ತಮಿಳಿನ ಜನಪ್ರಿಯ ಚಿತ್ರ ಸಾಹಿತಿ ಪಿರೈಸೂದನ್ ನಿಧನ
ತಮಿಳಿನ ಜನಪ್ರಿಯ ಚಿತ್ರ ಸಾಹಿತಿ ಪಿರೈಸೂದನ್ ಶುಕ್ರವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.

ಚೆನ್ನೈ: ತಮಿಳಿನ ಜನಪ್ರಿಯ ಚಲನಚಿತ್ರ ಸಾಹಿತಿ ಪಿರೈಸೂದನ್ ಶುಕ್ರವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.
ತಿರುವನೂರು ಜಿಲ್ಲೆಯ ನನ್ನಿಲಂನಲ್ಲಿ ಫೆಬ್ರವರಿ 6, 1956ರಲ್ಲಿ ಜನಿಸಿದ್ದ ಪಿರೈಸೂದನ್, 1984 ರಲ್ಲಿ ಬಿಡುಗಡೆಯಾದ ಸಿರೈ ಚಲನಚಿತ್ರಕ್ಕಾಗಿ ದಿವಂಗತ ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥನ್ ಸಂಗೀತ ನೀಡಿರುವ ರಸತಿ ರೋಸಪೂ ಹಾಡನ್ನು ಬರೆಯುವ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.
ರಜನಿಕಾಂತ್ ಗಾಗಿ ಅಭಿನಯದ ರಾಜಾದಿ ರಾಜಾದ ಮೀನಮ್ಮ ಮೀನಮ್ಮ ಸೇರಿದಂತೆ ಹಲವಾರು ಹಿಟ್ ಹಾಡುಗಳನ್ನು ಪಿರೈಸೂದನ್ ಬರೆದಿದ್ದಾರೆ. ಸುಮಾರು 400 ಚಿತ್ರಗಳಿಗಾಗಿ ಸುಮಾರು 1,400 ಹಾಡುಗಳಲ್ಲದೇ, ಸುಮಾರು 5000 ಭಕ್ತಿಗೀತೆಗಳನ್ನು ಬರೆದಿದ್ದಾರೆ. ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


