ಅನುದಿನವೂ ನಮ್ಮೊಳಗಿನ ಶಕ್ತಿಯಾಗಿ ಮುನ್ನಡೆಸುತ್ತಿರುವಿರಿ: ವಿಷ್ಣು ಜನ್ಮದಿನದಂದು ಸಾಹಸ ಸಿಂಹನ ನೆನೆದ ಅನಿರುದ್ಧ್
"ಮಗನಾಗಿ, ಅವರ ಗುಣಗಳಿಗೆ ಅಭಿಮಾನಿಯಾಗಿ ಕೋಟಿ ನೆನಪುಗಳು.. ಅವರ ಸರಳತನ, ಅವರ ನಿಷ್ಕಲ್ಮಶ ಮನಸ್ಸು.. ಅವರ ಮುಗ್ಧತೆ.. ಅವರ ಔದಾರ್ಯ.. ಅವರ ಸಜ್ಜನಿಕೆ.. ಬಹುಶಃ ಒಬ್ಬ ವ್ಯಕ್ತಿ ಮತ್ತೊಬ್ಬರ ಜೀವನಕ್ಕೆ ಸ್ಪೂರ್ತಿಯಾಗಿ ಸಾಧಿಸಲು ಪ್ರಮುಖ ಕಾರಣಕರ್ತರಾಗುವವರೆಂದರೆ ನನಗೆ ಅದು ನೀವೆ." ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ, ನಟ ಅನಿರುದ್ಧ್ ಹೇಳಿದ್ದಾರೆ.

"ಮಗನಾಗಿ, ಅವರ ಗುಣಗಳಿಗೆ ಅಭಿಮಾನಿಯಾಗಿ ಕೋಟಿ ನೆನಪುಗಳು.. ಅವರ ಸರಳತನ, ಅವರ ನಿಷ್ಕಲ್ಮಶ ಮನಸ್ಸು.. ಅವರ ಮುಗ್ಧತೆ.. ಅವರ ಔದಾರ್ಯ.. ಅವರ ಸಜ್ಜನಿಕೆ.. ಬಹುಶಃ ಒಬ್ಬ ವ್ಯಕ್ತಿ ಮತ್ತೊಬ್ಬರ ಜೀವನಕ್ಕೆ ಸ್ಪೂರ್ತಿಯಾಗಿ ಸಾಧಿಸಲು ಪ್ರಮುಖ ಕಾರಣಕರ್ತರಾಗುವವರೆಂದರೆ ನನಗೆ ಅದು ನೀವೆ." ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ, ನಟ ಅನಿರುದ್ಧ್ ಹೇಳಿದ್ದಾರೆ.
ಇಂದು ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ ಎಪ್ಪತ್ತನೇ ಜನ್ಮದಿನೋತ್ಸವ ಇರುವ ಹಿನ್ನೆಲೆಯಲ್ಲಿ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ವಿಷ್ಣುವರ್ಧನ್ ಅವರನ್ನು ಸಮಿಸಿದ ನಟ "ನನಗೆ ಸ್ಫೂರ್ತಿ ಎಂದರೆ ನೀವೆ" ಎಂದಿದ್ದಾರೆ.
"ಮಗನಾಗಿ, ಅವರ ಗುಣಗಳಿಗೆ ಅಭಿಮಾನಿಯಾಗಿ ಕೋಟಿ ನೆನಪುಗಳು.. ಅವರ ಸರಳತನ, ಅವರ ನಿಷ್ಕಲ್ಮಶ ಮನಸ್ಸು.. ಅವರ ಮುಗ್ಧತೆ.. ಅವರ ಔದಾರ್ಯ.. ಅವರ ಸಜ್ಜನಿಕೆ.. ಬಹುಶಃ ಒಬ್ಬ ವ್ಯಕ್ತಿ ಮತ್ತೊಬ್ಬರ ಜೀವನಕ್ಕೆ ಸ್ಪೂರ್ತಿಯಾಗಿ ಸಾಧಿಸಲು ಪ್ರಮುಖ ಕಾರಣಕರ್ತರಾಗುವವರೆಂದರೆ ನನಗೆ ಅದು ನೀವೆ.. ಎಂದೂ ನೀವಿಲ್ಲವೆಂದುಕೊಂಡಿಲ್ಲ.. ಅನುದಿನವೂ ನಮ್ಮೊಳಗಿನ ಶಕ್ತಿಯಾಗಿ ಮುನ್ನಡೆಸುತ್ತಿರುವಿರಿ.. ಜನ್ಮದಿನವಿಂದು.. ಚಿಕ್ಕವನು ನಾನು.. ನಾನೇನನು ಹೇಳಲಿ.. ಎಲ್ಲರಿಗೂ ನಿಮ್ಮ ಆಶೀರ್ವಾದವಿರಲಿ.. ಎಂದಿನಂತೆ ಕೈ ಹಿಡಿದು ಮುನ್ನಡೆಸಿ.. #Anirudh #HBDTheLegend" ಎಂದು ನಟ ಅನಿರುದ್ಧ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನು ವಿಷ್ಣುವರ್ಧನ್ ಜನ್ಮದಿನದಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್, ಧನಂಜಯ್ ಸೇರಿ ಸ್ಯಾಂಡಲ್ ವುಡ್ ನಟ, ನಟಿಯರು, ನಿರ್ದೇಶಕರು ಅವರನ್ನು ಸ್ಮರಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


