ಸಿನಿಮಾ ಸುದ್ದಿ

ಅಜೇಯ ರಾವ್ ನಟನೆಯ 'ಕೃಷ್ಣ ಟಾಕೀಸ್' ಲೇಟಾಗ್ಬಂದ್ರೂ ಲೇಟೆಸ್ಟಾಗಿದೆ: ನಿರ್ಮಾಪಕ ಗೋವಿಂದರಾಜು

ಕೃಷ್ಣ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಪಂಚತಾರಾ ಹೋಟೆಲ್ ನಲ್ಲಿ ಇತ್ತೀಚೆಗೆ ನೆರವೇರಿತು.

ಅಜೇಯ ರಾವ್ ನಟನೆಯ 'ಕೃಷ್ಣ ಟಾಕೀಸ್' ಲೇಟಾಗ್ಬಂದ್ರೂ ಲೇಟೆಸ್ಟಾಗಿದೆ: ನಿರ್ಮಾಪಕ ಗೋವಿಂದರಾಜು
ಕೃಷ್ಣ ಟಾಕೀಸ್
Published On :

ಬೆಂಗಳೂರು: ಕೃಷ್ಣ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಪಂಚತಾರಾ ಹೋಟೆಲ್ ನಲ್ಲಿ ಇತ್ತೀಚೆಗೆ ನೆರವೇರಿತು. 

ವರ್ಣರಂಜಿತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಈ ಹಿಂದೆ ಅಜಯ್ ರಾವ್ ಅವರ ಜೊತೆ ಕೃಷ್ಣ ಸೀರೀಸ್ ನಲ್ಲಿ ಚಿತ್ರಗಳನ್ನು ಮಾಡಿದ ನಿರ್ಮಾಪಕರು ಹಾಗೂ ನಿರ್ದೇಶಕರು ಭಾಗವಹಿಸಿದ್ದರು.

ವಿಜಯಾನಂದ್ (ಆನಂದಪ್ರಿಯ) ಅವರ ನಿರ್ದೇಶನದ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದ್ದು, ಹಾಡುಗಳು ಹಾಗೂ ಟೀಸರ್, ಟ್ರೇಲರ್ ಮೂಲಕ ಪೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.  

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಗೋವಿಂದರಾಜು ಒಮ್ಮೆ ನಿರಂತ್ ಕಥೆ ಬಗ್ಗೆ ಹೇಳಿದರು. ಅವರ ಮೂಲಕ ಆನಂದಪ್ರಿಯ ಮೀಟ್ ಆಗಿ ಕಥೆ ಕೇಳಿದಾಗ ಈ ಸಿನಿಮಾ ನಾನೇ ಮಾಡಬೇಕು ಎಂದು ಆರಂಭಿಸಿದೆ. 

ಅಲ್ಲದೆ ಈ ಚಿತ್ರ ಇಲ್ಲೀವರೆಗೆ ಬರಲು ನಾನೊಬ್ಬನೇ ಕಾರಣನಲ್ಲ, ಆರ್ ಕೆ ಟಾಕೀಸ್ ನ  ಕೃಷ್ಣ ಸೇರಿದಂತೆ ಇತರರೆಲ್ಲ ಕೈಜೋಡಿಸಿದ್ದರಿಂದ ಕಂಪ್ಲೀಟ್ ಆಗಿದೆ. ಕೋವಿಡ್ ನಿಂದ ಸ್ವಲ್ಪ ಲೇಟಾದರೂ ಲೇಟೆಸ್ಟಾಗಿ ಬರುತ್ತಿದೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.