯಾಗಿದೆ. ಆಡಿಷನ್ ನಂತರ ಅನೂಪ್ ಭಂಡಾರಿ ತನನ್ನು ಆಯ್ಕೆ ಮಾಡಿದ್ದಾಗಿ ನೀತಾ ತಿಳಿಸಿದ್ದಾರೆ.
ರಂಗಿತರಂಗ ನಿರ್ದೇಶಕ ಅನುಪ್ ಭಂಡಾರಿ ಅವರ ದೊಡ್ಡ ಅಭಿಮಾನಿ ಎನ್ನುವ ನೀತಾ, ನನ್ನ ಪಾತ್ರವನ್ನು ಲಘುವಾಗಿ ತೆಗೆದುಕೊಳ್ಳಲು ಅವರು ಅವಕಾಶ ನೀಡಲಿಲ್ಲ. ವರ್ಕ್ ಶಾಫ್ ನಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಇದರಿಂದ ಹೆಚ್ಚಿಗೆ ಕಲಿಯಲು ನೆರವಾಯಿತು. ನಂತರ, ನಿರೂಪ್ ಭಂಡಾರಿ ಭೇಟಿಯಾದಾಗ, ಶೂಟಿಂಗ್ ಪ್ರಕ್ರಿಯೆಯೊಂದಿಗೆ ಹೆಚ್ಚಿನ ಮಾರ್ಗದರ್ಶನ ನೀಡಿದರು. ಚಿತ್ರೀಕರಣ ಸಂದರ್ಭದಲ್ಲಿ ಅನುಭವಸ್ಥರು ತುಂಬಾ ಸಹಾಯ ಮಾಡಿದ್ದಾರೆ. ಪ್ರತಿಯೊಬ್ಬರು ನನ್ನಗೆ ನಮ್ಮದಿಯ ವಾತಾವರಣ ಸೃಷ್ಟಿಸಿದ್ದರು. ಸೆಟ್ ನಲ್ಲಿ ಸುದೀಪ್ ಅವರಿಂದ ಹೆಚ್ಚಿನದಾಗಿ ಕಲಿತಿದ್ದೇನೆ. ನನ್ನ ಶ್ರಮ ಮತ್ತು ಅದೃಷ್ಟ ಇಲ್ಲಿಗೆ ಕರೆ ತಂದಿದೆ. ವಿಕ್ರಾಂತ್ ರೋಣದೊಂದಿಗೆ ಚೊಚ್ಚಲ ಸಿನಿಮಾದಲ್ಲಿನ ಅಭಿನಯ ಗೋಲ್ಡನ್ ಗಿಫ್ಟ್ ಪಡೆದಂತ ಅನುಭವ ನೀಡುತ್ತಿದೆ ಎಂದರು.

ತನ್ನ ಪಾತ್ರ ಕುರಿತು ಕೆಲವು ವಿವರಗಳನ್ನು ಹಂಚಿಕೊಂಡಿರುವ ನೀತಾ, ಅಪರ್ಣಾ ಬಲ್ಲಾಳ್ ಆಲಿಯಾಸ್ ಪನ್ನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕನ್ನಡಿಗಳಾಗಿ ಹುಟ್ಟಿ, ಮುಂಬೈನಲ್ಲಿ ಬೆಳೆಯುವ ಪನ್ನಾ, ಹಿಂದಿ ಮತ್ತು ಕನ್ನಡ ಮಿಶ್ರಿತ ಭಾಷೆ ಮಾತನಾಡುತ್ತಾಳೆ. ಪಾಶ್ಚಿಮಾತ್ಯ ಸಂಸ್ಕೃತಿ ರೂಢಿಸಿಕೊಂಡಿರುತ್ತಾಳೆ. ಆಕೆ ಕುತೂಹಲಕಾರಿ ಹುಡುಗಿಯಾಗಿದ್ದು, ಹೊಸ ಪ್ರದೇಶಗಳನ್ನು ಹುಡುಕುವುದನ್ನು ಪ್ರೀತಿಸುತ್ತಾಳೆ. ಆಕೆ ಧೈರ್ಯವಂತೆ ಮತ್ತು ವಿಕ್ರಾಂತ್ ರೋಣದ ಆತ್ಮ ಎನ್ನುತ್ತಾರೆ.
ಬಹುಭಾಷೆಗಳಲ್ಲಿ ಚಿತ್ರ ಬಿಡುಗಡೆಗೆ ಯೋಜಿಸಲಾಗಿದ್ದು, ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ನೀತಾ ಡಬ್ ಮಾಡಿದ್ದಾರೆ. ಚಿತ್ರವನ್ನು 3 ಡಿಯಲ್ಲಿ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿರುವುದಾಗಿ ತಿಳಿಸಿದರು. ಚಿತ್ರದಲ್ಲಿ ರಹಸ್ಯ, ಥ್ರಿಲ್ಲರ್, ಆಕ್ಸನ್, ಎಮೋಷನ್ ಎಲ್ಲವೂ ಇದೆ. ಇದು ಎಲ್ಲ ಪ್ರೇಕ್ಷಕರಿಗೂ ಇಷ್ಟವಾಗಲಿದೆ. ವಿಷ್ಯುಯಲ್ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಶಿವಕುಮಾರ್ ಅವರ ಸೆಟ್ ಕೆಲಸ ಹಾಗೂ ವಿಲಿಯಂ ಡೇವಿಡ್ ಅವರ ಸಿನಿಮಾಟೋಗ್ರಫಿ ಅದ್ಬುತವಾಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಇಂಪಾಗಿದೆ ಎಂದು ನೀತಾ ಅಶೋಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


