ಆಸ್ಕರ್ 2022 ಪ್ರಶಸ್ತಿ: ಭಾರತದಿಂದ ತಮಿಳಿನ 'ಕೂಳಂಗಳ್'ಸಿನಿಮಾ ಅಧಿಕೃತ ಎಂಟ್ರಿ
ಪಿ.ಎಸ್. ವಿನೋದ್ ರಾಜ್ ನಿರ್ದೇಶನದ 'ಕೂಳಂಗಳ್ ' ತಮಿಳು ಚಿತ್ರ 94ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದಿಂದ ಅಧಿಕೃತವಾಗಿ ಎಂಟ್ರಿಯಾಗಿದೆ.

ನವದೆಹಲಿ: ಪಿ.ಎಸ್. ವಿನೋದ್ ರಾಜ್ ನಿರ್ದೇಶನದ 'ಕೂಳಂಗಳ್' ತಮಿಳು ಚಿತ್ರ 94ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದಿಂದ ಅಧಿಕೃತವಾಗಿ ಎಂಟ್ರಿಯಾಗಿದೆ.
ಮದ್ಯ ವ್ಯಸನಿ ಪತಿ, ಧೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಪತ್ನಿ ಬಿಟ್ಟು ಹೋದ ನಂತರ ತನ್ನ ಮಗನೊಂದಿಗೆ ಆಕೆಯನ್ನು ಪತ್ತೆ ಹಚ್ಚಿ, ಮನೆಗೆ ಕರೆದುಕೊಂಡು ಬರುತ್ತಾನೆ. ಇದು ಈ ಸಿನಿಮಾದ ಕಥಾ ಹಂದರವಾಗಿದೆ.
ವಿಘ್ನೇಶ್ ಶಿವನ್ ಮತ್ತು ನಯನ ತಾರಾ ನಿರ್ಮಿಸಿರುವ ಈ ಚಿತ್ರದಲ್ಲಿ ಹೊಸಬರ ತಾರಾ ಬಳಗವಿದೆ. ಶಿವಾನ್ ಟ್ವೀಟರ್ ನಲ್ಲಿ, ಚಿತ್ರ ಆಯ್ಕೆ ಕುರಿತ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಇದನ್ನು ಕೇಳಲು ಅಲ್ಲಿ ಅವಕಾಶವಿದೆ! ನಮ್ಮ ಜೀವನದ ಕನಸು ನನಸಾಗಲು ಇನ್ನು ಎರಡು ಹಜ್ಜೆ ಮಾತ್ರ ಬಾಕಿಯಿದೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಎಲ್ಲರ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ ಸಲ್ಲಿಸುವುದಾಗಿ ವಿನೋದ್ ರಾಜ್ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ರೊಟ್ಟರ್ ಡಾಮ್ 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉತ್ತಮ ಚಿತ್ರಕ್ಕಾಗಿ ಅತ್ಯುನ್ನತ ಟೈಗರ್ ಪ್ರಶಸ್ತಿಯನ್ನು 'ಕೂಳಂಗಳ್' ಪಡೆದುಕೊಂಡಿತ್ತು. ಲಾಸ್ ಏಂಜಲೀಸ್ ನಲ್ಲಿ ಮಾರ್ಚ್ 22, 2022ರಲ್ಲಿ 94ನೇ ಆಸ್ಕರ್ ಅಕಾಡೆಮಿ ಅವಾರ್ಡ್ ಪ್ರದಾನ ಸಮಾರಂಭ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


