ಗುಟ್ಟಾಗಿ ಅಲ್ಲ, ಸರಳವಾಗಿ ವಿವಾಹವಾಗಿದ್ದೇನೆ: ಮದುವೆ ಫೋಟೋ ಶೇರ್ ಮಾಡುವುದು ಮಾನವೀಯತೆ ಎನಿಸಲಿಲ್ಲ: ಪ್ರಣೀತಾ
ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ಮೇ 30 ರಂದು ಉದ್ಯಮಿ ನಿತಿನ್ ರಾಜು ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ಮೇ 30 ರಂದು ಉದ್ಯಮಿ ನಿತಿನ್ ರಾಜು ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ತಮ್ಮ ವಿವಾಹದ ಬಗ್ಗೆ ಮರುದಿನ ಪ್ರಣಿತಾ ಮಾತನಾಡಿದ್ದಾರೆ, ನಾವು ಅದ್ಧೂರಿಯಾಗಿ ಮದುವೆಯಾಗಬೇಕು ಎಂದುಕೊಂಡಿದ್ದೆವು, ಇದು ಪ್ರತಿಯೊಂದು ಜೋಡಿಯ ಕನಸಾಗಿರುತ್ತದೆ. ಕನ್ನಡ ಸಿನಿಮಾ ರಂಗ ಸೇರಿದಂತೆ ಬಾಲಿವುಡ್ ನ ನನ್ನ ಸಹೋದ್ಯೋಗಿಗಳನ್ನು ಆಹ್ವಾನಿಸಬೇಕೆಂದುಕೊಂಡಿದ್ದೆ.
ಕೋವಿಡ್ ಕೇಸ್ ಕಡಿಮೆಯಾಗುತ್ತದೆ ಆಗ ಎಲ್ಲರನ್ನು ಅಹ್ವಾನಿಸಬೇಕೆಂದುಕೊಂಡಿದ್ದೆವು, ಆದರೆ ಜುಲೈನಲ್ಲಿ ಆಷಾಢ ಆರಂಭವಾಗುವ ಕಾರಣದಿಂದ ನಾವು ವಿವಾಹವಾಗಲು ನಿರ್ಧರಿಸಿದೆವು ಎಂದು ಪ್ರಣೀತಾ ಹೇಳಿದ್ದಾರೆ.
ಮದುವೆಯ ನಂತರ ನನಗೆ ಅರಿವಾಯಿತು ಸರಳತೆ ತುಂಬಾ ಇಷ್ಟವಾಯಿತು, ಲಾಕ್ ಡೌನ್ ನನ್ನನ್ನು ಮತ್ತಷ್ಟು ಸರಳತೆಗೆ ಒಗ್ಗಿಕೊಳ್ಳವಂತೆ ಮಾಡಿತು ಎಂದು ಹೇಳಿದ್ದಾರೆ.
ವಿವಾಹ ಕಾರ್ಯಕ್ರಮದ ನನಗೆ ಅತ್ಯಮೂಲ್ಯವಾದದ್ದು, ಪ್ರಪಂಚಾದ್ಯಂತ ಕೋವಿಡ್ ಅತಿ ಗಂಭೀರ ಪರಿಣಾಮ ಬೀರಿದೆ, ಹಲವರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ನನ್ನ ಮದುವೆ ಪೋಟೋಗಳನ್ನು ಶೇರ್ ಮಾಡುವುದು ಮಾನವೀಯತೆಯಲ್ಲ ಎನಿಸಿತು. ಹೀಗಾಗಿ ಶೇರ್ ಮಾಡಲಿಲ್ಲ, ಆದರೆ ಮದುವೆಗೆ ಬಂದ ಅತಿಥಿಗಳ್ಯಾರೋ ಫೋಟೋ ಶೇರ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು, ಕೋವಿಡ್ ನಿಯಮಗಳನ್ನು ಪಾಲಿಸಿ ವಿವಾಹವಾಗಿರುವುದಾಗಿ ತಿಳಿಸಿದ್ದಾರೆ. ಸಣ್ಣ ಪ್ರಮಾಣದ ವಿವಾಹ ಕಾರ್ಯಕ್ರಮವನ್ನು ಮನೆ ಮಂದಿಯೆಲ್ಲಾ ಸಂತೋಷ ಪಟ್ಟಿದ್ದೇವೆ ಎಂದು ಹೇಳಿದ್ದಾರೆ,
ಉದ್ಯಮಿ ನಿತಿನ್ ರಾಜು ಅವರನ್ನು ನಾನು ಹಲವು ವರ್ಷಗಳಿಂದ ನೋಡಿದ್ದೇನೆ, ಆದರೆ ವಿವಾಹವಾಗಬೇಕೆಂದು ಇಬ್ಬರು ಇತ್ತೀಚೆಗೆ ನಿರ್ಧರಿಸಿದೆವು, ಇದೊಂದು ಲವ್ ಕಮ್ ಅರೆಂಜ್ ಮ್ಯಾರೇಜ್ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


