ಸಿನಿಮಾ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ 'ದಿ ಸ್ಟೋರಿ ಆಫ್ ರಾಯಘಡ' ಫಸ್ಟ್ ಲುಕ್ ರಿಲೀಸ್ 

ಸಿಂಪಲ್ ಸುನಿ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸುತ್ತಿರುವ ದಿ ಸ್ಟೋರಿ ಆಫ್ ರಾಯಘಡ ಸಿನೆಮಾದ ಲುಕ್ ಬಿಡುಗಡೆಯಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ 'ದಿ ಸ್ಟೋರಿ ಆಫ್ ರಾಯಘಡ' ಫಸ್ಟ್ ಲುಕ್ ರಿಲೀಸ್ 
ರಾಯಘಡ ಚಿತ್ರದ ಫಸ್ಟ್ ಲುಕ್
Published On :

ಸಿಂಪಲ್ ಸುನಿ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸುತ್ತಿರುವ ದಿ ಸ್ಟೋರಿ ಆಫ್ ರಾಯಘಡ ಸಿನೆಮಾದ ಲುಕ್ ಬಿಡುಗಡೆಯಾಗಿದೆ.

ಇದುವರೆಗೆ ಇದ್ದ ರೊಮ್ಯಾಂಟಿಕ್ ಹೀರೋ, ಚಾಕ್ಲೇಟ್ ಬಾಯ್ ಲುಕ್ ನಿಂದ ಈ ಚಿತ್ರದಲ್ಲಿ ಸಂಪೂರ್ಣ ವಿಭಿನ್ನ ರಗಡ್ ನೋಟದಲ್ಲಿ ಈ ಚಿತ್ರದಲ್ಲಿ ಗಣೇಶ್ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ ಮತ್ತು ಗಣೇಶ್ ಜತೆಯಾಗುತ್ತಿರುವುದು ಇದು ಮೂರನೇ ಸಲ, ಈ ಹಿಂದೆ ಇಬ್ಬರ ಕಾಂಬಿನೇಷನ್ ನಲ್ಲಿ ಚಮಕ್ ಚಿತ್ರ ಬಂದಿತ್ತು. ನಂತರ ಸಖತ್ ಚಿತ್ರ ಘೋಷಣೆ ಮಾಡಿ ಅದರ ಕೆಲಸ ನಡೆಯುತ್ತಿದೆ.

80ರ ದಶಕದ ಕಾಮಿಡಿಯನ್ನು ಈ ಸಿನೆಮಾದಲ್ಲಿ ತೆರೆಯ ಮೇಲೆ ತರಲಾಗುತ್ತಿದೆ. ಇದರ ಶೂಟಿಂಗ್ ಮಾತ್ರ ಆರಂಭವಾಗುವುದು ಮುಂದಿನ ವರ್ಷ.

ನಿನ್ನೆ ಗಣೇಶ್ ಅವರ ಹುಟ್ಟುಹಬ್ಬ ಪ್ರಯುಕ್ತ ತ್ರಿಬಲ್ ರೈಡಿಂಗ್ ತಂಡ ಟೀಸರ್ ನ್ನು ಬಿಡುಗಡೆ ಮಾಡಿದೆ. ಮಹೇಶ್ ಗೌಡ ಇದರ ನಿರ್ದೇಶಕರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.