ಸಿನಿಮಾ ಸುದ್ದಿ

ಔಟ್ ಅಂಡ್ ಔಟ್ ಕಮರ್ಷಿಯಲ್ 'ಶೇರ್' ಸಿನಿಮಾದಲ್ಲಿ ಕಿರಣ್ ರಾಜ್!

ಭರ್ಜರಿ ಗಂಡು ನಟ-ನಿರ್ದೇಶಕ ಕಿರಣ್ ರಾಜ್ ಮತ್ತು ಪ್ರಸಿದ್ಧ್ ನಟನೆಯ ಜೋಡಿಯು 'ಶೇರ್' ಎಂಬ ಶೀರ್ಷಿಕೆಯ ಚಿತ್ರಕ್ಕಾಗಿ ಮತ್ತೆ ಒಂದಾಗಲು ಸಿದ್ಧವಾಗಿದೆ.

ಔಟ್ ಅಂಡ್ ಔಟ್ ಕಮರ್ಷಿಯಲ್ 'ಶೇರ್' ಸಿನಿಮಾದಲ್ಲಿ ಕಿರಣ್ ರಾಜ್!
ಕಿರಣ್ ರಾಜ್ ಮತ್ತು ಸುರೇಖ
Published On :

ಭರ್ಜರಿ ಗಂಡು ನಟ-ನಿರ್ದೇಶಕ ಕಿರಣ್ ರಾಜ್ ಮತ್ತು ಪ್ರಸಿದ್ಧ್ ನಟನೆಯ ಜೋಡಿಯು 'ಶೇರ್' ಎಂಬ ಶೀರ್ಷಿಕೆಯ ಚಿತ್ರಕ್ಕಾಗಿ ಮತ್ತೆ ಒಂದಾಗಲು ಸಿದ್ಧವಾಗಿದೆ.

ಆಗಸ್ಟ್ 22 ರಂದು ಚಿತ್ರದ ಮುಹೂರ್ತದೊಂದಿಗೆ  ಚಿತ್ರೀಕರಣವು ಪ್ರಾರಂಭವಾಗಲಿದೆ. ಶೇರ್ ಸಿನಿಮಾ ಫಸ್ಟ್ ಲುಕ್ ಸ್ಟಿಲ್‌ಗಳನ್ನು ಹಂಚಿಕೊಂಡ ಪ್ರಸಿದ್ಧ್, ಶೇರ್ ಔಟ್-ಅಂಡ್-ಔಟ್ ಕಮರ್ಷಿಯಲ್ ಎಂಟರ್‌ಟೈನರ್ ಆಗಿರುತ್ತದೆ.  ನಗರದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧರಿಸಿ ಬರೆದ ಕಥೆಯಾಗಿದೆ.

ಟ್ವಿಸ್ಟ್‌ನೊಂದಿಗೆ ರೊಮ್ಯಾಂಟಿಕ್ ಟ್ರ್ಯಾಕ್ ಕೂಡ ಇದೆ ಎಂದು ರತ್ನಮಂಜರಿ ನಿರ್ದೇಶಕರು ಹಂಚಿಕೊಳ್ಳುತ್ತಾರೆ. ಭರ್ಜರಿ ಗಂಡು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸುರೇಖಾ, ಶೇರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಮುಂದಾಗಿದ್ದಾರೆ.

ಗುಮ್ಮಿನೇನಿ ವಿಜಯ್ ಮತ್ತು ಡಿಒಪಿ ಕಿಟ್ಟಿ ಕೌಶಿಕ್  ಕೂಡ ಶೆರ್‌ ಸಿನಿಮಾಗಾಗಿ ಮರಳಲಿದ್ದಾರೆ. ಡಾ ಸುದರ್ಶನ್ ಸುಂದರ್ ರಾಜ್ ನಿರ್ಮಾಣದ ಪ್ರ ಸಿದ್ಧ್ ಅವರ ಶೇರ್ ಚಿತ್ರದಲ್ಲಿ ತನಿಶಾ ಕುಪ್ಪಂಡ, ಯಶ್ ಶೆಟ್ಟಿ, ಬಾಲ ರಾಜವಾಡಿ ಮತ್ತು ಶರತ್ ಲೋಹಿತಾಶ್ವ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಧಾರಾವಾಹಿಗಳು, ಚಲನಚಿತ್ರಗಳು ಮತ್ತು ತಮ್ಮ ಸಾಮಾಜಿಕ ಕಾರ್ಯಗಳ ನಡುವೆ ಕಿರಣ್ ರಾಜ್, ಹಲವು ಸಿನಿಮಾಗಳಿಗೆ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ. ಭರ್ಜರಿ ಗಂಡು ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೆ ಯೋಜಿಸಿದ್ದರೆ, ಅವರ ಇತರ ಚಿತ್ರಗಳಾದ ಬಡ್ಡಿಸ್, ಚಿಕನ್ ಪುಳಿಯೋಗರೆ, ಚತುಷ್ಪಥ ಮತ್ತು ವಿಕ್ರಮ್ ಗೌಡ ನಿರ್ಮಾಣದ ವಿವಿಧ ಹಂತಗಳಲ್ಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.