ಸಿನಿಮಾ ಸುದ್ದಿ

ನನ್ನನ್ನು ರೇಪ್ ಮಾಡಿ, ಕೊಲೆ ಮಾಡ್ತಾರಂತೆ: ಬಿಜೆಪಿ ಐಟಿ ಸೆಲ್ ವಿರುದ್ಧ ನಟ ಸಿದ್ಧಾರ್ಥ್ ಆಕ್ರೋಶ

ತಮಿಳುನಾಡು ಬಿಜೆಪಿ ಹಾಗೂ ಬಿಜೆಪಿಯ ಐಟಿ ಸೆಲ್ ನವರು ನನ್ನ ಮೊಬೈಲ್ ನಂಬರ್ ಅನ್ನು ಲೀಕ್ ಮಾಡಿದ್ದು ಹೀಗಾಗಿ ನನಗೆ ನೂರಾರು ಕರೆಗಳು ಬರುತ್ತಿವೆ. ನನ್ನನ್ನು ರೇಪ್ ಮಾಡಿ ಕೊಲೆ ಮಾಡುವ ಕರೆಗಳೇ ಹೆಚ್ಚಾಗಿವೆ ಎಂದು ತಮಿಳು ನಟ ಸಿದ್ದಾರ್ಥ್ ಆರೋಪಿಸಿದ್ದಾರೆ.

ನನ್ನನ್ನು ರೇಪ್ ಮಾಡಿ, ಕೊಲೆ ಮಾಡ್ತಾರಂತೆ: ಬಿಜೆಪಿ ಐಟಿ ಸೆಲ್ ವಿರುದ್ಧ ನಟ ಸಿದ್ಧಾರ್ಥ್ ಆಕ್ರೋಶ
ಸಿದ್ದಾರ್ಥ್
Published On :

ಚೆನ್ನೈ: ತಮಿಳುನಾಡು ಬಿಜೆಪಿ ಹಾಗೂ ಬಿಜೆಪಿಯ ಐಟಿ ಸೆಲ್ ನವರು ನನ್ನ ಮೊಬೈಲ್ ನಂಬರ್ ಅನ್ನು ಲೀಕ್ ಮಾಡಿದ್ದು ಹೀಗಾಗಿ ನನಗೆ ನೂರಾರು ಕರೆಗಳು ಬರುತ್ತಿವೆ. ನನ್ನನ್ನು ರೇಪ್ ಮಾಡಿ ಕೊಲೆ ಮಾಡುವ ಕರೆಗಳೇ ಹೆಚ್ಚಾಗಿವೆ ಎಂದು ತಮಿಳು ನಟ ಸಿದ್ದಾರ್ಥ್ ಆರೋಪಿಸಿದ್ದಾರೆ. 

ನಟ ಸಿದ್ದಾರ್ಥ್ ಈ ಕುರಿತು ಟ್ವೀಟ್ ಮಾಡಿದ್ದು, ತಮಿಳುನಾಡಿನ ಬಿಜೆಪಿ ಐಟಿ ಸೆಲ್ ನವರು ನನ್ನ ಮೊಬೈಲ್ ಸಂಖ್ಯೆಯನ್ನು ಲೀಕ್ ಮಾಡಿದ್ದಾರೆ. ಹೀಗಾಗಿ ನನಗೆ ನೂರಾರು ಕರೆಗಳು ಬರುತ್ತಿವೆ. ನಿಂದನೆ, ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಕರೆಗಳು ಹೆಚ್ಚಾಗಿವೆ. ಕಳೆದ 24 ಗಂಟೆಗಳಿಂದ ನನಗೆ ಹಾಗೂ ನನ್ನ ಕುಟುಂಬದವರಿಗೂ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಬಿಜೆಪಿಯ ಲಿಂಕ್ ಹಾಗೂ ಡಿಪಿಗಳೊಂದಿಗೆ ಎಲ್ಲಾ ನಂಬರ್ ಗಳನ್ನು ದಾಖಲಿಸಿಕೊಂಡಿದ್ದು ಅವುಗಳನ್ನು ಪೊಲೀಸರಿಗೆ ಹಸ್ತಾಂತರಿಸುತ್ತಿದ್ದೇನೆ. ನಾನು ಸುಮ್ಮನಿರುವುದಿಲ್ಲ. ನನ್ನ ಕೈಲಾದ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿರುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಲ್ಲದೆ ಅವರ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.