ಸಿನಿಮಾ ಸುದ್ದಿ

ಕೊರೋನಾ ಬಂದಿರೋ ನಾನು ಸತ್ತರೆ ಸರ್ಕಾರದ ಮಂತ್ರಿಗಳೇ ಹೊಣೆ: ಫೇಸ್‌ಬುಕ್ ಲೈವ್ ನಲ್ಲಿ 'ಮಠ' ನಿರ್ದೇಶಕ ಗುರುಪ್ರಸಾದ್ ಖಡಕ್ ಮಾತು

"ಮಠ" ನಿರ್ದೇಶಕ ಗುರುಪ್ರಸಾದ್ ಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಫೇಸ್‌ಬುಕ್ ಲೈವ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಗುರುಪ್ರಸಾದ್ ಒಂದು ವೇಳೆ ನಾನು ಕೊರೋನಾದಿಂದ ಸತ್ತರೆ ಅದಕ್ಕೆ ಈ ಸರ್ಕಾರದ ಮಂತ್ರಿಗಳೇ ಹೊಣೆ ಎಂದು ಎಚ್ಚರಿಸಿದ್ದಾರೆ.

ಕೊರೋನಾ ಬಂದಿರೋ ನಾನು ಸತ್ತರೆ ಸರ್ಕಾರದ ಮಂತ್ರಿಗಳೇ ಹೊಣೆ: ಫೇಸ್‌ಬುಕ್ ಲೈವ್ ನಲ್ಲಿ 'ಮಠ' ನಿರ್ದೇಶಕ ಗುರುಪ್ರಸಾದ್ ಖಡಕ್ ಮಾತು
ನಿರ್ದೇಶಕ ಗುರುಪ್ರಸಾದ್
Published On :

"ಮಠ" ನಿರ್ದೇಶಕ ಗುರುಪ್ರಸಾದ್ ಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಫೇಸ್‌ಬುಕ್  ಲೈವ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಗುರುಪ್ರಸಾದ್ ಒಂದು ವೇಳೆ ನಾನು ಕೊರೋನಾದಿಂದ ಸತ್ತರೆ ಅದಕ್ಕೆ ಈ ಸರ್ಕಾರದ ಮಂತ್ರಿಗಳೇ ಹೊಣೆ ಎಂದು ಎಚ್ಚರಿಸಿದ್ದಾರೆ.

"ನಾನು ಕೊರೋನಾ ಪಾಸಿಟಿವ್ ಬಂದಿರೋ ನೋವಿನಲ್ಲಿ ಮಾತನಾಡುತ್ತಿದ್ದೇನೆ. ನನ್ನ ಮನೆಯವರೆಗೆ ಕೊರೋನಾವನ್ನು ತಂದು ಬಿಟ್ಟ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ ಸೇರಿ ಎಲ್ಲರಿಗೆ ಧನ್ಯವಾದ.

"ಒಂದೊಂದು ಮನೆಗೂ ವೈರಸ್ ಹಂಚುತ್ತಿದ್ದೀರಲ್ಲಾ, ನನಗೆ ವೈರಸ್ ತಂದು ಕೊಟ್ಟವರಿಗೆ ಧಿಕ್ಕಾರವಿರಲಿ. ರಾಜಕೀಯ ಅನ್ನೋದು ಬ್ಯುಸಿನೆಸ್ ಅಲ್ಲ, ಮನೆ ಮನೆಯಲ್ಲಿಯೂ ಕೊರೋನಾದಿಂದ ಸಾಯುತ್ತಿರುವುದಕ್ಕೆ ಆರೋಗ್ಯ ಸಚಿವ ಸುಧಾಕರ್, ಸಿಎಂ ಯಡಿಯೂರಪ್ಪ ಅವರೇ ಕಾರಣ, ರಾಜಕಾರಣಿಗಳಾರೂ ಸಾಚಾಗಳಲ್ಲ.

"ಇದು ನನ್ನ ಡೆತ್ ನೋಟ್" ಎಂದಿರುವ ಗುರುಪ್ರಸಾದ್ ಜಾರಕಿಹೋಳಿ ಸಿಡಿ ಬಗ್ಗೆ ಸಹ ಮಾತನಾಡಿದ್ದಾರೆ. "ಜಾರಕಿಹೋಳಿ ಸಿಡಿ ಬಗ್ಗೆ ದಿನವಿಡೀ ತೋರಿಸುವ ಅಗತ್ಯವೇನಿದೆ? ಅದು ಪ್ರಕೃತಿ-ಪುರುಷನ ಸಹಜ ಧರ್ಮ, ಅದು ನಮಗೇಕೆ ಬೇಕು? ನಮಗೆ ಬೇಕಾದ್ದು ಪ್ರತಿಯೊಬ್ಬರನ್ನೂ ಸಾಕುವುದು, ರಕ್ಷಿಸುವುದು. ಪ್ರತಿ ಪ್ರಜೇಗಳಿಗೆ ತೊಂದರೆ ಏನಿದೆ ನೋಡಿ ಪರಿಹರಿಸಬೇಕು" ಎಂದಿದ್ದಾರೆ.

"ದುಡ್ಡು ಮುಖ್ಯವಲ್ಲ, ಮನುಷ್ಯ ಮುಖ್ಯ, ಮೆಡಿಕಲ್ ಮಾಫಿಯಾ ಮಾಡಬೇಡಿ. ಹಾನೆಸ್ಟ್ ಆಗಿ ದುಡಿಯುವವರ ಶಾಪಗಳು ನಿಮ್ಮನ್ನು ಸುಮ್ಮನೆ ಬಿಡಲಾರದು" ಎಂದು ಅವರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.