ಸಿನಿಮಾ ಸುದ್ದಿ

ದರ್ಶನ್- ರಚಿತಾ ರಾಮ್ ಕೆಮಿಸ್ಟ್ರಿ ವರ್ಕೌಟ್; 'ಕ್ರಾಂತಿ' ಸಿನಿಮಾದ ಎರಡನೇ ಹಾಡು 'ಬೊಂಬೆ ಬೊಂಬೆ' ಟ್ರೆಂಡಿಂಗ್

ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ಯೋಗರಾಜ್ ಭಟ್ ಅವರ ಸಾಹಿತ್ಯ, ಸೋನು ನಿಗಮ್ ಹಾಡಿರುವ ಮತ್ತು ಭೂಷಣ್ ಮಾಸ್ಟರ್ ನೃತ್ಯ ಸಂಯೋಜಿಸಿರುವ ಈ ಹಾಡು ಕೇಳುಗರ ಗಮನ ಸೆಳೆದಿದೆ. ದರ್ಶನ್ ಮತ್ತು ರಚಿತಾ ರಾಮ್ ಅವರ ಆನ್‌ಸ್ಕ್ರೀನ್ ಕೆಮಿಸ್ಟ್ರಿಯನ್ನು ಒಳಗೊಂಡಿರುವ ಈ ಹಾಡು ಬಿಡುಗಡೆಯಾದಾಗಿನಿಂದ ಟ್ರೆಂಡಿಂಗ್ ಆಗಿದೆ.

ದರ್ಶನ್- ರಚಿತಾ ರಾಮ್ ಕೆಮಿಸ್ಟ್ರಿ ವರ್ಕೌಟ್; 'ಕ್ರಾಂತಿ' ಸಿನಿಮಾದ ಎರಡನೇ ಹಾಡು 'ಬೊಂಬೆ ಬೊಂಬೆ' ಟ್ರೆಂಡಿಂಗ್
ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಮತ್ತು ರಚಿತಾ ರಾಮ್
Published On :

ಚಿತ್ರಬಿಡುಗಡೆಗೂ ಒಂದು ತಿಂಗಳ ಮುಂಚೆಯೇ ದರ್ಶನ್ ಮತ್ತು ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ತಿಂಡವು ಪೂರ್ಣ ಪ್ರಮಾಣದ ಪ್ರಚಾರವನ್ನು ಆರಂಭಿಸಿದೆ. ಜನವರಿ 26 ರಂದು ಸಿನಿಮಾ ತೆರೆಕಾಣಲಿದೆ.

ಚಿತ್ರವು ಐದು ಹಾಡುಗಳನ್ನು ಒಳಗೊಂಡಿದ್ದು, ಒಂದು ವಾರದ ಹಿಂದೆ ಮೈಸೂರಿನಲ್ಲಿ ಮೊದಲ ಹಾಡು 'ಧರಣಿ' ಬಿಡುಗಡೆಯಾಯಿತು. ಅದರಂತೆ ಚಿತ್ರತಂಡ ಹೊಸಪೇಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎರಡನೇ ಹಾಡಾದ ‘ಬೊಂಬೆ ಬೊಂಬೆ’ ಯನ್ನು ಬಿಡುಗಡೆ ಮಾಡಿದೆ. ಅನೇಕ ಭಾಷೆಗಳಲ್ಲಿ ಲಿರಿಕಲ್ ವಿಡಿಯೋವನ್ನು DBeats ಮ್ಯೂಸಿಕ್ ಲೇಬಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ಯೋಗರಾಜ್ ಭಟ್ ಅವರ ಸಾಹಿತ್ಯ, ಸೋನು ನಿಗಮ್ ಹಾಡಿರುವ ಮತ್ತು ಭೂಷಣ್ ಮಾಸ್ಟರ್ ನೃತ್ಯ ಸಂಯೋಜಿಸಿರುವ ಈ ಹಾಡು ಕೇಳುಗರ ಗಮನ ಸೆಳೆದಿದೆ. ದರ್ಶನ್ ಮತ್ತು ರಚಿತಾ ರಾಮ್ ಅವರ ಆನ್‌ಸ್ಕ್ರೀನ್ ಕೆಮಿಸ್ಟ್ರಿಯನ್ನು ಒಳಗೊಂಡಿರುವ ಈ ಹಾಡು ಬಿಡುಗಡೆಯಾದಾಗಿನಿಂದ ಟ್ರೆಂಡಿಂಗ್ ಆಗಿದೆ.

ದರ್ಶನ್ ಅವರ 27ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ವಿ ಹರಿಕೃಷ್ಣ ಅವರು ಕ್ರಾಂತಿ ಸಿನಿಮಾದಲ್ಲೂ ಮತ್ತೊಮ್ಮೆ ಸಂಗೀತ ಸಂಯೋಜಿಸಿದ್ದು, ಈ ಜೋಡಿ ಈಗಾಗಲೇ ಹಲವಾರು ಬ್ಲಾಕ್‌ಬಸ್ಟರ್ ಹಾಡುಗಳನ್ನು ನೀಡಿದೆ. ಈ ಪಟ್ಟಿಗೆ ಸೇರ್ಪಡೆಗೊಂಡಿರುವ ಹೊಸ ಹಾಡು 'ಬೊಂಬೆ ಬೊಂಬೆ'.
ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್‌ನಡಿಯಲ್ಲಿ ಶೈಲಜಾ ನಾಗ್ ಮತ್ತು ಬಿ ಸುರೇಶ ನಿರ್ಮಿಸಿರುವ

'ಕ್ರಾಂತಿ' ಸಿನಿಮಾ, ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ತೋರಿಸುತ್ತದೆ. ವಿ ಹರಿಕೃಷ್ಣ ಅವರ ನಿರ್ದೇಶನದ ಈ ಚಿತ್ರದಲ್ಲಿ ವಿ ರವಿಚಂದ್ರನ್, ಉಮಾಶ್ರೀ, ಸುಮಲತಾ, ಮುಖ್ಯ ಮಂತ್ರಿ ಚಂದ್ರು, ಸಂಯುಕ್ತ ಹೊರನಾಡ್, ವೈನಿಧಿ ಜಗದೀಶ್, ಗಿರಿಜಾ ಲೋಕೇಶ್ ಮುಂತಾದವರಿದ್ದಾರೆ. ಚಿತ್ರಕ್ಕೆ ಕರುಣಾಕರ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.