ಸಿನಿಮಾ ಸುದ್ದಿ

ಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಸ್ಯಾಟಲೈಟ್ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ!

ಇದುವರೆಗೆ ಮಾರಾಟವಾದ ಪುನೀತ್ ಅವರ ಚಿತ್ರಗಳಲ್ಲೇ ಇದು ಅತ್ಯಧಿಕ ಮೊತ್ತ ಎನ್ನಲಾಗುತ್ತಿದೆ. ಅಲ್ಲದೆ ಜೇಮ್ಸ್ ಸಿನಿಮಾ ಡಿಜಿಟಲ್ ಮತ್ತು ಹಿಂದಿ ಡಬ್ಬಿಂಗ್ ಹಕ್ಕುಗಳ ಕುರಿತಾಗಿಯೂ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಸ್ಯಾಟಲೈಟ್ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ!
ಪುನೀತ್ ರಾಜಕುಮಾರ್
Published On :

ಬೆಂಗಳೂರು: ಪುನೀತ್ ರಾಜಕುಮಾರ್ ಅವರ ಜೇಮ್ಸ್ ಸಿನಿಮಾ ಸ್ಯಾಂಡಲ್ ವುಡ್ ನ ಬಹುನೀರೀಕ್ಷಿತ ಸಿನಿಮಾಗಳಲ್ಲೊಂದು. ಆಕ್ಷನ್ ಸಿನಿಮಾ ಆಗಿರುವ ಜೇಮ್ಸ್ ಚಿತ್ರ ಇನ್ನೂ ನಿರ್ಮಾಣ ಹಂತದಲ್ಲಿರುವಾಗಲೇ ಹೊಸದೊಂದು ಸುದ್ದಿ ಹೊರಬಿದ್ದಿದೆ. 

ಚೇತನ್ ಕುಮಾರ್ ನಿರ್ದೇಶನವಿರುವ ಜೇಮ್ಸ್ ಚಿತ್ರದ ಸ್ಯಾಟಲೈಟ್ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಸ್ಟಾರ್ ಸುವರ್ಣ ವಾಹಿನಿ 15 ಕೋಟಿ ರೂ.ಗಳಿಗೆ ಖರೀದಿಸಿದೆ.

ಇದುವರೆಗೆ ಮಾರಾಟವಾದ ಪುನೀತ್ ಅವರ ಚಿತ್ರಗಳಲ್ಲೇ ಇದು ಅತ್ಯಧಿಕ ಮೊತ್ತ ಎನ್ನಲಾಗುತ್ತಿದೆ. ಅಲ್ಲದೆ ಜೇಮ್ಸ್ ಸಿನಿಮಾ ಡಿಜಿಟಲ್ ಮತ್ತು ಹಿಂದಿ ಡಬ್ಬಿಂಗ್ ಹಕ್ಕುಗಳ ಕುರಿತಾಗಿಯೂ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. 

ನಿರ್ಮಾಪಕ ಕಿಶೋರ್ ಪಾತಿಕೊಂಡ ಅವರು ಜೇಮ್ಸ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಂಗೀತ ಟಗರು ಖ್ಯಾತಿಯ ಚರಣ್ ರಾಜ್ ನೀಡಿದ್ದರೆ, ಜೆ. ಸ್ವಾಮಿ ಕ್ಯಾಮೆರಾ ಹಿಡಿದಿದ್ದಾರೆ.

ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ತಾರಾಗಣದಲ್ಲಿದ್ದಾರೆ.

Related Article

ರೊಮ್ಯಾಂಟಿಕ್ ಕನ್ನಡ ಮ್ಯೂಸಿಕ್ ಆಲ್ಬಂನಲ್ಲಿ 'ಪದವಿಪೂರ್ವ' ನಟಿ ಯಶ ಶಿವಕುಮಾರ್

ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪಾತ್ರದಲ್ಲಿ ನಟಿಸಲಿರುವ ಪ್ರೇಮ್: ಪ್ರೇಮಂ ಪೂಜ್ಯಂ ತಂಡದಿಂದ 400 ಕೋಟಿ ರೂ. ಹಾಲಿವುಡ್ ಚಿತ್ರ

ರಾಘವೇಂದ್ರ ಸ್ಟೋರ್ಸ್ ಸಿನಿಮಾ ಸ್ಕ್ರಿಪ್ಟ್ ಗೆ ಮಂತ್ರಾಲಯದಲ್ಲಿ ದೊರೆತ ಪ್ರೇರಣೆ ಕಾರಣ: ನಟ ಜಗ್ಗೇಶ್

ಕೆಜಿಎಫ್ ನಿರ್ಮಿಸಿದ ಹೊಂಬಾಳೆ ಫಿಲ್ಮ್ಸನಿಂದ ಜಗ್ಗೇಶ್ ಸಿನಿಮಾ: ಸಂತೋಷ್ ಆನಂದ್ ರಾಮ್ ನಿರ್ದೇಶನ

ಕಿಶೋರ್ ಪಾತಿಕೊಂಡ ನಿರ್ಮಾಣದ ಉಪೇಂದ್ರ ಸಿನಿಮಾಗೆ 'ಮಾಸ್ಟರ್ ಪೀಸ್' ಮಂಜು ಮಾಂಡವ್ಯ ಆಕ್ಷನ್ ಕಟ್!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.