ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನಟ ಮನೋರಂಜನ್- ಸಂಗೀತ
ನಟ, ನಿರ್ದೇಶಕ, ವಿ ರವಿಚಂದ್ರನ್ ಪುತ್ರ ಮನೋರಂಜನ್- ಸಂಗೀತಾ ವಿವಾಹ ಇಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು.

ಬೆಂಗಳೂರು: ನಟ, ನಿರ್ದೇಶಕ, ವಿ ರವಿಚಂದ್ರನ್ ಪುತ್ರ ಮನೋರಂಜನ್- ಸಂಗೀತಾ ವಿವಾಹ ಇಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು.
ಪೋಷಕರು ನಿಶ್ಚಯಿಸಿದ ವಧುವನ್ನು ಮನೋರಂಜನ್ ವರಿಸಿದ್ದಾರೆ. ಮನೋರಂಜನ್-ಸಂಗೀತಾ ವಿವಾಹ ಕಾರ್ಯಕ್ರಮದ ಭಾಗವಾಗಿ ಆ.20 ರಂದು ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ನಟ ಡಾ.ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಹಂಸಲೇಖ ಸೇರಿದಂತೆ ಸ್ಯಾಂಡಲ್ ವುಡ್ ನ ಗಣ್ಯರು, ನಟ-ನಟಿಯರು, ಕಲಾವಿದರು ಭಾಗಿಯಾಗಿ ಶುಭಕೋರಿದರು.
ಪುತ್ರನ ವಿವಾಹದ ಬಗ್ಗೆ ಮಾತನಾಡಿದ್ದ ರವಿಚಂದ್ರನ್ ಮಗಳು ಅಂಜಲಿ ರೀತಿಯಲ್ಲಿ ಮಗನ ಮದುವೆ ಮಾಡುತ್ತಿಲ್ಲ, ಹೆಣ್ಣಿನ ಕಡೆಯವರಿಗೆ ಆಡಂಬರ ಇಷ್ಟವಿಲ್ಲದ ಕಾರಣ ಸರಳವಾಗಿ ವಿವಾಹ ಮಾಡುತ್ತಿದ್ದೇವೆ ಎಂದು ಹೇಳಿದ್ದರು.
ರವಿಚಂದ್ರನ್ ಚಿತ್ರರಂಗದವರು, ಆತ್ಮೀಯರಿಗಾಗಿ ಆಗಸ್ಟ್ 22ರಂದು ಕೂಡ ಮಗನ ಮದುವೆಯ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಆ ಆರತಕ್ಷತೆಗೆ ದೊಡ್ಡ ಮಟ್ಟದಲ್ಲಿ ಜನರು ಬರುವ ನಿರೀಕ್ಷೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


