ಮುಸ್ತಫಾ ರಾಜ್ -ಪ್ರಿಯಾಮಣಿ ಮದುವೆ ಅಸಿಂಧು; ನನಗಿನ್ನೂ ವಿಚ್ಛೇದನ ನೀಡಿಲ್ಲ: ಮೊದಲ ಪತ್ನಿಯಿಂದ ಕೇಸ್ ದಾಖಲು
ಉದ್ಯಮಿ ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ವಿರುದ್ಧ ಮುಸ್ತಫಾ ರಾಜ್ ಅವರ ಮೊದಲ ಪತ್ನಿ ಆಯೆಷಾ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ

ಉದ್ಯಮಿ ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ವಿರುದ್ಧ ಮುಸ್ತಫಾ ರಾಜ್ ಅವರ ಮೊದಲ ಪತ್ನಿ ಆಯೆಷಾ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ. ''ಮುಸ್ತಫಾ ರಾಜ್ ನನಗೆ ಈವರೆಗೂ ಕಾನೂನಾತ್ಮಕವಾಗಿ ವಿಚ್ಛೇದನ ನೀಡಿಲ್ಲ. ಹೀಗಾಗಿ, ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ಮದುವೆ ಅಸಿಂಧು'' ಎಂಬುದು ಆಯೆಷಾ ಹೇಳಿದ್ದಾರೆ.
'ಇ ಟೈಮ್ಸ್' ಮಾಡಿರುವ ವರದಿ ಪ್ರಕಾರತ ಕಾನೂನು ಪ್ರಕಾರ ಮುಸ್ತಫಾ ರಾಜ್ ಈಗಲೂ ನನ್ನ ಪತಿಯೇ. ನಾವಿನ್ನೂ ವಿಚ್ಛೇದನಕ್ಕೆ ಅರ್ಜಿಯೇ ಹಾಕಿಲ್ಲ. ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ಮದುವೆ ಅಮಾನ್ಯವಾಗಿದೆ. ಪ್ರಿಯಾಮಣಿ ಅವರನ್ನು ಮದುವೆಯಾಗುವಾಗ, ತಾವು ಬಾಚ್ಯುಲರ್ ಎಂದು ಕೋರ್ಟ್ನಲ್ಲಿ ಮುಸ್ತಫಾ ರಾಜ್ ಘೋಷಿಸಿಕೊಂಡಿದ್ದರು'' ಎಂದು ಮುಸ್ತಫಾ ರಾಜ್ ಮೊದಲ ಪತ್ನಿ ಆಯೆಷಾ ಹೇಳಿದ್ದಾರೆ.
ಮುಸ್ತಫಾ ರಾಜ್ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣವನ್ನೂ ಆಯೆಷಾ ದಾಖಲಿಸಿದ್ದಾರೆ. ಮುಸ್ತಫಾ ರಾಜ್ ಹಾಗೂ ಆಯೆಷಾ ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ.
ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ಮದುವೆ ಸಂದರ್ಭದಲ್ಲಿ ಆಯೆಷಾ ಸುಮ್ಮನೆ ಇದ್ದದ್ದು ಯಾಕೆ? ಎಂದು ಪ್ರಶ್ನೆ ಮಾಡಿದಾಗ, ಇಬ್ಬರು ಮಕ್ಕಳ ತಾಯಿಯಾಗಿ ನಾನೇನು ತಾನೆ ಮಾಡಲಿ? ಸೌಹಾರ್ದಯುತವಾಗಿ ಪರಿಹಾರ ಮಾಡಿಕೊಳ್ಳಲು ಪ್ರಯತ್ನ ಪಟ್ಟೆ. ಆದರೆ ಅದು ಕಾರ್ಯರೂಪಕ್ಕೆ ಬಾರದಿದ್ದಾಗ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ ಎಂದು ಆಯೆಷಾ ಹೇಳಿದ್ದಾರೆ. ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ವಿರುದ್ಧ ಆಯೆಷಾ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


