ಸಿನಿಮಾ ಸುದ್ದಿ

ನಿರ್ದೇಶಕ ಎಸ್.ರವೀಂದ್ರನಾಥ್ ಚಿತ್ರದಲ್ಲಿ ಜೋಡಿಯಾದ ಧನಂಜಯ್- ರಚಿತಾ ರಾಮ್!

ಧನಂಜಯ್ ಮತ್ತು ರಚಿತಾ ರಾಮ್ ಪ್ರಸ್ತುತ ತಮ್ಮ ಮುಂಬರುವ ರೊಮ್ಯಾಂಟಿಕ್ ಡ್ರಾಮಾಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ, ಇದನ್ನು "ಪುಷ್ಪಕ ವಿಮಾನ"ರ್ದೇಶಕ ಎಸ್.ರವೀಂದ್ರನಾಥ್ ಅವರು ಕರಾವಳಿ ಕರ್ನಾಟಕದ ಕುಂದಾಪುರದಲ್ಲಿ ಚಿತ್ರೀಕರಿಸಿದ್ದಾರೆ.

ನಿರ್ದೇಶಕ ಎಸ್.ರವೀಂದ್ರನಾಥ್ ಚಿತ್ರದಲ್ಲಿ ಜೋಡಿಯಾದ ಧನಂಜಯ್- ರಚಿತಾ ರಾಮ್!
ರಚಿತಾ ರಾಮ್ ಧನಂಜಯ್
Published On :

ಧನಂಜಯ್ ಮತ್ತು ರಚಿತಾ ರಾಮ್ ಪ್ರಸ್ತುತ  ತಮ್ಮ ಮುಂಬರುವ ರೊಮ್ಯಾಂಟಿಕ್ ಡ್ರಾಮಾ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ, ಇದನ್ನು "ಪುಷ್ಪಕ ವಿಮಾನ"ರ್ದೇಶಕ ಎಸ್.ರವೀಂದ್ರನಾಥ್ ಅವರು ಕರಾವಳಿ ಕರ್ನಾಟಕದ ಕುಂದಾಪುರದಲ್ಲಿ ಚಿತ್ರೀಕರಿಸಿದ್ದಾರೆ.

ಸೆಪ್ಟೆಂಬರ್ 19 ರಂದು ಶೂಟಿಂಗ್ ಪ್ರಾರಂಭಿಸಿದ ತಂಡವು ಮೊದಲ ಶೆಡ್ಯೂಲ್ ಅನ್ನು  15 ದಿನಗಳಲ್ಲಿ ಮುಗಿಸಲು ಯೋಜಿಸಿದೆ. ವಿಖ್ಯಾತ್ ಚಿತ್ರ ಅವರ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದ್ದು, ಇದರಲ್ಲಿ ರಚಿತಾ ಹಾಗೂ ಧನಂಜಯ್ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಅವರು ರೆಟ್ರೊ ಹಿನ್ನೆಲೆಯ ಕಥೆ ಹೊಂದಿದ್ದು ಈ ಮುನ್ನ ಮಾಡಿರದ ವಿಶೇಷ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ.  ತಂಡವು ಫೋಟೋ ಶೂಟ್ ಪೂರ್ಣಗೊಳಿಸಿದ್ದು ನಿರ್ಮಾಪಕರು ಚಿತ್ರದ ಶೀರ್ಷಿಕೆಯನ್ನು ಮಾತ್ರ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

"ಯುವರತ್ನ" ಮತ್ತು "ಪೊಗರು" ಬಿಡುಗಡೆಗಾಗಿ ಕಾಯುತ್ತಿರುವ ನಟ ಧನಂಜಯ್ ಬಡವ ರ್ಯಾಸ್ಕಲ್" ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣವನ್ನು ಬಾಕಿ ಉಳಿಸಿಸಿದ್ದಾರೆ.  ಅಕ್ಟೋಬರ್ ಮೊದಲ ವಾರದಲ್ಲಿ ತಂಡವು  ಈ ಭಾಗದ ಚಿತ್ರೀಕರಣ ಪೂರ್ಣಗೊಳಿಸಲು ಉದ್ದೇಶಿಸಿದೆ. ರೋಹಿತ್ ಪಡಕಿಯ "ರತ್ನನ್ ಪ್ರಪಂಚ" ಚಿತ್ರದ ಚಿತ್ರೀಕರಣಕ್ಕೆ ನಟ ಸಜ್ಜಾಗಿದ್ದು, ಏಕಕಾಲದಲ್ಲಿ "ಹೆಡ್ ಬುಷ್" ಎಂಬ  ಚಿತ್ರದಲ್ಲಿಎಂಪಿ ಜಯರಾಜ್ ಪಾತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.