ಸೂಪರ್ ಸ್ಟಾರ್ ರಜನಿಕಾಂತ್ ಗೆ ಆ್ಯಕ್ಷನ್-ಕಟ್ ಹೇಳುವಾಸೆ: ನಟ ನಾನಿ
ಪರ್‌ಸ್ಟಾರ್ ರಜನಿಕಾಂತ್ ಅವರ ಸಿನಿಮಾಗ ನಿರ್ದೇಶಿಸುವ ಆಸೆ ಇದೆ ಎಂದರು. ನಾನಿ ರಜನಿ ಕಾಂತ್ ಅವರ ದೊಡ್ಡ ಅಭಿಮಾನಿ. ಅವರು ನಟಿಸಿದ ಚಿತ್ರಗಳಲ್ಲಿ ‘ಪಡೆಯಪ್ಪ’ (ನರಸಿಂಹ) ನನ್ನ ನೆಚ್ಚಿನ ಚಿತ್ರ ಎಂದು ಹೇಳಿದ್ದಾರೆ.

ಹೈದರಾಬಾದ್: ನ್ಯಾಚುರಲ್ ಸ್ಟಾರ್ ನಾನಿ ಸೂಪರ್ ಸ್ಟಾರ್ ಒಬ್ಬರ ಸಿನಿಮಾ ನಿರ್ದೇಶನ ಮಾಡುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಸೂಪರ್ ಸ್ಟಾರ್ ಎಂದರೆ ಎಲ್ಲರೂ ಅಂದುಕೊಳ್ಳುವುದು ತೆಲುಗಿನ ಸ್ಟಾರ್ ಹೀರೋ ಮಹೇಶ್ ಬಾಬು ಆದರೆ ಇವರು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್.
ಶ್ಯಾಮ್ ಸಿಂಗರೈ ಚಿತ್ರದಲ್ಲಿ ನಾನಿ, ಸಾಯಿ ಪಲ್ಲವಿ, ಕೃತಿ ಶೆಟ್ಟಿ ಮತ್ತು ಮಡೋನಾ ಸೆಬಾಸ್ಟಿಯನ್ ನಾಯಕಿಯರಾಗಿ ನಟಿಸಿದ್ದಾರೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಚಿತ್ರ ನಾಳೆ ತೆಲುಗು ಮತ್ತು ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕಾಲಿವುಡ್ ನಲ್ಲಿ ಚಿತ್ರತಂಡ ಪ್ರಚಾರ ನಡೆಸಿದೆ.
ಈ ವೇಳೆ ಮಾತನಾಡಿದ ನಾನಿ, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಿನಿಮಾಗ ನಿರ್ದೇಶಿಸುವ ಆಸೆ ಇದೆ ಎಂದರು. ನಾನಿ ರಜನಿ ಕಾಂತ್ ಅವರ ದೊಡ್ಡ ಅಭಿಮಾನಿ. ಅವರು ನಟಿಸಿದ ಚಿತ್ರಗಳಲ್ಲಿ ‘ಪಡೆಯಪ್ಪ’ (ನರಸಿಂಹ) ನನ್ನ ನೆಚ್ಚಿನ ಚಿತ್ರ ಎಂದು ಹೇಳಿದ್ದಾರೆ.
ನಾನಿ ಈ ಹಿಂದೆ ಲೆಜೆಂಡರಿ ಡೈರೆಕ್ಟರ್ ಮಣಿರತ್ನಂ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರು. ಅದೃಷ್ಟವಷಾತ್ ನಾನಿ ನಾಯಕನಟರಾಗಿದ್ದಾರೆ. ಇಲ್ಲದಿದ್ದಲ್ಲಿ ಡೈರೆಕ್ಟರ್ ಆಗಿ ಸಿನಿಮಾ ನಿರ್ದೇಶನ ಮಾಡುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


