'ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ. 'ರಿಚರ್ಡ್ ಆಂಟನಿ' ಮೂಲಕ ರಕ್ಷಿತ್ ಶೆಟ್ಟಿ ಉತ್ತರ!
ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಯೊಂದರ ವಿರುದ್ಧ ಅಸಮಾಧಾನ, ಆಕ್ರೋಶ ಹೊರಹಾಕಿದ್ದ ನಟ ರಕ್ಷಿತ್ ಶೆಟ್ಟಿ ಜುಲೈ 11ಕ್ಕೆ ಉತ್ತರ ಕೊಡುತ್ತೇನೆ ಎಂದಿದ್ದರು. ಅದಕ್ಕೀಗ ಇಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಬೆಂಗಳೂರು: ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಯೊಂದರ ವಿರುದ್ಧ ಅಸಮಾಧಾನ, ಆಕ್ರೋಶ ಹೊರಹಾಕಿದ್ದ ನಟ ರಕ್ಷಿತ್ ಶೆಟ್ಟಿ ಜುಲೈ 11ಕ್ಕೆ ಉತ್ತರ ಕೊಡುತ್ತೇನೆ ಎಂದಿದ್ದರು. ಅದಕ್ಕೀಗ ಇಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಡಿ ರಿಚರ್ಡ್ ಆಂಟನಿ ಸಿನೆಮಾ ಮಾಡುತ್ತಿದ್ದು ಅದರಲ್ಲಿ ಬರೀ ನಟನೆ ಮಾತ್ರವಲ್ಲದೆ ಸ್ವತಃ ನಿರ್ದೇಶನ ಕೂಡ ಮಾಡುತ್ತಿದ್ದಾರೆ. 'ಉಳಿದವರು ಕಂಡಂತೆ' ಚಿತ್ರದ ಕಥೆಯನ್ನು 'ರಿಚರ್ಡ್ ಆಂಟನಿ' ಮೂಲಕ ಮುಂದುವರಿಸಲಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೊಂಬಾಳೆ ಫಿಲ್ಮ್ಸ್ 9ನೇ ಸಿನಿಮಾ 'ದ್ವಿತ್ವ'ವನ್ನು ಘೋಷಿಸಿತ್ತು. ಪುನೀತ್ ರಾಜ್‌ಕುಮಾರ್ ನಾಯಕನಾಗಿ ಪವನ್ ಕುಮಾರ್ ನಿರ್ದೇಶನದ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದೀಗ ಸಂಸ್ಥೆಯ 10ನೇ ಸಿನೆಮಾವಾಗಿ ವಿಜಯ್ ಕಿರಗಂದೂರು ಅವರು ರಕ್ಷಿತ್ ಶೆಟ್ಟಿ ಜೊತೆ ಕೈ ಜೋಡಿಸಿದ್ದಾರೆ. 'ಉಳಿದವರು ಕಂಡಂತೆ' ಚಿತ್ರದ 'ರಿಚ್ಚಿ' ಪಾತ್ರದ ಮುಂದುವರಿದ ಭಾಗವೇ 'ರಿಚರ್ಡ್ ಆಂಟನಿ' ಎನ್ನಲಾಗಿದೆ.
ಇಂದು ಸೋಷಿಯಲ್ ಮೀಡಿಯಾ ಮೂಲಕ ಖುಷಿಯ ವಿಚಾರವನ್ನು ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿಯವರು, 'ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ... 'ರಿಚರ್ಡ್ ಆಂಟನಿ'- ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ.. ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ' ಎಂದು ಹೇಳಿಕೊಂಡಿದ್ದಾರೆ.
ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ...
"ರಿಚರ್ಡ್ ಆಂಟನಿ" - ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ.. ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


