ಸಿನಿಮಾ ಸುದ್ದಿ

‘ಮಹಾನಾಯಕ’ ಧಾರಾವಾಹಿ: ನಾಳೆಯಿಂದ ಅಂಬೇಡ್ಕರ್ ಜೀವನದ ಮತ್ತೊಂದು ಘಟ್ಟದ ಕಥಾನಕ

ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ಮಹಾನಾಯಕ ಅಂಬೇಡ್ಕರ್ ಧಾರಾವಾಹಿಯ ಹೊಸ ಪ್ರೋಮೋವನ್ನು ಮುಖ್ಯಮಂತ್ರಿ ಬಸವರಾಜ...

‘ಮಹಾನಾಯಕ’ ಧಾರಾವಾಹಿ: ನಾಳೆಯಿಂದ ಅಂಬೇಡ್ಕರ್ ಜೀವನದ ಮತ್ತೊಂದು ಘಟ್ಟದ ಕಥಾನಕ
ಮಹಾನಾಯಕ ಹೊಸ ಪ್ರೋಮೋ
Published On :

ಬೆಂಗಳೂರು: ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ಮಹಾನಾಯಕ ಅಂಬೇಡ್ಕರ್ ಧಾರಾವಾಹಿಯ ಹೊಸ ಪ್ರೋಮೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನಾವರಣಗೊಳಿಸಿದ್ದಾರೆ.

‘ಮಹಾನಾಯಕ ಬಿ.ಆರ್​. ಅಂಬೇಡ್ಕರ್‌ʼ ಧಾರಾವಾಹಿ ತನ್ನದೇ ಛಾಪು ಮೂಡಿಸಿದ್ದು, ಇಷ್ಟು ದಿನಗಳ ಕಾಲ ಅಂಬೇಡ್ಕರ್​ ಅವರ ಬಾಲ್ಯಾವಸ್ಥೆಯ ಕಥೆ ಸಾಗುತ್ತಿತ್ತು. ಈಗ ಅಂಬೇಡ್ಕರ್‌ ಜೀವನದ ಮತ್ತೊಂದು ಘಟ್ಟವನ್ನು ತೋರಿಸಲು ಜೀ ಕನ್ನಡ ವಾಹಿನಿ ಸಜ್ಜಾಗಿದೆ. ನಾಳೆ ಶುಕ್ರವಾರ ಆಗಸ್ಟ್ 20 ರಿಂದ ಈ ಎಪಿಸೋಡ್​ಗಳು ಬಿತ್ತರಗೊಳ್ಳಲಿವೆ.

ಇದರ ಪ್ರೋಮೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಬಿಡುಗಡೆ ಮಾಡಿರುವುದು ವಿಶೇಷ. ಆ ಮೂಲಕ ‘ಮಹಾನಾಯಕ’ ಸೀರಿಯಲ್​ಗೆ ದೊಡ್ಡ ಬೆಂಬಲ ಸಿಕ್ಕಂತಾಗಿದೆ.

‘ದೇಶ ಸ್ವಾತಂತ್ರ್ಯ ಪಡೆದ 75ನೇ ವರ್ಷದ ಸಂದರ್ಭದಲ್ಲಿ ಯುವ ಅಂಬೇಡ್ಕರ್ ಅವರ ಜೀವನಗಾಥೆ ಹೇಳುವ ‘ಮಹಾನಾಯಕ ಅಂಬೇಡ್ಕರ್‌’ ಧಾರಾವಾಹಿಯ ವಿಶೇಷ ಪ್ರೊಮೋವನ್ನು ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಅಭೂತಪೂರ್ವ ಯಶಸ್ಸು ನೀಡಿದ ಜೀ ಕನ್ನಡ ವೀಕ್ಷಕರಿಗೆ ನಮ್ಮ ಕೃತಜ್ಞತೆಗಳು. ಮಹಾನಾಯಕನ ಬಾಲ್ಯದ ಜೀವನ, ಅವರ ಹೋರಾಟದ ಬದುಕಿನ ಕಥೆಗೆ ನೀಡಿದಂತಹ ಬೆಂಬಲವನ್ನು ಯುವ ಅಂಬೇಡ್ಕರ್ ಕಥೆಗೂ ನೀಡಿ ಆದರಿಸುತ್ತಾರೆ ಎಂಬ ಭರವಸೆ ನಮ್ಮದು’ ಎಂದು ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.