ಯುಎಸ್‌ನಲ್ಲಿ ವಿಶೇಷ ಪ್ರೀಮಿಯರ್ ಶೋ ಕಾಣಲಿದೆ ವಿಕ್ರಮ್ ಸೂರಿ ನಿರ್ದೇಶನದ 'ಚೌಕಬಾರಾ'!
ರಂಗಭೂಮಿ, ಕಿರುತೆರೆಯಲ್ಲಿ ತಮ್ಮದೇ ಆದ ಹೆಸರು ಮಾಡಿರುವ ತಾರಾ ಜೋಡಿ ನಮಿತಾ ರಾವ್ ಹಾಗೂ ವಿಕ್ರಂ ಸೂರಿ. ನಮಿತಾರಾವ್ ನಿರ್ಮಿಸಿ, ವಿಕ್ರಮ್ ಸೂರಿ ನಿರ್ದೇಶನ ಮಾಡಿರುವ 'ಚೌಕಬಾರ' ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ.

ರಾಜ್ಯ ಪ್ರಶಸ್ತಿ ವಿಜೇತ ನಟ ವಿಕ್ರಮ್ ಸೂರಿ ನಿರ್ದೇಶನದ ಎರಡನೇ ಸಿನಿಮಾ ಚೌಕಾಬಾರ ಬಿಡುಗಡೆಗೆ ಸಿದ್ಧವಾಗಿದೆ. ಇದು ಮಣಿ ಆರ್ ರಾವ್ ಅವರ ಭಾವನಾ ಕಾದಂಬರಿ ಆಧಾರಿತ ಕಥೆಯಾಗಿದೆ. ಸ್ನೇಹ ಮತ್ತು ಪ್ರೀತಿಯ ವಿಷಯಗಳ ಮೇಲೆ ಸಿನಿಮಾ ತಯಾರು ಮಾಡಲಾಗಿದೆ.
ರಂಗಭೂಮಿ, ಕಿರುತೆರೆಯಲ್ಲಿ ತಮ್ಮದೇ ಆದ ಹೆಸರು ಮಾಡಿರುವ ತಾರಾ ಜೋಡಿ ನಮಿತಾ ರಾವ್ ಹಾಗೂ ವಿಕ್ರಂ ಸೂರಿ. ನಮಿತಾರಾವ್ ನಿರ್ಮಿಸಿ, ವಿಕ್ರಮ್ ಸೂರಿ ನಿರ್ದೇಶನ ಮಾಡಿರುವ 'ಚೌಕಬಾರ' ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ.
ಸಾಹಿತಿಗಳಾದ ಹೆಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್, ಲಹರಿ ವೇಲು, ರವಿಕಿರಣ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್, ನಿರ್ಮಾಪಕ ಶಿವಕುಮಾರ್, ನಿರ್ದೇಶಕ ಪಿ.ಶೇಷಾದ್ರಿ, ಶಶಿಧರ್ ಕೋಟೆ ಸೇರಿದಂತೆ ಮುಂತಾದ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ವಿಕ್ರಮ್ ಸೂರಿ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅಶ್ವಿನ್ ಪಿ ಕುಮಾರ್ ಸಂಗೀತ ನೀಡಿದ್ದಾರೆ. ಹೆಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್, ವಿಕ್ರಮ್ ಸೂರಿ ಹಾಗೂ ಹರೀಶ್ ಭಟ್ ಹಾಡುಗಳನ್ನು ಬರೆದಿದ್ದಾರೆ. ಚೈತ್ರ, ವ್ಯಾಸರಾಜ ಸೋಸಲೆ, ಸಿದ್ಧಾರ್ಥ್ ಬೆಳ್ಮಣ್ಣು, ನಕುಲ್ ಅಭಯಂಕರ್ ಹಾಗೂ ಹರೀಶ್ ಭಟ್ 'ಚೌಕಬಾರ' ಸಿನಿಮಾದ ಹಾಡುಗಳಿಗೆ ದನಿಯಾಗಿದ್ದಾರೆ. ರವಿರಾಜ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶಶಿಧರ್ ಅವರ ಸಂಕಲನವಿದೆ.
ಆಗಸ್ಟ್ ನಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಯುಎಸ್ ನಲ್ಲಿ ವಿಶೇಷ ಪ್ರೀಮಿಯರ್ ಶೋ ನಡೆಯಲಿದೆ ಎಂದು ವಿಕ್ರಮ್ ಸೂರಿ ಹೇಳಿದ್ದಾರೆ, ಕಲಾವಿದರ ಕುಟುಂಬದಿಂದ ಬಂದಿರುವ ವಿಕ್ರಮ್, ಬಾಲ ಕಲಾವಿದನಾಗಿ ವೃತ್ತಿ ಜೀವನ ಪ್ರಾರಂಭಿಸಿ, ರಂಗಭೂಮಿ, ಟಿವಿಯಲ್ಲಿ ತೊಡಗಿಸಿಕೊಂಡರು. ಡಬ್ಬಿಂಗ್ ಕಲಾವಿದರಾಗಿಯೂ ಕೆಲಸ ಮಾಡಿರುವ ಅವರು ಶಾಸ್ತ್ರೀಯ ನೃತ್ಯಗಾರರೂ ಆಗಿದ್ದಾರೆ.
ವಿಕ್ರಮ್ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಗೆಳೆಯರು ನಾವು ಗೆಳೆಯರು ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು, ಈ ಸಿನಿಮಾ ಅವರಿಗೆ ರಾಜ್ಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಚೌಕಾಬಾರಾ ಅವರ ನಿರ್ದೇಶಕರಾಗಿ ಎರಡನೇ ಚಿತ್ರವಾಗಲಿದೆ.
ನಿರ್ಮಾಪಕಿಯಾಗುವುದಕ್ಕಿಂತ ಮುಂಚೆ ನಾನು, ರಂಗಭೂಮಿ ಕಲಾವಿದೆ, ನೃತ್ಯಗಾರ್ತಿ ಹಾಗೂ ಗಾಯಕಿ. ಈ ಚಿತ್ರದಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಿದ್ದೀವಿ. ಮುಖ್ಯ ಕಾರಣ ನಾವು ಕೆಲವು ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಬಂದಾಗ ನಾವು ಹೊಸಬರು. ಆಗ ನಮಗೂ ಉತ್ತಮ ಬೆಂಬಲ ದೊರಕಿತು. ಹಾಗಾಗಿ ಹೆಚ್ಚು ಪ್ರತಿಭೆಗಳಿಗೆ ಅವಕಾಶ ನೀಡಿದ್ದೇವೆ ಎಂದು ನಿರ್ಮಾಪಕಿ ನಮಿತಾ ರಾವ್ ಹೇಳಿದ್ದಾರೆ.
ಚಿತ್ರದ ತಾರಾಗಣದಲ್ಲಿ ಪ್ರಭಂಜನ್, ಕಾವ್ಯ ರಮೇಶ್, ಸುಜಯ್ ಹೆಗ್ಡೆ, ಸಂಜಯ್ ಸೂರಿ, ಕೀರ್ತಿ ಬಾನು, ಮಧು ಹೆಗಡೆ, ಶಶಿಧರ್ ಕೋಟೆ, ಕಿರಣ್ ವತಿ, ಆಂಡಿ, ಪ್ರಥಮ ಪ್ರಸಾದ್, ಸೀತಾ ಕೋಟೆ, ದಮಯಂತಿ ನಾಗರಾಜ ಮತ್ತು ಸುಮಾ ರಾವ್ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


