ಸಿನಿಮಾ ಸುದ್ದಿ

'ಕಾಕ್ಟೇಲ್': ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಚಿತ್ರೀಕರಣ ಸದ್ಯದಲ್ಲೆ ಆರಂಭ

"ಕಾಕ್ಟೇಲ್" ಎನ್ನುವ ಸಸ್ಪೆನ್ಸ್-ಥ್ರಿಲ್ಲರ್ ತಯಾರಿಯಲ್ಲಿರುವ ನಿರ್ದೇಶಕ ಶ್ರೀರಾಮ್ ಅವರ ಚೊಚ್ಚಲ ಚಿತ್ರವನ್ನು ಮಾಡಲಿದ್ದು ಕ್ರೈಂ ಥ್ರಿಲ್ಲರ್ ಕಥೆಯೂ ಆಗಿದೆ.

'ಕಾಕ್ಟೇಲ್': ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಚಿತ್ರೀಕರಣ ಸದ್ಯದಲ್ಲೆ ಆರಂಭ
ವಿರೇನ್ ಕೇಶವ್
Published On :

"ಕಾಕ್ಟೇಲ್" ಎನ್ನುವ ಸಸ್ಪೆನ್ಸ್-ಥ್ರಿಲ್ಲರ್ ತಯಾರಿಯಲ್ಲಿರುವ ನಿರ್ದೇಶಕ ಶ್ರೀರಾಮ್ ಅವರ ಚೊಚ್ಚಲ ಚಿತ್ರವನ್ನು ಮಾಡಲಿದ್ದು ಕ್ರೈಂ ಥ್ರಿಲ್ಲರ್ ಕಥೆಯೂ ಆಗಿದೆ.

ಐಎಎಸ್ ಅಧಿಕಾರಿ ಡಾ.ಶಿವಪ್ಪ ಬಂಡವಾಳ ಹೂಡಿರುವ ಈ ಚಿತ್ರವು ಜುಲೈ 21 ರಂದು ಸೆಟ್ಟೇರಲಿದೆ. "ಕಾಕ್ಟೈಲ್" ಚಿತ್ರವನ್ನು ಬೆಂಗಳೂರು ಮತ್ತು ಮಡಿಕೇರಿಯಲ್ಲಿ ಚಿತ್ರೀಕರಿಸಲಾಗುವುದು.

ಗಣೇಶ ಚತುರ್ಥಿ ಸಂದರ್ಭದಲ್ಲಿ ಆಗಸ್ಟ್‌ನಲ್ಲಿ ಮೊದಲ ಅಧಿಕೃತ ಟ್ರೇಲರ್ ಅನ್ನು ಹೊರತರಲು ತಯಾರಕರು ಯೋಜಿಸುತ್ತಿದ್ದಾರೆ. ಅನುರಾಗ್ ಕಶ್ಯಪ್ ಫಿಲ್ಮ್ ಇನ್ಸ್ಟಿಟ್ಯೂಟ್ ಅಡಿಯಲ್ಲಿ ತರಬೇತಿ ಪಡೆದ ವಿರೇನ್ ಕೇಶವ್, "ಕಾಕ್ಟೇಲ್" ಮೂಲಕ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಚಿತ್ರದ ನಾಯಕಿಯಾಗಿ ಚರಿಷ್ಮಾ ನಟಿಸುತ್ತಿದ್ದು ಇದು ಅವರಿಗೆ ಚೊಚ್ಚಲ ಚಿತ್ರವಾಗಿದೆ. ಲೋಕಿ ಸಂಗೀತ, ಹೃದಯ ಶಿವ ಗೀತ ಸಾಹಿತ್ಯ ಚಿತ್ರಕ್ಕಿದೆ. ಸಸ್ಪೆನ್ಸ್-ಥ್ರಿಲ್ಲರ್ ನಲ್ಲಿ ರವಿವರ್ಮ ಗಂಗು ಛಾಯಾಗ್ರಹಣ ಇರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.